Ad Widget .

ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಯಾಗಲಿ : ಪಿಎಫ್ಐ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ನಡೆದ ಯುವಕರ ಸರಣಿ ಕೊಲೆಗಳ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಪಿಎಫ್ಐ ರಾಜ್ಯ ಕಾರ್ಯಕಾರಿಣಿ ಆಗ್ರಹಿಸಿದೆ.

Ad Widget . Ad Widget .

ಕರಾವಳಿ ಕರ್ನಾಟಕದಲ್ಲಿ ಕೆಲ ದಿನಗಳ ಹಿಂದೆ 10 ದಿನಗಳ ಅಂತರದಲ್ಲಿ ಮೂವರು ಯುವಕರ ಹತ್ಯೆ ನಡೆದಿದೆ. ಈ ಎಲ್ಲಾ ಕೊಲೆ ಪ್ರಕರಣಗಳನ್ನು ಸಮಾನವಾಗಿ ಹಾಗೂ ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಬಿಜೆಪಿ ಸರಕಾರ ತನ್ನ ಪಕ್ಷದ ಕಾರ್ಯಕರ್ತನ ಕೊಲೆಗೆ ಮಾತ್ರ ಅತಿಯಾದ ಪ್ರಾಮುಖ್ಯತೆ ನೀಡುತ್ತಿದೆ ಮತ್ತು ಸಂಘ ಪರಿವಾರ ನಡೆಸಿದ ಅಮಾಯಕ ಮುಸ್ಲಿಮ್ ಯುವಕರ ಹತ್ಯೆ ಘಟನೆಗಳನ್ನು ಕ್ಷುಲ್ಲಕವಾಗಿ ಕಾಣುತ್ತಿದೆ.

Ad Widget . Ad Widget .

ಮೂರು ಕೊಲೆ ಪ್ರಕರಣಗಳ ಪೈಕಿ ಬಿಜೆಪಿ ಕಾರ್ಯಕರ್ತ ಅನ್ನುವ ಏಕೈಕ ಕಾರಣಕ್ಕಾಗಿ ಪ್ರವೀಣ್ ಕೊಲೆ ಪ್ರಕರಣದ ತನಿಖೆಯನ್ನು ಎನ್.ಐ.ಎಗೆ ವಹಿಸುವುದಾಗಿ ಘೋಷಿಸಲಾಗಿದೆ. ಈ ಮೂಲಕ ಕಠಿಣ ಕಾನೂನಿನ ಅಡಿಯಲ್ಲಿ ಮುಸ್ಲಿಮ್ ಸಮುದಾಯದ ಅಮಾಯಕ ಯುವಕರನ್ನು ಬೇಟೆಯಾಡುವ ರಾಜ್ಯ ಸರಕಾರದ ದುರುದ್ದೇಶವು ಇಲ್ಲಿ ಸ್ಪಷ್ಟವಾಗುತ್ತದೆ. ಆದ್ದರಿಂದ ರಾಜ್ಯ ಸರಕಾರವು ತಾರತಮ್ಯ ಧೋರಣೆಯನ್ನು ಕೈಬಿಟ್ಟು ಈ ಮೂರೂ ಪ್ರಕರಣಗಳ ಸಮಾನ ಹಾಗೂ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಆಗ್ರಹಿಸಿದೆ.
ಒತ್ತಾಯಿಸುತ್ತದೆ.

ಹತ್ಯೆಗೊಳಗಾದ ಮೂರು ಮಂದಿಯೂ ಬಡ ಕುಟುಂಬದ ಹಿನ್ನೆಲೆ ಹೊಂದಿದ್ದು ಈ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಸಮಾನ ಪರಿಹಾರ ಕಲ್ಪಸಿಕೊಡಬೇಕು. ಆದರೆ ಪ್ರವೀಣ್ ಮನೆಗೆ ಭೇಟಿ ನೀಡಿ ಸರಕಾರದ ವತಿಯಿಂದ 25 ಲಕ್ಷ ಪರಿಹಾರ ವಿತರಿಸಿದ್ದ ಸಿ.ಎಂ.ಬೊಮ್ಮಾಯಿಯವರು, ಅದೇ ಗ್ರಾಮದಲ್ಲಿ ನೆಲೆಸಿದ್ದ ಮಸೂದ್ ಮನೆಗೆ ಭೇಟಿಯೂ ನೀಡಲಿಲ್ಲ ಅಥವಾ ಪರಿಹಾರವನ್ನೂ ಘೋಷಿಸಲಿಲ್ಲ. ಅಂತೆಯೇ ಪಾಝಿಲ್ ಕುಟುಂಬಕ್ಕೂ ಸರಕಾರದ ಪ್ರತಿನಿಧಿಗಳಾಗಲೀ, ಜನಪ್ರತಿನಿಧಿಗಳಾಗಲೀ ಭೇಟಿ ನೀಡಲಿಲ್ಲ, ಪರಿಹಾರವನ್ನೂ ಕಲ್ಪಿಸಿಲ್ಲ. ಇದು ಸಹಜ ನ್ಯಾಯದ ಪರಿಕಲ್ಪನೆಗೆ ವಿರುದ್ಧವಾಗಿದ್ದು, ಆಡಳಿತ ಪಕ್ಷದ ರಾಜಕೀಯ ಹಿತಾಸಕ್ತಿ ಹೊಂದಿರುವ ಇಂತಹ ತಾರತಮ್ಯ ಧೋರಣೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಆದ್ದರಿಂದ ರಾಜ್ಯ ಸರಕಾರವು ಕೂಡಲೇ ಸಂತ್ರಸ್ತ ಕುಟುಂಬಗಳಿಗೆ ಸಮಾನ ಪರಿಹಾರವನ್ನು ಕಲ್ಪಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಆಗ್ರಹ ವ್ಯಕ್ತಪಡಿಸಿದೆ.

Leave a Comment

Your email address will not be published. Required fields are marked *