Ad Widget .

ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಎರಡು ವ್ಯಕ್ತಿಗಳು ಮೃತ್ಯು

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಿಲಬನೂರು ಗ್ರಾಮದ ದಂಡ್ಯೆಪ್ಪ ಅವರ ಪುತ್ರ ಬಸಪ್ಪ ದುಂಡಪ್ಪ ಸುನ್ನಾಳ್ (38), ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ವೃದ್ಧ ಸ್ವಾಮಿಗೌಡ (73) ಮೃತರು.

Ad Widget . Ad Widget .

ಆಗಸ್ಟ್ 4ರ ಮುಂಜಾನೆ 2.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾಗಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಸಿ.ಜಿ. ಆಸ್ಪತ್ರೆಯಲ್ಲಿ ಇರಿಸಿದ್ದ ಮೃತದೇಹವನ್ನು ಸಂಬಂಧಿಗಳು ಗುರುತಿಸಿದ್ದಾರೆ.

Ad Widget . Ad Widget .

‘ಸಿದ್ದರಾಮಯ್ಯ ಅವರ ಜನ್ಮದಿನಕ್ಕಾಗಿ ಬಸ್‌ನಲ್ಲಿ ಕರೆತಂದಿದ್ದವರು ಬಸ‍ಪ್ಪ ಅವರಿಗಾಗಿ ಕೆಲ ಗಂಟೆಗಳ ಕಾಲ ಕಾದಿದ್ದಾರೆ. ಬಸ್‌ನಲ್ಲಿ ಮಹಿಳೆಯರು ಇದ್ದುದರಿಂದ ತಡವಾಗುತ್ತದೆ ಎಂದು ಹೇಳಿ ಹೊರಟು ಹೋಗಿದ್ದಾರೆ’ ಎಂದು ಮೃತರ ಸಹೋದರ ಮಂಜುನಾಥ್
ತಿಳಿಸಿದರು.

ಅಪಘಾತದಲ್ಲಿ ಮೃತಪಟ್ಟಿರುವುದು ತಡವಾಗಿ ಗೊತ್ತಾಗಿದೆ. ವಾರಸುದಾರರು ಶವವನ್ನು ಗುರುತಿಸಿ ಕೊಂಡೊಯ್ದಿದ್ದಾರೆ.

Leave a Comment

Your email address will not be published. Required fields are marked *