ಸಮಗ್ರ ನ್ಯೂಸ್: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗೆ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ, ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿ ಮಾಸಿಕ ವೇತನ ಎಷ್ಟು ಗೊತ್ತೆ ?
2008-09ರಿಂದ 15 ಕೋಟಿ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದಾರೆ. ಹಣಕಾಸು ವರ್ಷ 2019-20ರಲ್ಲಿ ಮುಕೇಶ್ ಅಂಬಾನಿ 15 ಕೋಟಿ ಸಂಬಳವನ್ನು ಪಡೆದುಕೊಂಡಿದ್ದು, ಸತತ 11 ವರ್ಷಗಳಿಂದ ಅಷ್ಟೇ ವೇತನವನ್ನು ಪಡೆದುಕೊಂಡಿದ್ದಾರೆ. ವೇತನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಸಾಮಾನ್ಯವಾಗಿ ಯಾವುದೇ ಸಂಸ್ಥೆಯಲ್ಲಿ ಪ್ರತಿ ವರ್ಷ ವೇತನ ಹೆಚ್ಚಳ ಮಾಡಲಾಗುತ್ತದೆಯಾದರೂ ಮುಕೇಶ್ ಅಂಬಾನಿ ಮಾತ್ರ ವೇತನ ಹೆಚ್ಚಿಸಿಕೊಂಡಿಲ್ಲ. ಆದರೆ ಉಳಿದ ಭತ್ಯೆ, ಸೌಲಭ್ಯ ಸೇರಿ ಮುಕೇಶ್ ಅಂಬಾನಿ ವಾರ್ಷಿಕವಾಗಿ 24 ಕೋಟಿ ರೂಪಾಯಿ ವೇತನವನ್ನು ಪಡೆದುಕೊಳ್ಳುತ್ತಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಮುಖ್ಯಸ್ಥ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಮುಕೇಶ್ ಅಂಬಾನಿ ಈ ಎರಡು ಹಣಕಾಸು ವರ್ಷದಲ್ಲೂ ಸಂಸ್ಥೆಯಿಂದ ವೇತನ ಮಾತ್ರವಲ್ಲದೇ, ಭತ್ಯೆ, ಇನ್ನಿತರ ಸೌಲಭ್ಯ, ನಿವೃತ್ತಿ ಪ್ರಯೋಜನ, ಕಮಿಷನ್, ಸ್ಟಾಕ್ ಲಾಭವನ್ನು ಪಡೆದುಕೊಂಡಿಲ್ಲ.
ಕೊರೊನಾ ಸಾಂಕ್ರಾಮಿಕವು ಉದ್ಯಮ ಹಾಗೂ ಆರ್ಥಿಕತೆಗೆ ಏಟು ನೀಡಿದೆ. ಇದರಿಂದಾಗಿ ತನ್ನ ಸಂಬಳವನ್ನು ಮುಕೇಶ್ ಅಂಬಾನಿ ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಮಾಹಿತಿ ನೀಡಿದೆ. ಹಣಕಾಸು ವರ್ಷ 2020-21ರಲ್ಲಿ ಮುಕೇಶ್ ಅಂಬಾನಿ ವೇತನ “ಶೂನ್ಯ” ಎಂದು ಸಂಸ್ಥೆ ಹೇಳಿದೆ. ಮುಕೇಶ್ ಅಂಬಾನಿ ಸತತ ಎರಡನೇ ವರ್ಷ ತನ್ನ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಯಾವುದೇ ವೇತನವನ್ನು ಪಡೆದಿಲ್ಲ.