Ad Widget .

ಬಿಗ್ ಭಾಸ್ ಒಟಿಟಿ| ಆರ್ಯವರ್ಧನ್ ಗುರೂಜಿಗೆ ಪ್ರಪೋಸ್ ಮಾಡಿದ ಪುಟ್ಟಗೌರಿ ಸಾನ್ಯಾ

ಸಮಗ್ರ ನ್ಯೂಸ್: ತಮ್ಮ ಹೊಟ್ಟೆ ವಿಚಾರವಾಗಿ ಟೀಕೆಗೆ ಒಳಗಾದ ಆರ್ಯವರ್ಧನ್ ಗುರೂಜಿಗೆ ಬಿಗ್​ಬಾಸ್ ಮನೆಯಲ್ಲಿ ಲವ್ ಪ್ರಪೋಸಲ್ ಬಂದಿದೆ. ಯಾರಿಂದ ಗೊತ್ತಾ? 22 ವರ್ಷದ ಸಾನ್ಯಾ ಅಯ್ಯರ್​ನಿಂದ. ಹೌದು. ಕಿರುತೆರೆ ನಟಿ ಚೆಲುವೆ ಸಾನ್ಯಾ ಗುರೂಜಿಗೆ ಪ್ರೇಮ ನಿವೇದನೆ ಮಾಡಿದ್ದಾರೆ.

Ad Widget . Ad Widget .

ಸಂಖ್ಯಾಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಆರ್ಯವರ್ಧನ್ ಗುರೂಜಿ ಈ ಬಾರಿ ಓಟಿಟಿ ಬಿಗ್​ಬಾಸ್​ ಮನೆಯನ್ನು ಪ್ರವೇಶಿಸಿದ್ದು, ಇಲ್ಲಿ ಇವರ ನಂಬರ್ ಗೇಮ್​ ವರ್ಕ್ ಆಗುತ್ತಾ ನೋಡಬೇಕಿದೆ. ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್​ ಸಹ ಈ ಬಾರಿ ಸ್ಪರ್ಧೆ ಮಾಡುತ್ತಿದ್ದು, ಮನೆಗೆ ಗ್ರ್ಯಾಂಡ್​ ಆಗಿ ಕಾಲಿಟ್ಟಿದ್ದಾರೆ. ಈಗ ಲವ್ ಪ್ರಪೋಸಲ್ ಮಾಡಿದ್ದಾರೆ.

Ad Widget . Ad Widget .

ಇದೀಗ ಬಿಗ್​​ಬಾಸ್ ಮನೆಯೊಳಗೆ ಗುರೂಜಿ ಮನೆಯೊಳಗಿರುವ ಇತರ ಸ್ಪರ್ಧಿಗಳೊಂದಿಗೆ ಜಾಲಿಯಾಗಿ ಗೇಮ್ ಆಡುತ್ತಿದ್ದಾರೆ. ಗುರೂಜಿ ಹೀಗೂ ಇರ್ತಾರಾ ಎನ್ನುವಷ್ಟು ಜಾಲಿಯಾಗಿ ಟಾಸ್ಕ್ ಆಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ರೊಮ್ಯಾಂಟಿಕ್ ಆಗಿ ನೀವು ಮಾತನಾಡಬೇಕು ಅಂತ ಸ್ಪರ್ಧಿಗಳು ಗುರೂಜಿಗೆ ಹೇಳಿದ್ದರು. ಆಗ ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯಾ ನಡುವೆ ನಡೆದ ಸಂಭಾಷಣೆ ಎಲ್ಲೆಡೆ ಸುದ್ದಿಯಾಗಿದೆ.

ಆರ್ಯವರ್ಧನ್ ಮಾತು ಆರಂಭಿಸಿ ಸಖತ್ ಆಗಿ ಹೇಳುತ್ತೇನೆ, ಕಳೆದು ಹೋಗುತ್ತೀರಿ ಆರಾಮವಾಗಿರಿ, ನೀವೆಲ್ಲ ಬೆಚ್ಚಿ ಬೀಳುತ್ತೀರಿ, ಆಗಿದ್ದು ಆಗಲಿ, ಮಾತನಾಡುತ್ತೇನೆ ಎಂದಿದ್ದಾರೆ. ಸಾನ್ಯಾ ಅಯ್ಯರ್ ಪ್ರತಿಕ್ರಿಯಿಸಿ ಬಿಗ್ ಬಾಸ್ ಮನೆಗೆ ಮೊದಲ ಕಂಟೆಸ್ಟೆಂಟ್ ಆಗಿ ಬಂದಿದ್ದೀರಿ. ಹಾಗೆ ನನ್ನ ಮನಸಿಗೂ ನೀವೇ ಮೊದಲು ಕಾಲಿಡಬೇಕು ಎಂದಿದ್ದಾರೆ. ಆರ್ಯವರ್ಧನ್ ಉತ್ತರಿಸಿ ಬೇರೆ ತರ ಪ್ರಶ್ನೆಯನ್ನು ಕೇಳಿ, ಇದು ಬೇಡ ಎಂದರೆ, ಸಾನ್ಯಾ ಅಯ್ಯರ್ ನೀವು ಕಂದನಂತೆ ಇದ್ದೀರಿ, ಬಹಳ ಮುದ್ದಾಗಿದ್ದೀರಾ, ನನ್ನ ಬಾಳಲ್ಲಿ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *