Ad Widget .

ಹುಡುಗಿಯರು ಲೈಂಗಿಕ ಸಂಪರ್ಕ ಬಯಸಿದರೆ ಎಚ್ಚರದಿಂದಿರಿ| ನಟ ಮುಖೇಶ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ಇದು ಸೋಷಿಯಲ್ ಮೀಡಿಯಾ ಯುಗ. ಇಲ್ಲಿ ಯಾರು ಯಾವಾಗ ಬೇಕಾದ್ರು ಖ್ಯಾತಿ ಘಳಿಸಬಹುದು, ಯಾವಾಗ ಬೇಕಾದ್ರು ಅಪಖ್ಯಾತಿ ಘಳಿಸ ಬಹುದು. ಸಾಮಾಜಿಕ ಜಾಲಾ ತಾಣದ ಮೂಲಕ ಹುಡುಗಿಯರ ವಿಚಾರದಲ್ಲಿ ಹುಡುಗರು ಎಚ್ಚರಿಕೆಯಿಂದ ಇರಬೇಕು ಎಂದು ಶಕ್ತಿಮಾನ್ ಖ್ಯಾತಿ ಮುಖೇಶ್ ಎಚ್ಚರಿಕೆ ನೀಡಿದ್ದಾರೆ.

Ad Widget . Ad Widget .

ಇನ್​ಸ್ಟಾಗ್ರಾಂ, ಫೇಸ್​ಬುಕ್​ನಲ್ಲಿ ಹಲವು ಖಾತೆಗಳು ಹುಟ್ಟಿಕೊಂಡಿವೆ. ಈ ಖಾತೆಗಳಲ್ಲಿ ಹುಡುಗಿಯರ ಫೋಟೋಗಳನ್ನು ಹಾಕಲಾಗಿರುತ್ತದೆ. ಅವರ ಬೆತ್ತಲೆ ದೇಹ ನೋಡಬೇಕು ಎಂದರೆ ಹಣ ಕಳುಹಿಸುವಂತೆ ಬರೆಯಲಾಗಿರುತ್ತದೆ. ಅಂತಹ ಜನರನ್ನು ನಂಬಲೇಬಾರದು ಎಂಬುದು ಮುಕೇಶ್ ಎಚ್ಚರಿಕೆ ನೀಡಿದ್ದಾರೆ.

Ad Widget . Ad Widget .

`ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈ’ ಶೀರ್ಷಿಕೆಯ ವೀಡಿಯೋದಲ್ಲಿ ಮುಖೇಶ್ ಮಾತನಾಡಿದ್ದಾರೆ. ಸದ್ಯ ಮುಖೇಶ್ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಪರ,ವಿರೋದಗಳು ಕೇಳಿ ಬರುತ್ತಿದೆ.

ಯಾವುದೇ ಒಬ್ಬ ಮಹಿಳೆ ಒಬ್ಬ ಪುರುಷನ ಬಳಿ ನಾನು ನಿನ್ನೊಂದಿಗೆ ಸಂಭೋಗ ನಡೆಸಲು ಬಯಸುತ್ತೇನೆಂದು ಹೇಳಿದರೆ ಆಕೆ ಸಾಮಾನ್ಯಳಲ್ಲ, ಆಕೆ ದಂಧೆ ನಡೆಸಲು ಬಯಸುತ್ತಾಳೆ ಎಂದರ್ಥ. ಯಾಕೆಂದರೆ ಇಂತಹ ನಿರ್ಲಜ್ಜ ಮಾತನ್ನು ಸಭ್ಯ ಸಮಾಜದ ಯಾವ ಮಹಿಳೆಯೂ ಆಡಲು ಸಾಧ್ಯವಿಲ್ಲ ಎಂದೆಲ್ಲ ಮುಖೇಶ್ ಖನ್ನಾ ಹೇಳಿದ್ದರು. ಮಹಿಳೆಯರ ಬಗ್ಗೆ ಈ ರೀತಿಯ ಸಂವೇದನಾರಹಿತ ಹೇಳಿಕೆ ನೀಡಿರೋದು ನೆಟ್ಟಿಗರನ್ನು ಕೆರಳಿಸಿದೆ.

ಕಾಮೆಂಟ್‌ ವಿಭಾಗದಲ್ಲಿ 64 ವರ್ಷದ ಈ ನಟನ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಾಲ್ಯದಲ್ಲಿ ಎಲ್ಲರ ನೆಚ್ಚಿನ ಹೀರೋ ಆಗಿದ್ದ ಶಕ್ತಿಮಾನ್‌ ಇವರೇನಾ ಅಂತಾ ಹಲವರು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿನ ಅಸಂಬದ್ಧ ಮಾತುಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *