Ad Widget .

ಕುದ್ರೋಳಿ ಕ್ಷೇತ್ರದ ಆವರಣದಲ್ಲಿ ದಾಖಲೆ ಬರೆದ ತ್ರಿವರ್ಣ ಧ್ವಜದ ಚಿತ್ರಾಕೃತಿ

ಮಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ಬಳಸಿ ರಚಿಸಿದ ತ್ರಿವರ್ಣ ಧ್ವಜದ ಚಿತ್ರಾಕೃತಿ ಎಲ್ಲರ ಗಮನಸೆಳೆಯುತ್ತಿದ್ದು, ಬರೋಬ್ಬರಿ 900 ಕೆ.ಜಿ‌ ಧಾನ್ಯಗಳನ್ನು ಬಳಸಿ ಇದನ್ನು ರಚಿಸಿರುವುದು ಮತ್ತೊಂದು ದಾಖಲೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಲಾವಿದ ಹಾಗೂ ಛಾಯಾಗ್ರಾಹಕ ಪುನಿಕ್ ಶೆಟ್ಟಿ ಅವರ ನೇತೃತ್ವದಲ್ಲಿ ಗುರುಬೆಳದಿಂಗಳು ಸಮಿತಿಯ ಮೂವತ್ತು ಸದಸ್ಯರು ಸೇರಿ 38 ಫೀಟ್ ವೃತ್ತದಲ್ಲಿ ಈ ವಿಶಿಷ್ಟ ರಚನೆಯನ್ನು ನಿರ್ಮಿಸಿದ್ದಾರೆ.

Ad Widget . Ad Widget . Ad Widget .

300ಕೆಜಿ ಸಾಗು , 300ಕೆಜಿ ಹೆಸರುಕಾಳು, 300 ಕೆಜಿ ಕೆಂಪು ತೊಗರಿ ಬಳಸಿ ಒಟ್ಟು 900 ಕೆಜಿ ಧಾನ್ಯಗಳ ಜೊತೆಗೆ ಸಾಬಕ್ಕಿ, ಬೆಂಡೆಕಾಯಿ, ಮೂಲಂಗಿ, ಅಡಕೆ, ಕ್ಯಾರೆಟ್ ಮುಂತಾದ ತರಕಾರಿಗಳನ್ನೂ ಸೇರಿಸಿ ನವ ವಿಧಾನದಲ್ಲಿ ಸುಮಾರು 54 ಕಳಶವಿಟ್ಟು ಅಲಂಕರಿಸಿದ ಸುಂದರ ವಿಭಿನ್ನ ಶೈಲಿಯ ಈ ತಿರಂಗ ಚಿತ್ರಾಕೃತಿ ನೋಡಲು ಜನರು ಉತ್ಸಾಹದಿಂದ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಕಲಾಸೊಬಗಿಗೆ 108 ಬಾಳೆ ಎಲೆಯನ್ನೂ ಕೂಡಾ ಉಪಯೋಗಿಸಿ ಎಲ್ಲರ ಚಿತ್ತ ಅದರತ್ತ ಆಕರ್ಷಿಸುವಂತೆ ಮಾಡಿದ ಈ ವಿಭಿನ್ನ ಚಿತ್ರಾಕೃತಿಗೆ ಉಪಯೋಗಿಸಿದ ಚೆಂಡು ಹೂ ಮತ್ತಷ್ಟು ಮೆರುಗು ನೀಡುತ್ತಿದೆ.

ತಾಜಾ ತರಕಾರಿ, ಧಾನ್ಯ ಹಾಗೂ ಹೂಗಳನ್ನು ಬಳಸಿ ಅಮೃತಮಹೋತ್ಸವದ ಶುಭ ಘಳಿಗೆಯಲ್ಲಿ ನಿರ್ಮಿಸಿದ ಈ ಚಿತ್ರಾಕೃತಿ ಬರೋಬ್ಬರಿ ಅಂದಾಜು ಸಾವಿರ ಕೆ.ಜಿ‌ ತೂಗುತ್ತದೆ.

Leave a Comment

Your email address will not be published. Required fields are marked *