ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾಬಂಧನ ಬಂದೇ ಬಿಟ್ಟಿದೆ. ಹಬ್ಬ ಹತ್ತಿರ ಬರ್ತಿದ್ದಂತೆ ಅಂಗಡಿಗಳಲ್ಲೆಲ್ಲ ಗ್ರಾಹಕರನ್ನು ಸೆಳೆಯುವ ಕಸರತ್ತು ಜೋರಾಗಿದೆ. ಸಹೋದರಿಯರು ವಿಶಿಷ್ಟ ರಾಖಿಯನ್ನು ಹುಡುಗಿ ಸಹೋದರರಿಗೆ ಕಟ್ಟುತ್ತಿದ್ದಾರೆ. ಆದರೆ ಇಲ್ಲೊಂದು ವಿಶಿಚ್ಟ ಹಾಗು ಭಾರತದ ಅತ್ಯಂತ ದುಬಾರಿ ರಾಖಿಯೊಂದು ಇಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಗುಜರಾತ್‌ನ ಸೂರತ್‌ನಲ್ಲಿ ವಿಶಿಷ್ಟ ರಾಖಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ದೀಪಕ್ ಭಾಯಿ ಚೋಕ್ಸಿ ಎಂಬುವವರು ಈ ವಿಶಿಷ್ಟ ರಾಖಿಯನ್ನು ತಯಾರಿಸಿದ್ದಾರೆ. ರಕ್ಷಾಬಂಧನದ ದಿನ ಆಭರಣದಂತೆಯೂ ಇದನ್ನು ಧರಿಸಬಹುದು ಎನ್ನುತ್ತಾರೆ. ಇದರಲ್ಲಿ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂನಿಂದ ಮಾಡಿದ ದಾರವನ್ನು ಬಳಸಲಾಗಿದೆ. ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ.
ಅತ್ಯಂತ ಆಕರ್ಷಕವಾದ ಈ ದುಬಾರಿ ರಾಖಿಯ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ. ಆಭರಣ ಮಳಿಗೆಯ ಮಾಲೀಕ ದೀಪಕ್ ಭಾಯ್ ಚೋಕ್ಸಿ ಅವರು ಈ ಚಿನ್ನದ ರಕ್ಷೆಯನ್ನು ನಿರ್ಮಿಸಿದ್ದಾರೆ. ಇವರು ಸುದ್ದಿ ಸಂಸ್ಥೆ ಎನ್‌ಐಗೆ ನೀಡಿದ ಹೇಳಿಕೆಯಲ್ಲಿ ನಾವು ಸಿದ್ಧಪಡಿಸಿದ ರಾಖಿಗಳನ್ನು ರಕ್ಷಾಬಂಧನದ ನಂತರ ಆಭರಣವಾಗಿಯೂ ಧರಿಸಬಹುದು. ಎಂದು ಸ್ಥಳೀಯ ಗ್ರಾಹಕ ಸಿಮ್ರಾನ್ ಸಿಂಗ್ ಹೇಳಿದರು.