ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ತನಿಖೆ ವೇಳೆ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಸದ್ದು ಮಾಡ್ತಿರೋದು ಹಂತಕರು ಮಸೀದಿಯಲ್ಲಿ ಅಡಗಿ ಕುಳಿತ ವಿಚಾರ.
ಪ್ರವೀಣ್ ನೆಟ್ಟಾರುರವರನ್ನು ಹತ್ಯೆಗೈದ ಮೂವರು ಹಂತಕರು ಕೇರಳಕ್ಕೆ ಪರಾರಿಯಾಗಿ ಅಡಗಿಕೊಳ್ಳಲು ಆಶ್ರಯ ಕೊಟ್ಟಿದ್ದು ಅಲ್ಲಿನ ಒಂದು ಮಸೀದಿ. ಹೀಗೆ ಮಸೀದಿಗೆ ತೆರಳಿ ಅಲ್ಲಿ ಅಡಗಿಕೊಳ್ಳಲು ಮಸೀದಿಯ ಮುಖ್ಯಸ್ಥರು ಹೇಗೆ ಸಹಾಯ ಮಾಡಿದರೋ ಗೊತ್ತಿಲ್ಲ? ಆದರೆ ಹಂತಕರೆಂದು ಗೊತ್ತಿದ್ದೂ ಅವರಿಗೆ ಸಹಾಯ ಮಾಡಿದ್ದರೆ ಇಂತಹ ಮಸೀದಿಗಳಲ್ಲಿ ಇನ್ನೆಷ್ಟು ಕೊಲೆಗಡುಕರು, ಪಾತಕಿಗಳು ಅಡಗಿಕೊಂಡಿರಬಹುದು ಎಂಬುದು ಸಾರ್ವಜನಿಕರ ಜಿಜ್ಞಾಸೆ. ಹತ್ಯೆ ಮಾಡಿದ ನರರಾಕ್ಷಸರನ್ನು ಮಾತ್ರ ಎತ್ತಾಕಿಕೊಂಡು ಬಂದ ಪೊಲೀಸರು ಇವರಿಗೆ ಆಶ್ರಯ ನೀಡಿದ ಮಸೀದಿ ಮುಖ್ಯಸ್ಥರನ್ನೂ ವಶಪಡಿಸಿಕೊಳ್ಳಬೇಕಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಯಾಕೆಂದರೆ ಕೊಲೆ ಮಾಡುವುದು ಒಂದು ಕಡೆಯಾದರೆ ಕೊಲೆಗಡುಕರಿಗೆ ಆಶ್ರಯ ನೀಡುವುದೂ ಕೊಲೆ ಮಾಡಿದಷ್ಟೇ ಅಪರಾದವಲ್ಲವೇ?
ಕೊಲೆ ಮಾಡಿದ ಆರೋಪಿಗಳಿಗೆ ಆಶ್ರಯ ನೀಡಿದ ಮಸೀದಿ ಯಾವುದು? ಇಂತಹ ನರ ಹಂತಕರಿಗೆ ಆಶ್ರಯ ನೀಡುತ್ತಿದ್ದರೆ ಇನ್ನೆಷ್ಟು ಹಂತಕರು ಹುಟ್ಟಿಕೊಳ್ಳ ಬಹುದು? ಆದರೆ ಇವರು ಕೊಲೆಗೈದ ಹಂತಕರು ಎಂದು ತಿಳಿದು ಆಶ್ರಯ ಕೊಟ್ಟರಾ? ಅಥವಾ ಬಳಲಿ ಬಂದರೆಂದು ಮುಗ್ಧರಿಗೆ ಆಶ್ರಯ ಕೊಟ್ಟರಾ ? ಎಂಬುದರ ಬಗ್ಗೆ ಈಗ ಅನುಮಾನ ಮೂಡಿದೆ. ಹಾಗಾಗಿ ಈ ಬಗ್ಗೆ ಮಸೀದಿ ಗುರುಗಳ ತನಿಖೆಯಾಗಲಿ. ಒಂದು ವೇಳೆ ನರ ಹಂತಕರೆಂದು ತಿಳಿದು ಕೂಡಾ ಆಶ್ರಯ ನೀಡಿದರೆ ಅಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೊ ಅವರಿಗೆಲ್ಲಾ ಕಠಿಣ ಶಿಕ್ಷೆಯಾಗಲೇಬೇಕು.
ಈ ಹಿಂದೆ ಕೊಲೆಕಡುಕರಿಗೆ ಕೊಲೆ ಮಾಡಲು ಹೋಗುವ ವೇಳೆ ಮತ್ತು ಕೊಲೆ ಮಾಡಿದ ನಂತರ ಪರಾರಿಯಾಗಲು ವಾಹನ ನೀಡಿದವರಿಗೆ ಶಿಕ್ಷೆಯಾಗುತ್ತೊ ಅದೇ ರೀತಿ ಇವರನ್ನು ತನಿಖೆ ಮಾಡಿ ಶಿಕ್ಷೆ ನೀಡಬೇಕಿದೆ.

ಹಣ ಸಂದಾಯ ಮಾಡಿದವರರಾರು?
ಕೊಲೆ ಮಾಡಿ ಪರಾರಿಯಾದ ಸಿಯಾಬುದ್ದೀನ್, ರಿಯಾಝ್, ಬಶೀರ್ ಕೇರಳಕ್ಕೆ ಪರಾರಿಯಾದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಇವರ ಪೈಕಿ ರಿಯಾಝ್ ನ ಖಾತೆಗೆ ಹಣ ವರ್ಗಾವಣೆಯಾಗಿದೆ. ಈ ಹಣವನ್ನು ವರ್ಗಾವಣೆ ಮಾಡಿದವರಾರು? ಎಲ್ಲಿಂದ ವರ್ಗಾವಣೆಯಾಗಿದೆ? ಎಂಬಿತ್ಯಾದಿ ತನಿಖೆಗಳು ನಡೆಯುತ್ತಿವೆ. ಈ ರೀತಿಯ ಹಣ ಪೂರೈಕೆ ಮಾಡಲು ಸ್ಥಳೀಯ ವ್ಯಕ್ತಿಗಳ ಜೊತೆ ವ್ಯವಸ್ಥಿತ ಜಾಲವೇ ಇರುವ ಅನುಮಾನ ಪೊಲೀಸರಿಗೆ ಕಾಡುತ್ತಿದೆ. ಇದರ ಹಿಂದಿನ ಕಾಣದ ಕೈಗಳು ಇನ್ನಷ್ಟು ಸಂಘಟನೆಗಳ ಜೊತೆ ಕೈಮಿಲಾಯಿಸಿದ್ದಾರೆ ಎಂಬ ತನಿಖೆ ನಡೆಯಬೇಕಿದೆ.