ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರ ಏರಿಕೆ ಬೆನ್ನಲ್ಲೇ ಬ್ಯಾಂಕ್ ಗಳು ಅಡಮಾನವಿಟ್ಟು ಪಡೆದ ಸಾಲದ ಮೇಲಿನ ಬಡ್ಡಿ ದರ ಏರಿಸಿವೆ. ಹಣದುಬ್ಬರ ಹೆಚ್ಚಳ ಹಿನ್ನೆಲೆಯಲ್ಲಿ ಆರ್ ಬಿಐ 50 ಬೆಸಿಕ್ ಪಾಯಿಂಟ್ಸ್ ಮೇಲಿನ ರೆಪೊ ದರ ಏರಿಕೆ ಮಾಡಿದೆ. ಇದರಿಂದ ಸಾಲ ಹಾಗೂ ಸಾಲದ ಮೇಲಿನ ಇಎಂಐನಲ್ಲಿ ಏರಿಕೆಯಾಗಲಿದೆ.
ಆರ್ ಬಿಐ ನಿಯಮದ ಪ್ರಕಾರವೇ ಹಣಕಾಸು ಸಂಸ್ಥೆಗಳು ಮುಖ್ಯವಾಗಿ ಬ್ಯಾಂಕ್ ಗಳು ಸಾಲದ ಮೇಲೀನ ಬಡ್ಡಿ ದರ ಏರಿಕೆ ಮಾಡಲಿದ್ದು, ಇದು ಇಎಂಐ ಮೇಲೂ ಪರಿಣಾಮ ಬೀರಲಿದೆ. ರೆಪೊ ದರ ಅಂದರೆ ಬ್ಯಾಂಕ್ ಗಳು ಆರ್ ಬಿಐನಿಂದ ಪಡೆದ ಸಾಲದ ಮೇಲಿನ ದರ. ಈ ದರ ಏರಿಕೆಯ ಹೊರೆಯನ್ನು ಸಾಮಾನ್ಯವಾಗಿ ಬ್ಯಾಂಕ್ ಗಳು ಗ್ರಾಹಕರ ಮೇಲೆ ಹಾಕುತ್ತವೆ
ಹೊಸ ದರ ಜೂನ್ 15ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ದೇಶದ ಅತ್ಯುನ್ನತ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 10 ಬೆಸಿಕ್ ಪಾಯಿಂಟ್ ಹೊಂದಿರುವ ಸಾಲದ ಮೇಲೆ ಶೇ.0.10ರಷ್ಟು ಹೆಚ್ಚುವರಿ ಬಡ್ಡಿ ವಿಧಿಸಲಿದೆ.
ರಿಸರ್ವ್ ಬ್ಯಾಂಕ್ ಎರಡು ಹಂತಗಳಲ್ಲಿ ರೆಪೋ ದರವನ್ನು 90 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ ಮತ್ತು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿ ಚಿಲ್ಲರೆ ಹಣದುಬ್ಬರವನ್ನು ತಗ್ಗಿಸಲು ಮತ್ತು ಋಣಾತ್ಮಕ ಪ್ರಮಾಣವನ್ನು ಕಡಿತಗೊಳಿಸಲು ನೀತಿ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ನಿರೀಕ್ಷೆ ಮಾಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಎಸ್‌ಬಿಐ ತನ್ನ ಗ್ರಾಹಕರ ಗೃಹಸಾಲದ ಮೇಲೆ ಬಡ್ಡಿದರ ಹೆಚ್ಚು ಮಾಡಿತ್ತು. ಈಗ ರಿಸರ್ವ್ ಬ್ಯಾಂಕ್ ತೀರ್ಮಾನದಿಂದ ಮತ್ತೆ ಬಡ್ಡಿದರ ಹೆಚ್ಚಳವಾಗಲಿದ್ದು, ಸ್ವಂತ ಸೂರಿನ ಕನಸು ಕಾಣುವ ಮಧ್ಯಮ, ಕೆಳ ಮಧ್ಯಮ ವರ್ಗದ ಜೇಬಿಗೆ ಕತ್ತರಿ ಹಾಕಿದೆ.