Ad Widget .

ಬಿಕಿನಿ ಧರಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಪೋಸ್ಟ್ ಹಾಕಿದ ಪ್ರಾಧ್ಯಾಪಕಿ| ನನ್ನ ಮಗ ಆಕೆಯನ್ನೇ ನೋಡುತ್ತಾನೆ ಎಂದು ದೂರಿತ್ತ ಪೋಷಕರು

ಸಮಗ್ರ ನ್ಯೂಸ್: ಬಿಕಿನಿ ಧರಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಪೋಸ್ಟ್ ಮಾಡಿದ್ದರಿಂದ ಪ್ರಾಧ್ಯಾಪಕಿಯು ಕೆಲಸ ಕಳೆದುಕೊಂಡ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

Ad Widget . Ad Widget .

ಕೋಲ್ಕತ್ತಾದ ಸೇಂಟ್‍ಕ್ಸೇವಿಯರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಹಾಕಿದ್ದರು. ಇದನ್ನು ನೋಡುತ್ತಿದ್ದ ಆಕೆಯ ವಿದ್ಯಾರ್ಥಿಯನ್ನು ಕಂಡ ತಂದೆಗೆ ಗಾಬರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ತಂದೆ ಶಿಕ್ಷಕಿಯನ್ನು ಅಮಾನತು ಮಾಡಬೇಕೆಂದು ವಿವಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಆಡಳಿತ ಮಂಡಳಿಯು ಪ್ರಾಧ್ಯಾಪಕಿಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕಿ ಬಲವಂತವಾಗಿ ರಾಜೀನಾಮೆ ನೀಡಿದರು. ಅಷ್ಟೇ ಅಲ್ಲದೇ ವಿವಿಯ ಆಡಳಿತ ಮಂಡಳಿಯು ತಮ್ಮ ಕಾಲೇಜಿನ ಖ್ಯಾತಿಗೆ ಹಾನಿ ಉಂಟಾಗಿದ್ದರಿಂದ 99 ಕೋಟಿ ರೂ.ವನ್ನು ಪಾವತಿಸುವಂತೆ ಪ್ರಾಧ್ಯಾಪಕಿಗೆ ಕೇಳಿದೆ.

Ad Widget . Ad Widget .

ಪತ್ರದಲ್ಲಿ ಏನಿದೆ?: ಇತ್ತೀಚಿಗೆ ನನ್ನ ಮಗ ಪ್ರಾಧ್ಯಾಪಕಿಯ ಕೆಲವು ಫೋಟೋಗಳನ್ನು ನೋಡುತ್ತಿರುವುದನ್ನು ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ. ಅಷ್ಟೇ ಅಲ್ಲದೇ ಆ ಫೋಟೋದಲ್ಲಿ ಪ್ರಾಧ್ಯಾಪಕಿಯು ಅಶ್ಲೀಲ ರೀತಿಯಲ್ಲಿ ಪೋಸ್‍ನ್ನು ನೀಡಿದ್ದಾರೆ. ಜೊತೆಗೆ ಈ ಫೋಟೋವನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕವಾಗಿಯೇ ಫೋಟೋವನ್ನು ಹಾಕಿಕೊಂಡಿದ್ದಾಳೆ.

ಶಿಕ್ಷಕಿಯೊಬ್ಬಳು ಬಿಕಿನಿ ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಅಪ್‍ಲೋಡ್ ಮಾಡುತ್ತಿರುವುದನ್ನು ನೋಡುವುದು ಪೋಷಕರಾಗಿ ನನಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಏಕೆಂದರೆ ನನ್ನ ಮಗನನ್ನು ಈ ರೀತಿಯ ಅಸಭ್ಯತೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಈ ರೀತಿಯ ಫೋಟೋವನ್ನು ಹಾಕುವುದರಿಂದ ವಿದ್ಯಾರ್ಥಿಗಳ ದಾರಿ ತಪ್ಪಿಸಿದಂತಾಗುತ್ತದೆ ಎಂದು ಪತ್ರದಲ್ಲಿ ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ.

ಪ್ರಾಧ್ಯಾಪಕಿ ದೂರು: ಘಟನೆ ಸಂಬಂಧಿಸಿ ಪ್ರಾಧ್ಯಾಪಕಿಯು ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಇನ್‍ಸ್ಟಾಗ್ರಾಂ ಖಾತೆಯು ಸಾರ್ವಜನಿಕವಾದದ್ದಲ್ಲ, ಬದಲಿಗೆ ಖಾಸಗಿಯಾದ್ದದಾಗಿದೆ. ಅಷ್ಟೇ ಅಲ್ಲದೇ ಬಿಕಿನಿ ಧರಿಸಿರುವ ಫೋಟೋವನ್ನು ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲೇ ತೆಗೆದುಕೊಂಡಿದ್ದೆ. ವಿದ್ಯಾರ್ಥಿಯ ತಂದೆ ಈ ರೀತಿ ಹೇಳಿರುವುದು ಆಕ್ಷೇಪಾರ್ಹವಾಗಿದೆ. ಇದರಿಂದಾಗಿ ನನ್ನ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *