Ad Widget .

ಪ್ರವೀಣ್ ಹಂತಕರಿಗೆ ರಾಜಧಾನಿ ನಂಟು? ರಾತ್ರೋರಾತ್ರಿ ಬೆಂಗಳೂರಿನ ಇಬ್ಬರನ್ನು ಎತ್ತಾಕೊಂಡು ಬಂದ ಸುಳ್ಯ ಪೊಲೀಸರು!

ಸಮಗ್ರ ನ್ಯೂಸ್: ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್​​ ನೆಟ್ಟಾರ್​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಇಬ್ಬರು ಆರೋಪಿಗಳನ್ನು ಸುಳ್ಯ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿ ಅಡಗಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಮಧ್ಯರಾತ್ರಿ ಅಪರೇಷನ್ ನಡೆಸಿ ವಶಕ್ಕೆ ಪಡೆದ ತಂಡ, ವಶಕ್ಕೆ ಪಡೆದು ಮಂಗಳೂರಿಗೆ ಕರೆದೊಯ್ಯಲಾಗಿದೆ.

Ad Widget . Ad Widget .

ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ ಸ್ಪೆಷಲ್ ಟೀಂ ನಿನ್ನೆ ಬೆಳಗ್ಗೆಯಿಂದಲೂ ಕಾರ್ಯಾಚರಣೆ ನಡೆಸಿದ್ದರು. ಶಂಕಿತರು ಇದ್ದ ಮನೆ ಸುತ್ತುವರೆದು ರಾತ್ರಿ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನೂ ಮಂಗಳೂರಿಗೆ ಕರೆದೊಯ್ದಿದ್ದಾರೆ.

Ad Widget . Ad Widget .

HRBR ಲೇಔಟ್​ನ ಮನೆಯೊಂದರಲ್ಲಿ ಇಬ್ಬರು ಶಂಕಿತರು ಅಡಗಿದ್ದರು ಎನ್ನಲಾಗಿದ್ದು, ಇವರು ಪ್ರವೀಣ್ ಹತ್ಯೆಯಲ್ಲಿ ಭಾಗಿಯಾಗಿದ್ದ ಹಂತಕರಾ? ಇಲ್ಲವೇ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದರಾ? ಎಂಬ ಬಗ್ಗೆ ಪೋಲಿಸ್ ಮೂಲಗಳು ಮಾಹಿತಿ ನೀಡಿಲ್ಲ. ಆದರೆ ಪ್ರವೀಣ್ ಹಂತಕರಿಗೆ ವಿವಿಧ ಪ್ರಮುಖ ನಗರಗಳಲ್ಲಿ ಸಂಪರ್ಕ ‌ಇರುವುದು ಇದರಿಂದ ಸ್ಪಷ್ಟವಾಗುತ್ತಿದೆ.

Leave a Comment

Your email address will not be published. Required fields are marked *