Ad Widget .

ಕಾಲೇಜ್ ಫೆಸ್ಟ್ ನಲ್ಲಿ ಗಲಾಟೆ| ನಮಾಝ್ ಮುಗಿಸಿ ಬಂದ ವಿದ್ಯಾರ್ಥಿ ಕೊಲೆಯಾದ

ಸಮಗ್ರ ನ್ಯೂಸ್: ವಿದ್ಯಾರ್ಥಿಯೊಬ್ಬನನ್ನ ತಾನು ವ್ಯಾಸಾಂಗ ಮಾಡ್ತಿದ್ದ ಕಾಲೇಜಿನ 50 ಮೀಟರ್ ಅಂತರದಲ್ಲೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

18 ವರ್ಷದ ಅರ್ಬಜ್ ಎಂಬ ವಿದ್ಯಾರ್ಥಿಯನ್ನ ಚಾಕು ಇರಿದು ಹತ್ಯೆ ಮಾಡಲಾಗಿದೆ. ಶುಕ್ರವಾರ(ಆ.12) ಮಧ್ಯಾಹ್ನ 2.30ರ ಸುಮಾರಿಗೆ ಇದೇ ಕಾಲೇಜಿನಿಂದ ಕೆಳಗೆ ಬಂದಿದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಚಾಕು ಇರಿತದಿಂದ ರಕ್ತ ಸ್ರಾವವಾಗಿ ಒದ್ದಾಡುತ್ತಿದ್ದ. ಆತನನ್ನ ನೋಡಿದ್ದ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ನಡುವೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ

Ad Widget . Ad Widget .

ಇದೇ ಕಾಲೇಜಿನಲ್ಲಿ ಮೃತ ಅರ್ಬಜ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡು ದಿನಗಳಿಂದ ಈ ಕಾಲೇಜ್ ನಲ್ಲಿ ಕಲ್ಚರಲ್ ಕಾರ್ಯಕ್ರಮಗಳು ನಡೆಯುತ್ತಿತ್ತು. ಈ ನಡುವೆ ಕ್ಷುಲ್ಲಕ ವಿಚಾರಕ್ಕೆ ಅರ್ಬಜ್ ಸ್ನೇಹಿತರು ಮತ್ತು ಬೇರೆ ವಿದ್ಯಾರ್ಥಿಗಳ ಮಧ್ಯೆ ಜಗಳವಾಗಿದೆ.

ಜಗಳಕ್ಕೆ ಫುಲ್ ಸ್ಟಾಪ್ ಬಿದ್ದಿದ್ದು, ಎಂದಿನಂತೆ ಮತ್ತೆ ಕಾಲೇಜಿಗೆ ಬಂದಿದ್ದ ಅರ್ಬಜ್ ಮಧ್ಯಾಹ್ನದ ನಮಾಜ್ ಮುಗಿಸಿಕೊಂಡು ಕಾಲೇಜ್ ನ ಮೂರನೇ ಫ್ಲೋರ್ ನಲ್ಲಿದ್ದ. ಈ ವೇಳೆ ಕರೆ ಮಾಡಿ ಕೆಳಗೆ ಕರೆದಿದ್ದ ಹಂತಕರು ಇಲ್ಲಿಂದ 50 ಮೀಟರ್ ದೂರ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಎಸ್ಕೇಪ್‌ ಆಗಿದ್ದಾರೆ. ಪರಿಣಾಮ ಅರ್ಬಜ್ ಸಾವನ್ನಪ್ಪಿದ್ದಾನೆ.

ಸದ್ಯ ಘಟನಾ ಸ್ಥಳಕ್ಕೆ ಕೆ.ಜಿ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ

Leave a Comment

Your email address will not be published. Required fields are marked *