Ad Widget .

ಅಂತಿಮ ಹಂತದಲ್ಲಿ ದುಬೈನ ಹಿಂದೂ ದೇವಾಲಯ| ಏನೇನಿದೆ ಈ ದೇವಾಲಯದಲ್ಲಿ ಗೊತ್ತಾ?

ಸಮಗ್ರ‌ ನ್ಯೂಸ್: ದೇವರೊಬ್ಬರೇ ಎಂದು ನಂಬುವ ಇಸ್ಲಾಂ ದೇಶವಾಗಿದ್ದರೂ ತನ್ನ ದೇಶದಲ್ಲಿರುವ ಇತರ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಅನ್ಯೋನ್ಯತೆಗೆ ಹೆಸರಾದ ದುಬೈನಲ್ಲಿ ಹಿಂದೂ, ಕ್ರಿಶ್ಚಿಯನ್‌ ಚರ್ಚ್, ಮಂದಿರ,ಗಳಿಗೂ ಅವಕಾಶ ನೀಡಲಾಗಿದೆ. ಹೇಗೆ ಇತರ ಧರ್ಮಗಳ‌ ಜೊತೆ ಹೊಂದಾಣಿಕೆ ಇರಬೇಕೆಂಬುವುದಕ್ಕೆ ದುಬೈ ಸಾಕ್ಷಿಯಾಗಿದೆ. ದುಬೈನ ಜಬಲ್ ಅಲಿ ಎಂಬ ಪ್ರದೇಶದಲ್ಲಿ ಈ ದೇವಾಲಯ ತಲೆಯೆತ್ತಿ ನಿಂತಿದೆ.

Ad Widget . Ad Widget .

ಈ ನೂತನ ಹಿಂದೂ ದೇಗುಲದಲ್ಲಿ 16 ಹಿಂದೂ ದೇವರು-ದೇವಿಯರ ಮೂರ್ತಿಗಳಿವೆ ಎಂದು ಯುಎಇ ಮಾಧ್ಯಮಗಳು ವರದಿ ಮಾಡಿವೆ.
ಈ ದೇವಾಲಯದಲ್ಲಿ ಭಕ್ತರಿಗೆ ಹಲವು ಸೌಲಭ್ಯಗಳು ಇರಲಿವೆ. ಭಕ್ತರಿಗೆ ಸಮುದಾಯ ಭವನ, ಅಧ್ಯಯನ ಕೊಠಡಿ, ಪೂಜಾ ಕೊಠಡಿ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಥಳ ಇತ್ಯಾದಿಗಳು ಇರಲಿವೆ. ಈ ವರ್ಷ ಪೂಜಾ ಸ್ಥಳ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಲಿದೆ. ನಾಲೆಡ್ಜ್‌ ರೂಮ್‌ ಮತ್ತು ಇತರೆ ವಿಭಾಗಗಳು ಮುಂದಿನ ವರ್ಷ ಜನವರಿ 14ರ ಮಕರ ಸಂಕ್ರಾಂತಿಯಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ದೇವಾಲಯದಲ್ಲಿ ಹಿಂದೂಗಳಿಗೆ ಮದುವೆ, ಹೋಮ ಹವನ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಎಲ್ಲಾ ಸೌಲಭ್ಯಗಳೂ ನೀಡಿದೆ. ನೂತನ ಹಿಂದೂ ದೇವಾಲಯದಲ್ಲಿ ಕೋವಿಡ್‌-೧೯ ನಿಯಮಗಳನ್ನು ಪಾಲಿಸುವ ಸಲುವಾಗಿ ಕ್ಯೂಆರ್‌-ಕೋಡ್‌ ಆಧರಿತ ಅಪಾಯಿಂಟ್‌ಮೆಂಟ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಪಾಯಿಂಟ್‌ಮೆಂಟ್‌ ಕಾದಿರಿಸಲು ಸಿಖ್‌ ಗುರುದ್ವಾರದ ಹಿಂದೂ ಟೆಂಪಲ್‌ ದುಬೈ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ದೇವಾಲಯವು ಉದ್ಘಾಟನೆಗೊಂಡ ಬಳಿಕ ಅಲ್ಲಿ ದೀಪಾವಳಿ, ನವರಾತ್ರಿ ಇತ್ಯಾದಿ ಹಿಂದೂ ಹಬ್ಬಗಳು ನಡೆಯಲಿವೆ. ದೇವಾಲಯದ ಕಮ್ಯುನಿಟಿ ಮತ್ತು ನಾಲೆಡ್ಜ್‌ ಪ್ರದೇಶದಲ್ಲಿ ದೊಡ್ಡ ಎಲ್‌ಸಿಡಿ ಪರದೆಗಳನ್ನು ಹಾಕಲಾಗಿದೆ. ದುಬೈ ಹಿಂದೂ ದೇಗುಲದೊಳಗೆ ಎತ್ತರದ ಕಾಂಕ್ರಿಟ್‌ ಕಂಬಗಳ ರಚನೆಯಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ. ದಕ್ಷಿಣ ಭಾರತದ ದೇವರು-ದೇವತೆಯರ ಮೂರ್ತಿಗಳನ್ನು ಕಪ್ಪು ಶಿಲ್ಪಗಳಿಂದ ಕೆತ್ತಲಾಗಿದೆ. ದೇವಾಲಯದ ಮುಖ್ಯ ದೇವರು ಶಿವ. ಗಣೇಶ, ಕೃಷ್ಣಾ, ಮಹಾಲಕ್ಷ್ಮಿ, ಗುರುವಯೂರಪ್ಪನ್‌ ಮತ್ತು ಅಯ್ಯಪ್ಪ ಸ್ವಾಮಿ ಸೇರಿದಂತೆ ಒಟ್ಟು ಹದಿನಾರು ದೇವರು, ದೇವತೆಗಳ ಮೂರ್ತಿಗಳಿವೆ ಎಂದು ತಿಳಿದು ಬಂದಿದೆ.

Ad Widget . Ad Widget .

ದುಬೈ ಹಿಂದೂ ದೇಗುಲದಲ್ಲಿ ತುಳಸಿ ಗಿಡಗಳ ಪುಟ್ಟ ತೋಟವಿರಲಿದೆ. ದೇವಾಲಯದಲ್ಲಿ ಒಟ್ಟು ಎಂಟು ಆರ್ಚಕರು ಇರಲಿದ್ದಾರೆ. ದೇವಾಲಯವಿರುವ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಲಸಿಗರು ಹೆಚ್ಚಾಗಿ ಭೇಟಿ ನೀಡುವ ಜನಪ್ರಿಯ ತಾಣಗಳಿವೆ. ದುಬೈನಲ್ಲಿ ನೆಲೆಸಿರುವ ಹಿಂದುಗಳಿಗೆ ಈ ವರ್ಷದ ಆಕ್ಟೋಬರ್‌ನಿಂದ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯುವ ಅವಕಾಶ ದೊರಕಲಿದೆ.

Leave a Comment

Your email address will not be published. Required fields are marked *