Ad Widget .

ಅಪರಾದ ಕೃತ್ಯಗಳ ತನಿಖೆ ವೇಳೆ ಕೈಕೊಡುತ್ತಿರುವ ಸಿಸಿ ಕ್ಯಾಮರಾಗಳು| ಗುಣಮಟ್ಟ ನಿರ್ವಹಣೆಯೇ ಸವಾಲು

ಸಮಗ್ರ ನ್ಯೂಸ್ : ಅಪರಾಧ ಕೃತ್ಯ ಗಳನ್ನು ಪತ್ತೆಹಚ್ಚಿ ಪ್ರಕರಣ ಭೇದಿಸಲು ನೆರವಾಗ ಬೇಕಾದ ಸಿಸಿ ಕೆಮರಾಗಳು ತನಿಖೆ ವೇಳೆ ಪೊಲೀಸರಿಗೆ ಕೈ ಕೊಡುತ್ತಿವೆ. ಇದಕ್ಕೆ ಕಾರಣ ಕಡಿಮೆ ಗುಣಮಟ್ಟದ ಕೆಮರಾಗಳು ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಾರ್ವಜನಿಕ ಸ್ಥಳ, ವಾಣಿಜ್ಯ ಕಟ್ಟಡಗಳಲ್ಲಿ ಅಳವಡಿಸಿರುವ ಕೆಮರಾಗಳ ಪೈಕಿ ಹೆಚ್ಚಿನವುಗಳಲ್ಲಿ ದೃಶ್ಯಗಳು ಸೆರೆಯಾಗುತ್ತಿಲ್ಲ. ಸೆರೆಯಾಗಿದ್ದರೂ ಅಸ್ಪಷ್ಟವಾಗಿರುತ್ತದೆ. ಹಾಗಾಗಿ ಪೊಲೀಸರು “ಕರ್ನಾಟಕ ಸಾರ್ವಜನಿಕ ಸುರಕ್ಷೆಯ (ಕ್ರಮಗಳ) ಜಾರಿ ಅಧಿನಿಯಮ 2017’ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದು, ಅಲ್ಲಿ ಸೂಚಿಸಿರುವ ಮಾದರಿಯಲ್ಲೇ ಸಿಸಿ ಕೆಮರಾ ಅಳವಡಿಕೆಯಾಗುವಂತೆ ಕ್ರಮ ಕೈಗೊಳ್ಳಲಿದ್ದಾರೆ.

Ad Widget . Ad Widget . Ad Widget .

30 ದಿನ ಮಾಹಿತಿ ಸಂಗ್ರಹವಿರಬೇಕು
ಅಧಿನಿಯಮದ ಪ್ರಕಾರ ದಿನಕ್ಕೆ ಸುಮಾರು 500ಕ್ಕಿಂತ ಹೆಚ್ಚು ಬಾರಿ ಜನರ ಓಡಾಟವಿರುವ ಅಥವಾ ಒಂದೇ ಬಾರಿಗೆ 100 ಮಂದಿಯ ಓಡಾಟವಿರುವ ಕಟ್ಟಡ/ಮಳಿಗೆಗಳಲ್ಲಿ ಹೈ ರೆಸೊಲ್ಯೂಷನ್‌ನ, 30 ದಿನಗಳವರೆಗೆ ದೃಶ್ಯಾವಳಿ ಸಂಗ್ರಹಿಸಿಟ್ಟುಕೊಳ್ಳಬಲ್ಲ ಸಿಸಿ ಕೆಮರಾ ಕಡ್ಡಾಯ.

3,224 ಹೈ ರೆಸಲ್ಯೂಷನ್‌ ಕೆಮರಾ
ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 15 ಕಾನೂನು ಮತ್ತು ಸುವ್ಯವಸ್ಥೆಯ ಠಾಣೆಗಳು, 4 ಸಂಚಾರ ಠಾಣೆಗಳು ಮತ್ತು ಒಂದು ಮಹಿಳಾ ಠಾಣೆ ಇವೆ. ಈ ವ್ಯಾಪ್ತಿಯೊಳಗಿನ ವಿವಿಧ ಕಟ್ಟಡಗಳಲ್ಲಿ ಒಟ್ಟು 20,870 ಸಿಸಿ ಕೆಮರಾಗಳಿವೆ. ಆದರೆ ಇದರಲ್ಲಿ ಹೈ ರೆಸೊಲ್ಯೂಷನ್‌ ಹೊಂದಿರುವ ಸಿಸಿ ಕೆಮರಾಗಳು 3,224 ಮಾತ್ರ. ಒಂದು ತಿಂಗಳ ಸ್ಟೋರೇಜ್‌ ಸಾಮರ್ಥ್ಯ ಹೊಂದಿರುವ ಸಿಸಿ ಕೆಮರಾಗಳ ಸಂಖ್ಯೆ 1,074 ಮಾತ್ರ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೆಲವು ಅಪರಾಧ ಕೃತ್ಯಗಳನ್ನು ಭೇದಿಸುವ ಸಂದರ್ಭ ಸಿಸಿ ಕೆಮರಾಗಳಿಂದ ನಿರೀಕ್ಷಿತ ಪ್ರಯೋಜನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಿಸಿ ಕೆಮರಾಗಳ ಅಳವಡಿಕೆಯ ಬಗ್ಗೆಯೂ ಹೆಚ್ಚು ಆದ್ಯತೆ ನೀಡಲು ಪೊಲೀಸರು ಮುಂದಾಗಿದ್ದಾರೆ.

ಠಾಣಾ ವ್ಯಾಪ್ತಿಗಳಲ್ಲಿ ಬೇಕಿದೆ ಉತ್ತಮ ಕ್ಯಾಮರಾಗಳು:
ದ.ಕ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆ, ಸುತ್ತಮುತ್ತ ಉತ್ತಮ ಗುಣಮಟ್ಟದ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದ್ದು, ಅವುಗಳ ನಿರ್ವಹಣೆಯನ್ನು ಕೂಡ ಸಮರ್ಪಕವಾಗಿ ನಡೆಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಾಯಿದೆ ಪ್ರಕಾರ ಸಿಸಿ ಕೆಮರಾ ಹೀಗಿರಬೇಕು
– ರೆಸೊಲ್ಯೂಷನ್‌ – ಫ‌ುಲ್‌ ಎಚ್‌ಡಿ 1920 ಗಿಂತ 1080 ಅಥವಾ ಅದಕ್ಕಿಂತ ಹೆಚ್ಚು
– ಕನಿಷ್ಠ ಇಲ್ಯುಮಿನೇಷನ್‌- 0.01 ಎಲ್‌ಯುಎಕ್ಸ್‌ ಅಥವಾ ಅದಕ್ಕಿಂತ ಹೆಚ್ಚು
– ಲೆನ್ಸ್‌- ಫೋಕಲ್‌ ಲೆಂತ್‌ 3.6 ಎಂಎಂ ಅಥವಾ ಅದಕ್ಕಿಂತ ಹೆಚ್ಚು
– ವ್ಯಾಪ್ತಿ- ಐಆರ್‌ ಎಲ್‌ಇಡಿ (ಇನ್‌ಬಿಲ್ಟ್ ಐಆರ್‌)- 50 ಯಾರ್ಡ್ಸ್‌ ಅಥವಾ ಹೆಚ್ಚು
– ಪ್ಲಾಟ್‌ಫಾರ್ಮ್ ವೀಡಿಯೋ ಫಾರ್ಮ್ಯಾಟ್‌- ಒಎನ್‌ವಿಐಎಫ್ ಕಂಪ್ಲೈಂಟ್‌ ಆರ್‌ ಈಕ್ವಲೆಂಟ್‌ (ಎಚ್‌. 264 ಕಂಪ್ರಶನ್‌)
– ಸ್ಟೋರೇಜ್‌ ಸಾಮರ್ಥ್ಯ (ಎನ್‌ವಿಆರ್‌)- ಕನಿಷ್ಠ 30 ದಿನಗಳು
– ಭದ್ರತೆಗಾಗಿ ಅಳವಡಿಸುವ ಸಿಸಿಟಿವಿ ಕೆಮರಾ ಅಥವಾ ಇತರ ಉಪಕರಣಗಳ ನಿರ್ವಹಣೆಗೆ ಪ್ರತೀ ಸಂಸ್ಥೆಯು ತಜ್ಞ ಸಿಬಂದಿ ಅಥವಾ ಏಜೆನ್ಸಿಯ ಸಿಬಂದಿಯನ್ನು ಇಟ್ಟುಕೊಂಡಿರಬೇಕು.

ಸಾರ್ವಜನಿಕ ಸುರಕ್ಷ ಕ್ರಮಗಳ ಬಗ್ಗೆ ಈಗಾಗಲೇ ಕಟ್ಟಡ ಮಾಲಕರಿಗೆ ಸೂಚನೆ ನೀಡಲಾಗಿದೆ. ಉಲ್ಲಂಘನೆ ಮಾಡಿದವರಿಗೆ ನೋಟಿಸ್‌ ನೀಡಿ ಅಗತ್ಯ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
– ದಿನೇಶ್‌ ಕುಮಾರ್‌, ಡಿಸಿಪಿ, ಮಂಗಳೂರು

ಸಾರ್ವಜನಿಕ ಸುರಕ್ಷಾ ಕಾಯಿದೆ ಪಾಲಿಕೆ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ವಯ ವಾಗುತ್ತದೆ. ಆದರೂ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಇತರ ಕಡೆಗಳಲ್ಲಿಯೂ ಕಟ್ಟಡ ಮತ್ತಿತರ ಆಯಕಟ್ಟಿನ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕೆಮರಾ ಅಳವಡಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದೇವೆ.
-ಹೃಷಿಕೇಶ್‌ ಸೋನಾವಣೆ, ಎಸ್‌ಪಿ, ದ.ಕ.

ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ 14 ಸ್ಮಾರ್ಟ್‌ಪೋಲ್‌ಗ‌ಳಲ್ಲಿ ತಲಾ 5ರಂತೆ ಒಟ್ಟು 70 ಹೈ ರೆಸೊಲ್ಯೂಷನ್‌ ಕೆಮರಾಗಳಿವೆ. ಇದರಲ್ಲಿ ಪಿಟಿಝೆಡ್‌ ಕೆಮರಾ ಕೂಡ ಇದೆ. ಅಲ್ಲದೆ ಮುಂದಿನ ಹಂತದಲ್ಲಿ ಎಎನ್‌ಪಿಆರ್‌ (ಆಟೋಮ್ಯಾಟಿಕ್‌ ನಂಬರ್‌ಪ್ಲೇಟ್‌ ರೆಕಾರ್ಡರ್‌) ಕೆಮರಾ, ಆರ್‌ಎಲ್‌ವಿಡಿ (ರೆಡ್‌ಲೈಟ್‌ ವಯಲೇಶನ್‌ ಡಿಟೆಕ್ಟರ್‌) ಮೊದಲಾದವುಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ 12 ಸ್ಥಳಗಳನ್ನು ಗುರುತಿಸಲಾಗಿದೆ. ಹೆಚ್ಚಿನ ಕೆಮರಾ ಅಳವಡಿಕೆಗೆ ಪೊಲೀಸರು ಕೂಡ ಮನವಿ ಮಾಡಿದ್ದಾರೆ.
– ಅರುಣ್‌ ಪ್ರಭಾ, ಮಂಗಳೂರು ಸ್ಮಾರ್ಟ್‌ ಸಿಟಿ ಜನರಲ್‌ ಮ್ಯಾನೇಜರ್‌

ಇದನ್ನೂ ಓದಿರಿ…

Leave a Comment

Your email address will not be published. Required fields are marked *