July 2022

ನಾಳೆ ದ.ಕ ಜಿಲ್ಲೆಯಲ್ಲಿ ಬಂದ್ ಇಲ್ಲ – ಸಂಘಟನೆಗಳ ಸ್ಪಷ್ಟನೆ

ಸಮಗ್ರ ನ್ಯೂಸ್: ಜಾಲತಾಣಗಳಲ್ಲಿ ದ.ಕ ಜಿಲ್ಲೆಯಾದ್ಯಂತ ‌ಬಂದ್ ಗೆ‌ ಕರೆ ಕೊಟ್ಟಿರುವ ಸುದ್ದಿಯೊಂದು ಹರಿದಾಡುತ್ತಿದ್ದು, ನಾಳೆ ಜಿಲ್ಲೆಯಲ್ಲಿ ಯಾವುದೇ ಬಂದ್ ಇರುವುದಿಲ್ಲ ಎಂದು ಭಜರಂಗದಳ ಮುಖಂಡ ಶರಣ್ ಪಂಪ್ವೆಲ್ ತಿಳಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಅವರು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳಾಗಿದ್ದು ಜನತೆ ಕಿವಿಗೊಡದಂತೆ ಮನವಿ‌ ಮಾಡಿದ್ದಾರೆ.

ನಾಳೆ ದ.ಕ ಜಿಲ್ಲೆಯಲ್ಲಿ ಬಂದ್ ಇಲ್ಲ – ಸಂಘಟನೆಗಳ ಸ್ಪಷ್ಟನೆ Read More »

“ಪಕ್ಷಕ್ಕಿಂತ ಹಿಂದುತ್ವ ಮುಖ್ಯ, ಬಿಜೆಪಿ ನಪುಂಸಕ ನಾಯಕರಿಂದ ಕಠಿಣ ಕ್ರಮದ ಮಾತು ಮಾತ್ರ” ಬಿಜೆಪಿ ಯುವಮೋರ್ಚಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಯುವ ಮುಂದಾಳು ಚಂದ್ರಹಾಸ ಈಶ್ವರಮಂಗಲ

ಸಮಗ್ರ ನ್ಯೂಸ್: “ಪಕ್ಷಕ್ಕಿಂತ ಹಿಂದುತ್ವ ಮುಖ್ಯ, ಬಿಜೆಪಿ ನಾಯಕರು ನಪುಂಸಕರು” ಎಂದು ಹೇಳಿರುವ ಬಿಜೆಪಿ ಯುವಮೋರ್ಚಾ ಮಂಡಲ ಕಾರ್ಯದರ್ಶಿ ಚಂದ್ರಹಾಸ ಈಶ್ವರಮಂಗಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ಪಕ್ಷಕ್ಕಿಂತ ಹಿಂದುತ್ವ ಮುಖ್ಯ, ಇನ್ನೆಷ್ಟು ಹೆಣಗಳು ಬೇಕು? ಸಾಮಾನ್ಯ ಕಾರ್ಯಕರ್ತರದ್ದು ಇಂದು ಪ್ರವೀಣ್ ನೆಟ್ಟಾರು ನಾಳೆ ನಾವು, ಇಷ್ಟೇ ಜೀವನ ನನಗೆ ಜೀವ ಬೆದರಿಕೆ‌ ಬಂದು ಸುಮಾರು ಆರು ತಿಂಗಳುಗಳೇ ಕಳೆದು ಹೋದರೂ ಕೂಡ ಇಲ್ಲಿಯವರೆಗೆ ಪೋಲೀಸ್ ಇಲಾಖೆಯವರಿಗೆ ಅಇಥಾಾ ನಮ್ಮ ಸರಕಾರಕ್ಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇಂದು

“ಪಕ್ಷಕ್ಕಿಂತ ಹಿಂದುತ್ವ ಮುಖ್ಯ, ಬಿಜೆಪಿ ನಪುಂಸಕ ನಾಯಕರಿಂದ ಕಠಿಣ ಕ್ರಮದ ಮಾತು ಮಾತ್ರ” ಬಿಜೆಪಿ ಯುವಮೋರ್ಚಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಯುವ ಮುಂದಾಳು ಚಂದ್ರಹಾಸ ಈಶ್ವರಮಂಗಲ Read More »

ಹುಸಿಯಾದ ಕಠಿಣ ಕ್ರಮದ ಭರವಸೆ| ರಾಜ್ಯಾದ್ಯಂತ ‌ಬಿಜೆಪಿ ಕಾರ್ಯಕರ್ತರ ರಾಜಿನಾಮೆ ಶುರು

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ರಾಜಿನಾಮೆ‌ ಟ್ರೆಂಡ್ ಶುರುವಾಗಿದೆ. ಯುವಮೋರ್ಚಾದ ಹಲವರು ರಾಜೀನಾಮೆ ನೀಡಲು ಶುರು ಮಾಡಿದ್ದಾರೆ. ತಮಗೆ ನೀಡಿದ ಜವಾಬ್ದಾರಿಗೆ ರಾಜೀನಾಮೆ ನೀಡುತ್ತಿದ್ದು, ‘ಜವಾಬ್ದಾರಿಗೆ ರಾಜೀನಾಮೆ’ ಹೆಸರಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಕಠಿಣ ಕ್ರಮದ ಹೇಳಿಕೆಗಷ್ಟೆ ಬಿಜೆಪಿ ಸರ್ಕಾರ ಇದೆ, ಕಾರ್ಯಕರ್ತರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ವಾಜಪೇಯಿ, ಅಡ್ವಾಣಿ ಹೆಸರನ್ನು ಹಾಳು ಮಾಡಲಾಗುತ್ತಿದೆ‌,ಈಗಲಾದರೂ ಕಠಿಣ ಕ್ರಮ ಕೈಗೊಳ್ಳಿ ಎಂದು ಹಲವರ ರಾಜೀನಾಮೆ ನೀಡುತ್ತಿದ್ದಾರೆ.

ಹುಸಿಯಾದ ಕಠಿಣ ಕ್ರಮದ ಭರವಸೆ| ರಾಜ್ಯಾದ್ಯಂತ ‌ಬಿಜೆಪಿ ಕಾರ್ಯಕರ್ತರ ರಾಜಿನಾಮೆ ಶುರು Read More »

ಪಂಚಭೂತಗಳಲ್ಲಿ ಲೀನವಾದ ಪ್ರವೀಣ್ ನೆಟ್ಟಾರು| ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ|

ಸಮಗ್ರ ನ್ಯೂಸ್: ಬಿಜೆಪಿ ಯುವಮೋರ್ಚಾ ಮುಖಂಡ, ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರುರವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಹುಟ್ಟೂರು ನೆಟ್ಟಾರಿನಲ್ಲಿ ನಡೆಯಿತು. ಪುತ್ತೂರಿನ‌ ಪ್ರಗತಿ ಆಸ್ಪತ್ರೆಯಿಂದ ಪ್ರವೀಣ್ ಮೃತದೇಹವನ್ನು ಮೆರವಣಿಗೆ ಮೂಲಕ ಹುಟ್ಟೂರು ಬೆಳ್ಳಾರೆಯ ನೆಟ್ಟಾರಿಗೆ ತರಲಾಯಿತು. ಈ ವೇಳೆ ದಾರಿಯುದ್ದಕ್ಕೂ ನೂರಾರು ಕಾರ್ಯಕರ್ತರು ಜಮಾಯಿಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪ್ರಸಂಗ ನಡೆಯಿತು. ಈ ವೇಳೆ ಅಂತಿಮ ದರ್ಶನಕ್ಕೆ ಆಗಮಿಸಿದ ಸಚಿವರಾದ ಎಸ್.ಅಂಗಾರ, ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲುರವರಿಗೆ ಪ್ರವೀಣ್ ಅಭಿಮಾನಿಗಳು ದಿಗ್ಬಂಧನ ಹಾಕಿದರು. ಬೆಳ್ಳಾರೆಯಲ್ಲಿ

ಪಂಚಭೂತಗಳಲ್ಲಿ ಲೀನವಾದ ಪ್ರವೀಣ್ ನೆಟ್ಟಾರು| ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ| Read More »

“ಡೋಂಗಿ, ಡೋಂಗಿ” ಬಿಜೆಪಿ ನಾಯಕರ ವಿರುದ್ದ ಭುಗಿಲೆದ್ದ ಆಕ್ರೋಶ

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತರ ಆಕ್ರೋಶದ ಕಟ್ಟೆ ಓಡೆದು, ಪ್ರವೀಣ್ ನೆಟ್ಟಾರು ಅಂತಿಮ ದರ್ಶನದ ವೇಳೆ ‘ಬೇಕೇ ಬೇಕು ನ್ಯಾಯ ಬೇಕು’ ಎಂಬ ಒತ್ತಾಯ ಕೇಳಿಬಂದಿತು. ಬೆಳ್ಳಾರೆ ಪೇಟೆಯಲ್ಲಿ ಪ್ರವೀಣ್ ಮೃತದೇಹ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹಾಗೂ ಸಚಿವ ಅಂಗಾರ ಅವರನ್ನು ಸುತ್ತುವರೆದ ಕಾರ್ಯಕರ್ತರು ‘ಡೋಂಗಿ ಡೋಂಗಿ’ ಎಂದು ಧಿಕ್ಕಾರ ಕೂಗಿದರು. ಕಾರ್ಯಕರ್ತರ ಆಕ್ರೋಶಕ್ಕೆ ಕಂಗಾಲಾದ ಸಚಿವರು ಕುಳಿತಲ್ಲೇ ಕೈಕಟ್ಟಿ ಮೌನಕ್ಕೆ ಶರಣಾದರು. ಬಿಜೆಪಿ

“ಡೋಂಗಿ, ಡೋಂಗಿ” ಬಿಜೆಪಿ ನಾಯಕರ ವಿರುದ್ದ ಭುಗಿಲೆದ್ದ ಆಕ್ರೋಶ Read More »

ಬೆಳ್ಳಾರೆ ಉದ್ವಿಗ್ನ, ಪೊಲೀಸರಿಂದ ಲಾಠಿ‌ ಚಾರ್ಜ್

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಬೆಳ್ಳಾರೆ ಪ್ರಕ್ಷುಬ್ದಗೊಂಡಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಈ ವೇಳೆ ಇಬ್ಬರು ಯುವಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇದೇ ವೇಳೆ ಸಂಸದ ನಳಿನ್ ಕುಮಾರ್, ಸಚಿವ ಸುನಿಲ್ ಕುಮಾರ್, ಅಂಗಾರರಿಗೆ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ.

ಬೆಳ್ಳಾರೆ ಉದ್ವಿಗ್ನ, ಪೊಲೀಸರಿಂದ ಲಾಠಿ‌ ಚಾರ್ಜ್ Read More »

ಬೆಳ್ಳಾರೆ: ಪ್ರಭಾಕರ ಭಟ್ ಕಾರು‌ ಅಡ್ಡಗಟ್ಟಿದ ಕಾರ್ಯಕರ್ತರು

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರ ಬೆಳ್ಳಾರೆ ತಲುಪಿದ್ದು ಈ ವೇಳೆ ಪ್ರವೀಣ್ ಅಭಿಮಾನಿಗಳು ಬಿಜೆಪಿಗೆ ಹಾಗೂ ಬಿಜೆಪಿ ನಾಯಕರಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪ್ರವೀಣ್ ನೆಟ್ಟಾರುರವರ ಅಂತಿಮ ದರ್ಶನಕ್ಕೆ ಬಂದ ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ರವರ ಕಾರಿಗೆ ಹಿಂದೂ ಕಾರ್ಯಕರ್ತರು ತಡೆ ಒಡ್ಡಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾಗೂ ಸಚಿವ

ಬೆಳ್ಳಾರೆ: ಪ್ರಭಾಕರ ಭಟ್ ಕಾರು‌ ಅಡ್ಡಗಟ್ಟಿದ ಕಾರ್ಯಕರ್ತರು Read More »

ಪ್ರವೀಣ್ ಹತ್ಯೆ ಪ್ರಕರಣ: ಬಿಜೆಪಿ ದಿಕ್ಕಾರ ಕೂಗಿದ ಪ್ರವೀಣ್ ಅಭಿಮಾನಿಗಳು| ನ್ಯಾಯ ಬೇಕೆಂದು ಘೋಷಣೆ

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರ ಬೆಳ್ಳಾರೆ ತಲುಪಿದ್ದು ಈ ವೇಳೆ ಪ್ರವೀಣ್ ಅಭಿಮಾನಿಗಳು ಬಿಜೆಪಿಗೆ ಹಾಗೂ ಬಿಜೆಪಿ ನಾಯಕರಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಬೇಕು ಎಂದು ಒಕ್ಕೋರಲಿನ ಘೋಷಣೆ ಬೆಳ್ಳಾರೆಯಲ್ಲಿ ಮಾರ್ಧನಿಸುತ್ತಿದೆ. ಇದೇ ವೇಳೆ ನಿಂತಿಕಲ್ ನಲ್ಲಿ ಪಾರ್ಥಿವ ಶರೀರದ ಮೆರವಣಿಗೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಅನ್ಯಮತೀಯ ವ್ಯಕ್ತಿಯೊಬ್ಬನ ಬೈಕ್ ಅನ್ನು ಕಾರ್ಯಕರ್ತರು ಪುಡಿಗಟ್ಟಿದ್ದಾರೆ.

ಪ್ರವೀಣ್ ಹತ್ಯೆ ಪ್ರಕರಣ: ಬಿಜೆಪಿ ದಿಕ್ಕಾರ ಕೂಗಿದ ಪ್ರವೀಣ್ ಅಭಿಮಾನಿಗಳು| ನ್ಯಾಯ ಬೇಕೆಂದು ಘೋಷಣೆ Read More »

ಪ್ರವೀಣ್ ಹತ್ಯೆ ಖಂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ| ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಆಗ್ರಹ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹತ್ಯೆಯನ್ನು ಖಂಡಿಸಿದ್ದಾರೆ. ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪೊಲೀಸರು ಪ್ರವೀಣ್ ನೆಟ್ಟಾರ್ ಹತ್ಯೆಗೆ ಕಾರಣರಾದ ಹಂತಕರನ್ನು ತಕ್ಷಣ ಕೊಲೆಗಡುಕರನ್ನು ಬಂಧಿಸಬೇಕು. ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು. ಕೊಲೆಗಡುಕರ ಪಕ್ಷ, ಜಾತಿ, ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದ್ದಾರೆ.

ಪ್ರವೀಣ್ ಹತ್ಯೆ ಖಂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ| ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಆಗ್ರಹ Read More »

62ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ನಟ ಸಾಯಿಕುಮಾರ್

ಬೆಂಗಳೂರು: ಇಂದು ಸಾಯಿ ಕುಮಾರ್​ಗೆ ಹುಟ್ಟುಹಬ್ಬದ ಸಂಭ್ರಮ. ಖಾಕಿ ಇವರ ಮೇಲೆ ಸೂಟ್​ ಆಗುವಷ್ಟು ಮತ್ಯಾವ ನಟರಿಗೂ ಸೆಟ್​ ಆಗಲ್ಲ. ಇಂದು ಸಾಯಿ ಕುಮಾರ್​ 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಾಯಿ ಕುಮಾರ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟ. ಪೂರ್ಣ ಹೆಸರು ಸಾಯಿಕುಮಾರ್ ಶರ್ಮ ಪುಡಿಪೆಡ್ಡಿ. ತಂದೆ ಪಿ.ಜೆ.ಶರ್ಮಾ ನಟ ಮತ್ತು ಕಂಠದಾನ ಕಲಾವಿದರು. ತಾಯಿ ಕೃಷ್ಣ ಜ್ಯೋತಿ ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಹೋದರ ರವಿಶಂಕರ್ ಮತ್ತು ಅಯ್ಯಪ್ಪ ಕೂಡ ಕನ್ನಡ

62ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ನಟ ಸಾಯಿಕುಮಾರ್ Read More »