Ad Widget .

ಮಂಗಳೂರು: ಬೀಚ್ ನಲ್ಲಿ ಅತ್ಯಾಚಾರ ಮಾಡಿ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

ಸಮಗ್ರ ನ್ಯೂಸ್: ಮಂಗಳೂರಿನ ಎನ್ ಐ ಟಿ ಕೆ ಬೀಚ್ ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿ ಯನ್ನು ಆಕೆಯ ಸ್ನೇಹಿತ ಅತ್ಯಾಚಾರ ಮಾಡಿದ‌‌ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮುನಾಝ್ ಅಹಮ್ಮದ್(30) ಬಂಧಿತ ಆರೋಪಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೀನು ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿಟ್ಟುಕೊಂಡು ಆಕೆಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ.

Ad Widget . Ad Widget . Ad Widget .

ಜು.27 ರಂದು‌ ಎನ್ ಐಟಿಕೆ ಬೀಚ್ ಗೆ ವಿದ್ಯಾರ್ಥಿನಿ ತನ್ನ ಸಹಪಾಠಿಯೊಂದಿಗೆ ಬಂದಿದ್ದಳು. ಬೀಚ್ ಗೆ ಬಂದಿದ್ದ ಇಬ್ಬರನ್ನು ಕಂಡ ಮುನಾಝ್ ಅಹಮದ್ ವಿದ್ಯಾರ್ಥಿನಿಯ ಸಹಪಾಠಿಯನ್ನು ಹೆದರಿಸಿ ಓಡಿಸಿದ್ದಾನೆ. ಆ ಬಳಿಕ ವಿದ್ಯಾರ್ಥಿನಿಯ ಅತ್ಯಾಚಾರ ಎಸಗಿದ್ದಾನೆ.

ಅತ್ಯಾಚಾರದ ವೀಡಿಯೋ ವನ್ನು ಮೊಬೈಲ್ ‌ನಲ್ಲಿ ಚಿತ್ರಿಕರಿಸಿ ವಿದ್ಯಾರ್ಥಿನಿಗೆ ತೋರಿಸಿ ಕಿರುಕುಳ ನೀಡಲು ಆರಂಭಿಸಿದ್ದು ವಿದ್ಯಾರ್ಥಿನಿ ಪೊಲೀಸ್ ಕಮೀಷನರ್ ಭೇಟಿ ನೀಡಿ ನಡೆದ ಘಟನೆಯ ಬಗ್ಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *