Ad Widget .

ಸಚಿವ ಬಿ.ಎ.ಬಸವರಾಜ ಅವರ ತಂದೆ ನಿಧನ

ಬೆಂಗಳೂರು: ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ್ ಅವರ ತಂದೆ ಆಂಜಿನಪ್ಪ (85) ಅವರು ಇಂದು ನಿಧನರಾಗಿದ್ದಾರೆ. ಹೀಗಾಗಿ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ (ಬೈರತಿ) ಅವರಿಗೆ ಪಿತೃ ವಿಯೋಗ ಉಂಟಾಗಿದೆ.

Ad Widget . Ad Widget .

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರ ತಂದೆ ಆಂಜಿನಪ್ಪ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

Ad Widget . Ad Widget .

ಮೃತ ಆಂಜಿನಪ್ಪ ಅವರಿಗೆ ಸಚಿವ ಬಿಎ ಬಸವರಾಜ ಸೇರಿದಂತೆ 5 ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಜೊತೆಗೆ ಭೈರತಿ ಬಸವರಾಜ್ ಅವರು ದೊಡ್ಡಮಗನಾಗಿದ್ದಾರೆ.

ಇಂದು ಮೃತರಾದಂತ ಸಚಿವ ಬಿ ಎ ಬಸವರಾಜ್ ಅವರ ತಂದೆ ಆಂಜಿನಪ್ಪ ಅವರ ಅಂತ್ಯಕ್ರಿಯೆಯನ್ನು ಸಚಿವರ ಸ್ವಗ್ರಾಮ ಭೈರತಿಯಲ್ಲಿ ಸಂಜೆ 6 ಗಂಟೆಗೆ ನೆರವೇರಲಿದೆ.

Leave a Comment

Your email address will not be published. Required fields are marked *