Ad Widget .

ಸುಳ್ಯದ ಆಡಳಿತಕ್ಕೆ ಭ್ರಮೆಯೋ? ಸುಳ್ಯಕ್ಕೆ ‌ಭ್ರಮೆಯೋ? ಕೀಬೋರ್ಡ್ ವಾರಿಯರ್ ಜೊತೆ ನ.ಪಂ ಅಧ್ಯಕ್ಷರ ಟಾಕ್ ವಾರ್!

ಸಮಗ್ರ ನ್ಯೂಸ್: ಜಾಲತಾಣಗಳಲ್ಲಿ ಸಮಸ್ಯೆ ಮುಂದಿಟ್ಟ ಆರ್.ಜೆ ತ್ರಿಶೂಲ್ ಗೆ ಕೀಬೋರ್ಡ್ ವಾರಿಯರ್ ಎಂದು ಕಮೆಂಟ್ ಹಾಕಿದ ಸುಳ್ಯ ನ.ಪಂ‌ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮತ್ತೆ ಟ್ರೋಲಿಗೆ ಒಳಗಾಗಿದ್ದಾರೆ.

Ad Widget . Ad Widget .

ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮತ್ತು ತ್ರಿಶೂಲ್ ನಡುವೆ ಮತ್ತೊಂದು ಟಾಕ್ ವಾರ್ ನಡೆದಿದ್ದು ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಹುಟ್ಟು ಹಾಕಿದೆ.

Ad Widget . Ad Widget .

ಸುಳ್ಯ ನಗರದ ಹೃದಯ ಭಾಗದಲ್ಲಿ ಇರುವಂತಹ ಗುಂಡಿ ರಸ್ತೆಗಳ ಕುರಿತಂತೆ ಈ ಫೋನ್ ಸಂಭಾಷಣೆ ನಡೆದಿದ್ದು, ಮಾತಿನ ನಡುವೆ ವಿನಯಕುಮಾರ್ ಕಂದಡ್ಕ ‘ ನೀವು ಭ್ರಮೆಯಲ್ಲಿದ್ದೀರಿ, ನೀವು ಹೇಳಿದಂತೆ ನಾವು ಕೇಳೋದಕ್ಕಾಗಲ್ಲ’ ಎಂದಿದ್ದಾರೆ.

ಸರ್ಕಾರದ ಯೋಜನೆಗಳು ಮನೆಯಲ್ಲಿನ ಅಡಿಕೆ ಮಾರಿ ಕೆಲಸ ಮಾಡಿದಂತಲ್ಲ‌. ಅದಕ್ಕೆ ಅದರದ್ದೇ ಆದ ಪ್ರೊಸೆಸ್ ಗಳಿವೆ ಎಂದು ನ.ಪಂ ಅಧ್ಯಕ್ಷರು ಹೇಳಿದ್ದು ಕುಣಿಯಲು ಬಾರದವ ಅಂಗಳ ಡೊಂಕು ಎಂದಂತಾಗಿದೆ.

ಸಮಸ್ಯೆಗಳ ಕುರಿತು ಹೇಳಿದಾಗ ಸರಿಯಾಗಿ ಸ್ಪಂದಿಸದೇ ಉದ್ದಟತನದಿಂದ ಮಾತನಾಡಿದ ವಿನಯಕುಮಾರ್, ಸಮಯ ಬಂದಾಗ ಮಾತ್ರ ಕೆಲಸ‌ ಮಾಡುತ್ತೇವೆ. ನೀವು ಹೇಳಿದಾಗೆಲ್ಲ ಕೇಳಲಾಗದು’ ಎಂದಿದ್ದಾರೆ.

ಇದಕ್ಕೆ ಖಾರವಾಗಿಯೇ ಉತ್ತರಿಸಿದ ತ್ರಿಶೂಲ್ ‘ಹಾಗಿದ್ದಲ್ಲಿ ನೀವು ಆ ಸೀಟ್ ನಲ್ಲಿ ಕುಳಿತುಕೊಳ್ಳಲು ಯೋಗ್ಯರಲ್ಲ. ಸಮಸ್ಯೆಗಳ ಕುರಿತು ಲೈವ್ ಆಗಿ‌ ಮಾತಾಡೋಣ, ಸ್ಥಳಕ್ಕೆ ಬನ್ನಿ’ ಎಂದಿದ್ದಾರೆ.

ತ್ರೀಶೂಲ್ ಮತ್ತು ವಿನಯಕುಮಾರ್ ನಡುವಿನ ಆಡಿಯೋ ಸಂಭಾಷಣೆಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://fb.watch/eUPgTa3UNg/

Leave a Comment

Your email address will not be published. Required fields are marked *