Ad Widget .

ಕುಕ್ಕೆ ಸುಬ್ರಹ್ಮಣ್ಯ: ಒಳ ಚರಂಡಿಯಿಂದ ಹೊರಬರುತ್ತಿರುವ ತ್ಯಾಜ್ಯ; ಭಕ್ತಾಧಿಗಳಿಂದ ಹಿಡಿಶಾಪ

ಸಮಗ್ರ ನ್ಯೂಸ್: ಕುಕ್ಕೇ ಶ್ರೀ ಸುಬ್ರಮಣ್ಯ ದೇವಸ್ಥಾನದ ಒಳ ಚರಂಡಿ ಅವ್ಯವಸ್ಥೆಯನ್ನು ಕೇಳುವವರಿಲ್ಲ. ಭಕ್ತಾಧಿಗಳಿಂದ ಹಿಡಿಶಾಪ ಹಾಕುತ್ತಿದ್ದಾರೆ.

Ad Widget . Ad Widget .

ತಮ್ಮ ಮನಸೋ ಇಚ್ಛೆಯಂತೆ ಒಳಚರಂಡಿ ಕಾಮಗಾರಿ ಮಾಡಿದ್ದು 5 ವರ್ಷಗಳೇ ಕಳೆದರೂ ಅಂದಿನಿಂದ ಇಂದಿನವರೆಗೂ ದುರ್ವಾಸನೆಯಿಂದ ಕೂಡಿದ್ದ ತ್ಯಾಜ್ಯ ಹೊರಬರುತ್ತಿದೆ. ಅದರಲ್ಲೂ ಕುಕ್ಕೇ ಸುಬ್ರಮಣ್ಯ ದೇವಳದಿಂದ ಆದಿಸುಬ್ರಮಣ್ಯ ದೇವಸ್ಥಾನಕ್ಕೆ ಭಕ್ತಾದಿಗಳು ಕಾಲ್ನಡಿಗೆಯಲ್ಲೇ ತೆರಳಬೇಕಾದ ಅನಿವಾರ್ಯತೆ ಇದೆ. ವಾರದ 2-3 ದಿನ ಒಳಚರಂಡಿಯಿಂದ ತ್ಯಾಜ್ಯ ಹೊರಬರುತ್ತಿದ್ದು, ಭಕ್ತಾದಿಗಳು ದೇವಸ್ಥಾನದ ವಿರುದ್ದ ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

Ad Widget . Ad Widget .

ಇದರ ಬಗ್ಗೆ ಅಧಿಕಾರಿಗಳಿಗೆ ಹಾಗೂ ಸಂಭಂದ ಪಟ್ಟವರಿಗೆ ದೂರು ನೀಡಿದ್ದರು ಯಾರು ಕೂಡ ಗಮನ ಹರಿಸುವುದಿಲ್ಲ. ಇದಕ್ಕೆ ಇರುವಂತಹ ಯಂತ್ರೋಪಕಾರಣಗಳು ಕೂಡ ಹಾಳಾಗಿದ್ದು ಇದರ ದುರಸ್ತಿಯನ್ನು ಸಹ ಮಾಡಲು ಅಧಿಕಾರಿಗಳು ತಲೆಕೆಡೆಸಿಕೊಳ್ಳುತ್ತಿಲ್ಲ. ಇದಕ್ಕೆ ಒಳಚರಂಡಿಯ ಪೈಪ್ ಸರಿಯಾದ ಅಳತೆಯಲ್ಲಿ ಅಳವಡಿಸದೆ ಸಣ್ಣ ಸೈಸ್ ಪೈಪ್ ಅಳವಡಿಕೆಯೇ ಮುಖ್ಯ ಕಾರಣವಾಗಿದೆ.

ಮಳೆಗಾಲದ ಸಮಯದಲ್ಲಿ ಇಲ್ಲಿಯ ಸ್ಥಿತಿ ಕೀಳುವಂತಿಲ್ಲ ನೀರು ತುಂಬಿ ಅಂಗಡಿಗಳಿಗೆ ನೀರು ಹರಿದು ಹೋಗುವುದು ಎಂಬುದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಇನ್ನಾದರೂ ಇದರ ಬಗ್ಗೆ ಮುತುವರ್ಜಿ ವಹಿಸಿ ಈ ಕಾಮಗಾರಿಯನ್ನು ಪರಿಶೀಲನೆಮಾಡಿ ಇದನ್ನು ಸರಿಯಾದ ರೀತಿಯಲ್ಲಿ ದುರಸ್ಥಿ ಪಡಿಸಬೇಕೆಂಬುದು ಎಲ್ಲರ ಆಗ್ರಹವಾಗಿದೆ.

Leave a Comment

Your email address will not be published. Required fields are marked *