Ad Widget .

ಸುಳ್ಯ: ಕನಕಮಜಲಿನಿಂದ ಜಾಲ್ಸೂರಿನ ತನಕ ಬೃಹತ್ ಪಂಜಿನ ಮೆರವಣಿಗೆ

ಸಮಗ್ರ ನ್ಯೂಸ್: ಜಾಲ್ಸೂರು ವಲಯ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯು ಕನಕಮಜಲಿನಿಂದ ಜಾಲ್ಸೂರಿನ ತನಕ ಆ.13ರಂದು ಸಂಜೆ ಜರುಗಿತು.

Ad Widget . Ad Widget .

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಿಂದ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಹೊರಟ ಬೃಹತ್ ಪಂಜಿನ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಜಾಲ್ಸೂರಿನವರೆಗೆ ಸಾಗಿ ಬಂದಿತು.

Ad Widget . Ad Widget .

ಬಳಿಕ ಜಾಲ್ಸೂರಿನ ಶ್ರೀನಿವಾಸ್ ಕಾಂಪ್ಲೆಕ್ಸ್ ವಠಾರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಾಲ್ಸೂರು ವಲಯದ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ತೀರ್ಥರಾಮ ಬಾಳೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಸಂಯೋಜಕ್ ಮಹೇಶ್ ಕಡಗದಾಳು ಅವರು ದಿಕ್ಸೂಚಿ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಸಂಯೋಜಕ್ ಮಹೇಶ್ ಉಗ್ರಾಣಿಮನೆ, ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಹಸಂಯೋಜಕ್ ರಾಜೇಶ್ ಪಂಚೋಡಿ, ಶ್ರೀನಿವಾಸ ಕಾಂಪ್ಲೆಕ್ಸ್ ಮಾಲಕ ಶ್ರೀನಿವಾಸ ಭಟ್ ಕಜೆಗದ್ದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸೇವಾ ಪ್ರಮುಖ್ ನ. ಸೀತಾರಾಮ ಸೇರಿದಂತೆ ಹಿಂದೂ ಜಾಗರಣ ವೇದಿಕೆಯ ಜಾಲ್ಸೂರು ವಲಯಕ್ಕೊಳಪಡುವ ಜಾಲ್ಸೂರು ಕನಕಮಜಲು, ಅಜ್ಜಾವರ ಹಾಗೂ ಮಂಡೆಕೋಲು ವಲಯದ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ಸೇರಿದಂತೆ ಸುಮಾರು ಇನ್ನೂರಕ್ಕೂ ಅಧಿಕ ಮಂದಿ ಹಿಂದೂ ಬಾಂಧವರು ಬೃಹತ್ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *