ಲಾರಿಯೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಲಾರಿಯಲ್ಲಿದ್ದ 24 ಟನ್ ಹತ್ತಿ ಹೊತ್ತಿ ಉರಿದು ಭಸ್ಮ

ವಿಜಯಪುರ: ಲಾರಿಯೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಿ ತುಂಬಿದ ಲಾರಿ ಹೊತ್ತಿ ಉರಿದ ಘಟನೆಯೊಂದು ಜಿಲ್ಲೆಯ ಚಡಚಣ ತಾಲೂಕಿನ ಚಡಚಣ- ಬರಡೋಲ ರಸ್ತೆಯಲ್ಲಿ ನಡೆದಿದೆ.

Ad Widget ... ..

ಹತ್ತಿ ತುಂಬಿಕೊಂಡ ಲಾರಿ, ಮೈಸೂರಿಗೆ ಹೊರಟಿದ್ದ ಸಂದರ್ಭ ಈ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ 24 ಟನ್ ಹತ್ತಿ ಭಸ್ಮವಾಗಿದೆ.

Ad Widget

ಅಲ್ಲದೇ, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲಿನರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *