Ad Widget .

ಕಾಲೇಜು ದಿನಗಳಲ್ಲಿ ತೆಗೆದ ಫೋಟೋ ಹಂಚಿಕೊಂಡ ನಟಿ ರಮ್ಯಾ| ‘18ನೇ ವಯಸ್ಸಿನಲ್ಲಿ ನಾನು’

ಸಮಗ್ರ ನ್ಯೂಸ್: ನಟನೆಯಿಂದ ರಮ್ಯಾ ದೂರ ಉಳಿದುಕೊಂಡಿದ್ದರೂ ಕೂಡ ಅವರು ಚಿತ್ರರಂಗದ ಜೊತೆಗಿನ ನಂಟು ಕಡಿದುಕೊಂಡಿಲ್ಲ. ಅವರ ಮೇಲೆ ಅಭಿಮಾನಿಗಳು ಹೊಂದಿರುವ ಕ್ರೇಜ್​ ಕೂಡ ತಗ್ಗಿಲ್ಲ.

Ad Widget . Ad Widget .

ಸೆಲೆಬ್ರಿಟಿಗಳು ಆಗಾಗ ತಮ್ಮ ಹಳೇ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಆ ಫೋಟೋಗಳನ್ನು ಕಂಡಾಗ ನೆನಪಿನ ಪುಟ ತೆರೆಯುತ್ತದೆ. ಅಪರೂಪದ ಚಿತ್ರಪಟವನ್ನು ನೋಡಿ ಅಭಿಮಾನಿಗಳೂ ಖುಷಿ ಪಡುತ್ತಾರೆ. ನಟಿ ರಮ್ಯಾ  ಅವರು ಈಗೊಂದು ಫೋಟೋ ಹಂಚಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತೆಗೆದ ಫೋಟೋ ಅದು. ಅದರಲ್ಲಿ ತುಂಬ ಕ್ಯೂಟ್​ ಆಗಿ ಕಾಣುತ್ತಿರುವ ಅವರನ್ನು ಫ್ಯಾನ್ಸ್​ ಕಣ್ತುಂಬಿಕೊಂಡಿದ್ದಾರೆ.

Ad Widget . Ad Widget .

ಸದ್ಯ‌ ಈ ಫೋಟೋ ರಮ್ಯಾ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗಿದೆ. ಇದು 2000ನೇ ಇಸವಿಯಲ್ಲಿ ಕ್ಲಿಕ್ಕಿಸಿದ ಫೋಟೋ. ಆಗ ರಮ್ಯಾ ಇನ್ನೂ ‘ಸ್ಯಾಂಡಲ್​ವುಡ್​ ಕ್ವೀನ್​’ ಆಗಿರಲಿಲ್ಲ. ಚಿತ್ರರಂಗಕ್ಕೂ ಕಾಲಿಟ್ಟಿರಲಿಲ್ಲ. ಅವರಿಗೆ ಆಗ 18ರ ಪ್ರಾಯ. ‘18ನೇ ವಯಸ್ಸಿನಲ್ಲಿ ನಾನು’ ಎಂಬ ಕ್ಯಾಪ್ಷನ್​ನೊಂದಿಗೆ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *