Ad Widget .

ಎಬಿವಿಪಿಯಿಂದ ಸುಬ್ರಹ್ಮಣ್ಯದಲ್ಲಿ “ಯುವಾಂಕುರ” ಅಂತರ್ ಕಾಲೇಜು ಸ್ಪರ್ಧೆ

ಸಮಗ್ರ ನ್ಯೂಸ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಆಯೋಜಿಸಿದ “ಯುವಾಂಕುರ” ರಾಷ್ಟ್ರಧಾರೆಯೋಳಿಂದು ಅಮೃತ ವರ್ಷದ ಹರ್ಷ ಎಂಬ ಸುಳ್ಯ ಹಾಗೂ ಕಡಬ ತಾಲೂಕು ಮಟ್ಟದ ಅಂತರ್ ಕಾಲೇಜು ಸ್ಪರ್ಧೆಯ ಉದ್ಘಾಟನಾ ಸಮಾರಂಭವನ್ನು ಬಾಲ ಭಟ್ ಹಿರಿಯ ಸ್ವಯಂಸೇವಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವರು ನೆರವೇರಿಸಿದರು.

Ad Widget . Ad Widget .

ವೇದಿಕೆಯಲ್ಲಿ ABVP ವಿಭಾಗ ಸಂಚಲಕ್ ಆಗಿರುವ ಹರ್ಷಿತ್ ಹಾಗೂ ಸುಬ್ರಹ್ಮಣ್ಯ ನಗರ ಕಾರ್ಯದರ್ಶಿ ಸೃಜನ್ ರೈ ಉಪಸ್ಥಿತಿ ಇದ್ದರು.

Ad Widget . Ad Widget .

ಕಾರ್ಯಕ್ರಮದಲ್ಲಿ ಕುಣಿತ ಭಜನೆ, ದೇಶಭಕ್ತಿ ಗೀತೆ, ರಸಪ್ರಶ್ನೆ, ಕಸದಿಂದ ರಸ, ರಂಗೋಲಿ, ನಿಧಿ ಶೋದ ಹಾಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಗುಡ್ಡಗಾಡು ಓಟ ಸ್ಪರ್ಧೆಗಳ ನಂತರ ಸಮಾರೋಪ ಭಾಷಣ ಹಾಗೂ ಬಹುಮಾನ ವಿತರಣೆಯನ್ನು ಎಬಿವಿಪಿಯ ಕೇಶವ ಬಂಗೇರ ಮಂಗಳೂರು ವಿಭಾಗ ಪ್ರಮುಖ್ ನಡೆಸಿಕೊಟ್ಟರು.ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ ಪಡೆದುಕೊಂಡಿತು.

Leave a Comment

Your email address will not be published. Required fields are marked *