ಧರ್ಮಸ್ಥಳ: ಜನಜಾಗೃತಿ ವೇದಿಕೆಯಿಂದ ಹಂಚಿದ ಧ್ವಜ ವಿರೂಪ!?

ಸಮಗ್ರ ನ್ಯೂಸ್: ಅಖಿಲ ಭಾರತ‌ ಜನಜಾಗೃತಿ ವೇದಿಕೆಯಿಂದ ಧರ್ಮಸ್ಥಳದಲ್ಲಿ ನಡೆದ ನವಜೀವನ ಸದಸ್ಯರ ಶತದಿನೋತ್ಸವ ಕಾರ್ಯಕ್ರಮದಲ್ಲಿ ಹಂಚಲ್ಪಟ್ಟ ತ್ರಿವರ್ಣ ಧ್ವಜಗಳು ವಿರೂಪಗೊಂಡಿವೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

Ad Widget ... ..

ಇಂದು ಧರ್ಮಾಧಿಕಾರಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಯೋಜನೆ‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಈ ವೇಳೆ ನವಜೀವನ ಸದಸ್ಯರು ಮತ್ತು ಧ.ಗ್ರಾ.ಯೋಜನೆಯ ಸದಸ್ಯರಿಗೆ ನೀಡಲಾದ ಧ್ವಜಗಳಲ್ಲಿ ರಾಷ್ಟ್ರಧ್ವಜವನ್ನು ವಿರೂಪಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಕೆಲವು ಧ್ವಜಗಳಲ್ಲಿ ಅಶೋಕ ಚಕ್ರವು ಒಂದು ಬದಿಗೆ ಸರಿದಂತೆ ಕಂಡುಬರುತ್ತಿದ್ದು, ಕೆಲವು ಧ್ವಜಗಳ ಬಣ್ಣದಲ್ಲೂ ವ್ಯತ್ಯಾಸವಿರುವ ಅಂಶ ಕಂಡುಬಂದಿದೆ.

Ad Widget

ಹೀಗೇನಾದರೂ ಇದ್ದರೆ ಅಂತಹ ಧ್ವಜಗಳನ್ನು ಬಳಸಬಾರದು ಎಂಬುದಷ್ಟೇ ನಮ್ಮ ಆಶಯ.

Leave a Comment

Your email address will not be published. Required fields are marked *