ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಎಂದರೆ ಸಾಕು ಮೊದಲು ನೆನಪಾಗುವುದೇ ಪುರಾಣ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯ. ಶಿರಸಿ ಮಾರಿಕಾಂಬೆ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಹಾಗು ಮಾರಿಕೋಣ ಹೀಗೆ ಹಲವಾರಿ ವಿಷಯಕ್ಕೆ ಪ್ರಸಿದ್ದಿ. ಇದೀಗ ಮಾರಿಕಾಂಬಾ ದೇವಾಲಯಕ್ಕೆ ಮತ್ತೊಂದು ಹಿರಿಮೆ ದೊರೆತಿದೆ.
ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಪ್ರಸಾದಕ್ಕೆ ಬಿಎಚ್ಒಜಿ ಪ್ರಮಾಣ ದೊರಕಿದ್ದು ದೇಗುಲದ ಹಿರಿಮೆ ಹೆಚ್ಚಾಗಿದೆ. ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಆಹಾರದ ಗುಣಮಟ್ಟ, ದೇವರಿಗೆ ಅರ್ಪಿಸಲಾಗುವ ನೈವೇದ್ಯದ ಗುಣಮಟ್ಟ , ಪ್ರಸಾದ ತಯಾರು ಮಾಡುವ ವಿಧಾನ, ಅಡುಗೆ ಮನೆಯಲ್ಲಿನ ನೈರ್ಮಲ್ಯ ಹೀಗೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಬಿಹೆಚ್್ಒಜಿ ಪ್ರಮಾಣ ಪತ್ರವನ್ನು ಪಡೆಯಬೇಕು ಅಂದರೆ ಗರಿಷ್ಟ 116 ಅಂಕಗಳಲ್ಲಿ ಕನಿಷ್ಟ 90 ಅಂಕಗಳನ್ನು ಪಡೆಯುವುದು ಅವಶ್ಯಕವಾಗಿದೆ. ಶಿರಸಿಯ ಶ್ರೀ ಮಾರಿಕಾಂಬಾ ದೇಗುಲಕ್ಕೆ 116ರಲ್ಲಿ 100 ಅಂಕಗಳು ದೊರಕಿರುವ ಹಿನ್ನೆಲೆಯಲ್ಲಿ ಈ ಪ್ರಮಾಣ ಪತ್ರವನ್ನು ನೀಡಲಾಗಿದೆ.