Ad Widget .

ನೆಲ್ಯಾಡಿ: ಬಸ್ ನಲ್ಲಿ ಸಿಕ್ಕಿಬಿದ್ದ ಅನ್ಯಮತೀಯ ನವಜೋಡಿ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಅನ್ಯ ಜೋಡಿಯೊಂದನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು(ಆ.12) ಮುಂಜಾನೆ ಬೆಳಕಿಗೆ ಬಂದಿದೆ.

Ad Widget . Ad Widget .

ಗದಗ ಜಿಲ್ಲೆಯ ನರಗುಂದ ಮೂಲದ ರಫೀಕ್ (21) ಸಂಕದಲ್ ಎಂಬಾತ ಗದಗ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು ಖಾಸಗಿ ಲಾಡ್ಜ್ ಬುಕ್ಕಿಂಗ್ ಗಾಗಿ ಬಂದಿರುತ್ತಾರೆ.

Ad Widget . Ad Widget .

ನವ ವಿವಾಹಿತ ಭಿನ್ನಕೋಮಿನ ಜೋಡಿ ಎಂದು ತಿಳಿದ ಕೂಡಲೆ ಲಾಡ್ಜ್ ಸಿಬ್ಬಂದಿ, ರೂಮ್ ನೀಡಲು ನಿರಾಕರಿಸಿದ್ದಾರೆ. ಆಗ ಅವರು ತಕ್ಷಣ ಅಲ್ಲಿಂದ ಮರಳಿ ಬೆಂಗಳೂರು ಕಡೆಗೆ ಬಸ್ ಹತ್ತಿದ್ದರು. ವಾಪಸ್ ಹೋಗುವ ವೇಳೆಯಲ್ಲಿ ಕೊಕ್ಕಡದಲ್ಲಿ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ಅಡ್ಡಗಟ್ಟಿದರು.

ನಂತರ ಜೋಡಿಯನ್ನು ನೆಲ್ಯಾಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.
ಯುವತಿಯು ಒಂದು ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕಿ ಎಂದು ತಿಳಿದು ಬಂದಿದ್ದು ತನ್ನ ಮನೆಯವರ ನಂಬರ್ ನೀಡಲು ನಿರಾಕರಿಸಿದ್ದಾಳೆ. ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ

Leave a Comment

Your email address will not be published. Required fields are marked *