ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಬಂಧಿಸಿರುವ ಝಾಕೀರ್ ಹಾಗೂ ಶಫೀಕ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು ಆ.3ರಂದು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನಿಬ್ಬರು ಆರೋಪಿಗಳಾದ ಅಬ್ದುಲ್ ಹ್ಯಾರಿಸ್, ಶೇಕ್ ಸದ್ದಾಂ ಹುಸೇನ್ ಜೊತಗೆ ಝಾಕೀರ್ ಗೆ ಆ.12ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಪೊಲೀಸರ ಕೋರಿಕೆಯ ಮೇರೆಗೆ ಶಫೀಕ್ ನನ್ನು ಆ. 06ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಆರೋಪಿಗಳಾದ ಅಬ್ದುಲ್ ಹ್ಯಾರಿಸ್, ಶೇಕ್ ಸದ್ದಾಂ ಹುಸೇನ್ ಪಿ.ಎಫ್. ಐ ಸಂಘಟನೆ ಹಾಗೂ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರಾಗಿದ್ದರು . ಅಬ್ದುಲ್ ಹ್ಯಾರಿಸ್ ಈ ಹಿಂದೆ ವಿದೇಶದಲ್ಲಿದ್ದು ಸದ್ಯ ಊರಿನಲ್ಲೇ ಇದ್ದ. ಶೇಕ್ ಸದ್ದಾಮ್ ಹುಸೇನ್ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಹೊಂದಿದ್ದಾನೆ. ಸದ್ದಾಂ ಹುಸೇನ್ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಬೂತ್ ಸಮಿತಿಯ ಅಧ್ಯಕ್ಷನಾಗಿದ್ದಾನೆ. ಅಬ್ದುಲ್ ಹ್ಯಾರಿಸ್ ಕೋಶಾಧಿಕಾರಿಯಾಗಿ ಗುರುತಿಸಿಕೊಂಡಿದ್ದಾನೆ.