Ad Widget .

ಮುನಿಸಿಕೊಂಡ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದ ಪ್ರಿಯಕರ

ಸಮಗ್ರ ನ್ಯೂಸ್: ಪ್ರೀತಿ ನಿರಾಕರಿಸಿದ ಪ್ರೇಯಸಿಯನ್ನು ಮಾಜಿ ಪ್ರಿಯಕರನೊಬ್ಬ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಸೂರ್ಯಪ್ರಿಯಾ (24) ಕೊಲೆಯಾದ ದುರ್ದೈವಿ. ಈಕೆ ಕೊನ್ನಲ್ಲೂರಿನ ಶಿವದಾಸನ್​ ಮತ್ತು ಗೀತಾ ದಂಪತಿಯ ಪುತ್ರಿ.

Ad Widget . Ad Widget .

ತನ್ನ ನಿವಾಸದಲ್ಲಿ ಯಾರು ಇಲ್ಲದಿದ್ದಾಗ ಸೂರ್ಯಪ್ರಿಯಾ ಹತ್ಯೆಯಾಗಿದ್ದಾರೆ. ಅಂಜುಮೂರ್ತಿಮಂಗಲದ ಅನಕಪ್ಪರ ನಿವಾಸಿ ಸುಜೀಶ್​ (27) ಕೊಲೆ ಮಾಡಿದ ಬಳಿಕ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

Ad Widget . Ad Widget .

ಸೂರ್ಯಪ್ರಿಯಾ, ಡೆಮೋಕ್ರೆಟಿಕ್​ ಯೂತ್​ ಫೆಡರೇಶನ್​ ಆಫ್​ ಇಂಡಿಯಾದ ಬ್ಲಾಕ್​ ಕಮಿಟಿ ಸದಸ್ಯೆ ಮತ್ತು ಮೆಲಾರಕೋಡು ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಸದಸ್ಯೆಯಾಗಿದ್ದರು. ಕಳೆದ ಆರು ವರ್ಷದಿಂದ ಸುಜೀಶ್​ ಮತ್ತು ಸೂರ್ಯಪ್ರಿಯಾ ಪರಸ್ಪರ ಪ್ರೀತಿ ಮಾಡುತ್ತಿದ್ದರು.

ಬುಧವಾರ ಬೆಳಗ್ಗೆ 10 ಗಂಟೆಗೆ ಸೂರ್ಯಪ್ರಿಯಾ ಕೊಲೆಯಾಗಿದೆ. ಮನೆಯಲ್ಲಿ ಸೂರ್ಯಪ್ರಿಯಾ ತಾಯಿ ಗೀತಾ, ಆಕೆಯ ಸಹೋದರ ರಾಧಕೃಷ್ಣನ್​ ವಾಸವಿದ್ದಾರೆ. ಘಟನೆ ಸಮಯದಲ್ಲಿ ಕೆಲಸಕ್ಕೆಂದು ಗೀತಾ ಹೊರಗಡೆ ಹೋದರೆ, ರಾಧಾಕೃಷ್ಣನ್​ ಬ್ಯಾಂಕ್​ಗೆಂದು ಅಲಥೂರ್​ಗ ಹೋಗಿದ್ದರು. ಮನೆಯಲ್ಲಿ ತಾತ ಒಬ್ಬರೆ ಇದ್ದರು. ಅವರು ಕೂಡ ಟೀ ಕುಡಿಯಲೆಂದು ಹೊರಗಡೆ ಹೋಗಿದ್ದಂತಹ ಸಂದರ್ಭದಲ್ಲಿ ಮನೆಗೆ ನುಗ್ಗಿದ ಸುಜೀಶ್​, ಸೂರ್ಯಪ್ರಿಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಪೊಲೀಸರ ಪ್ರಕಾರ, ಪ್ರೀತಿ ಮುರಿದುಕೊಂಡಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಕಾಲೇಜು ದಿನಗಳಿಂದಲೂ ಇಬ್ಬರು ಸಂಬಂಧದಲ್ಲಿದ್ದರು. ಕೆಲವು ತಿಂಗಳ ಹಿಂದೆ ಸೂರ್ಯಪ್ರಿಯಾ ಪ್ರೀತಿಯನ್ನು ಕಡಿದುಕೊಂಡಿದ್ದಳು. ಆದರೆ, ಆಕೆ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರಕ್ಕೆ ಕೆಲವು ದಿನಗಳ ಹಿಂದೆ ಫೋನ್​ ಮೂಲಕ ಇಬ್ಬರ ನಡುವೆ ವಾಗ್ವಾದವು ನಡೆದಿತ್ತು. ಸೂರ್ಯಪ್ರಿಯಾಳನ್ನು ನೇರವಾಗಿ ಭೇಟಿಯಾಗಿ ಪ್ರಶ್ನೆ ಮಾಡೋಣ ಅಂದುಕೊಂಡು ನಿನ್ನೆ ಬೆಳಗ್ಗೆ ಆಕೆಯ ಮನೆಗೆ ಬಂದ ಸುಜೀಶ್​, ಆಕೆಯ ಮೊಬೈಲ್​ ಚಾಟ್ಸ್​ಗಳನ್ನು ನೋಡಿದ್ದಾನೆ. ನಂತರ ಮೆಸೇಜ್​ ವಿಚಾರಕ್ಕೆ ಸೂರ್ಯಪ್ರಿಯಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ಜಗಳ ತಾರಕಕ್ಕೇರಿದಾಗ ಸುಜೀಶ್​ ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ. ಅದಕ್ಕೂ ಮುನ್ನ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಆದರೆ, ಟವೆಲ್​ ಮೂಲಕ ಉಸಿರುಗಟ್ಟಿಸಿ ಸುಜೀಶ್​ ಹತ್ಯೆ ಮಾಡಿದ್ದಾನೆ.

Leave a Comment

Your email address will not be published. Required fields are marked *