July 2022

ಪ್ರವೀಣ್ ಹತ್ಯೆ ಪ್ರಕರಣ| ಆಪ್ತನ ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಮುಖ ರೂವಾರಿಯೆಂದು ಪ್ರವೀಣ್ ಸ್ನೇಹಿತನನ್ನೇ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹತ್ಯೆಯ ಬಳಿಕ ಆರೋಪಿಗಳು ಕೇರಳದತ್ತ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳ ನೋಂದಾಯಿತ ಬೈಕ್ ನಲ್ಲಿ ಬಂದ ಮೂರು ಮಂದಿಯ ತಂಡ ಹತ್ಯೆ ನಡೆಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕರ್ನಾಟಕ- ಕೇರಳ ಪೊಲೀಸರು ಸಂಘಟಿತರಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರವೀಣ್ ಹತ್ಯೆ ಪ್ರಕರಣ| ಆಪ್ತನ ಬಂಧಿಸಿದ ಪೊಲೀಸರು Read More »

ಪುತ್ತೂರು: ಸಾಮಾನ್ಯ ಸಭೆ ಬಹಿಷ್ಕಾರ

ಸಮಗ್ರ ನ್ಯೂಸ್: ಜು.28ರಂದು ನಡೆಯಬೇಕಿದ್ದ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯನ್ನು ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರು ಬಹಿಷ್ಕಾರ ಮಾಡಿದ್ದಾರೆ. ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಯಾದರೂ ಕೂಡ ಕರ್ನಾಟಕದ ಬಿಜೆಪಿ ನಾಯಕರ ಮೌನ ಹಾಗೂ ಕಠಿಣ ಕ್ರಮ ಎಂಬ ಬಾಯಿ ಮಾತಿಗೆ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾರೆ. ಬಿಜೆಪಿಯ ಬೆಂಬಲಿತರಾದ ಚಂದ್ರಹಾಸ ಈಶ್ವರಮಂಗಲ, ಪ್ರದೀಪ್ ರೈ ಕರ್ನೂರು, ಪ್ರಫುಲ್ಲ ಕರ್ನೂರು, ಕುಮಾರನಾಥ, ಪೂಜಾರಿ ಕರ್ನೂರು, ವೆಂಕಪ್ಪ ನಾಯ್ಕ, ಶಶಿಕಲಾ, ಸವಿತಾ,

ಪುತ್ತೂರು: ಸಾಮಾನ್ಯ ಸಭೆ ಬಹಿಷ್ಕಾರ Read More »

ಪ್ರವೀಣ್ ಮನೆಗೆ ಇಂದು ಸಿಎಂ ಬೊಮ್ಮಾಯಿ ಭೇಟಿ

ಸಮಗ್ರ ನ್ಯೂಸ್: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮುಂದಾಳು ಪ್ರವೀಣ್ ನೆಟ್ಟಾರು ಮನೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ‌ ಜೊತೆ ಈ ವಿಷಯ ತಿಳಿಸಿದ್ದು, ಮಧ್ಯಾಹ್ನ 3.15ಕ್ಕೆ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ನೆಟ್ಟಾರಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದರು. ಸಿಎಂ ಜೊತೆ ಇನ್ನಿತರ ಪಕ್ಷದ ಮುಖಂಡರು ಆಗಮಿಸಲಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

ಪ್ರವೀಣ್ ಮನೆಗೆ ಇಂದು ಸಿಎಂ ಬೊಮ್ಮಾಯಿ ಭೇಟಿ Read More »

ಪ್ರವೀಣ್ ಹತ್ಯೆ ಪ್ರಕರಣ| ಪ್ರಮುಖ ಆರೋಪಿಯ ಬಂಧನ?

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೋರ್ವನನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬೆಳ್ಳಾರೆ ಪೊಲೀಸರು ‌ಶಂಕಿತ ಆರೋಪಿಯನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತನನ್ನು ಬೆಳ್ಳಾರೆ ಮೂಲದ ಬೀಡು ನಿವಾಸಿ ಎಂದು ಹೇಳಲಾಗಿದೆ. ಆದರೆ‌ ಪೊಲೀಸರು ಈ ಕುರಿತು ಯಾವುದೇ‌ ಸ್ಪಷ್ಟನೆ ನೀಡಿಲ್ಲ.

ಪ್ರವೀಣ್ ಹತ್ಯೆ ಪ್ರಕರಣ| ಪ್ರಮುಖ ಆರೋಪಿಯ ಬಂಧನ? Read More »

ಇಂದಿನಿಂದ ಕಾಮನ್‌ವೆಲ್ತ್ ಗೇಮ್ಸ್| ಪದಕ ಬೇಟೆಗೆ ಭಾರತದ ಹುಲಿಗಳು ಸಜ್ಜು

ಸಮಗ್ರ ನ್ಯೂಸ್: 22ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಬರ್ಮಿಂಗ್ ಹ್ಯಾಮ್ ನಲ್ಲಿ ಆರಂಭವಾಗಲಿದ್ದು, ಅದಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ. ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಅದ್ದೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ವೇಳೆ 30,000ಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಣಿ ಎಲಿಜಬೆತ್ ಅನುಪಸ್ಥಿತಿಯಲ್ಲಿ ರಾಜಕುಮಾರ ಚಾರ್ಲ್ಸ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ರಾಣಿ ಎಲಿಜಬೆತ್ ಬಕಿಂಗ್ ಹ್ಯಾಮ್ ಅರಮನೆಯಿಂದಲೇ ಸಂದೇಶವನ್ನು ಓದುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದ ವೇಳೆ ಲೇಸರ್ ಶೋ

ಇಂದಿನಿಂದ ಕಾಮನ್‌ವೆಲ್ತ್ ಗೇಮ್ಸ್| ಪದಕ ಬೇಟೆಗೆ ಭಾರತದ ಹುಲಿಗಳು ಸಜ್ಜು Read More »

ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ| ಕೆರೆಬಿಯನ್ ನಾಡಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ

ಸಮಗ್ರ ನ್ಯೂಸ್: ವೆಸ್ಟ್ ಇಂಡೀಸ್ ವಿರುದ್ಧದ ಮಳೆ ಬಾಧಿತ ಅಂತಿಮ ಏಕದಿನ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ 119 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ 3-0 ಅಂತರದ ಕ್ಲೀನ್‌ಸ್ವೀಪ್ ಜಯ ಸಾಧಿಸಿದೆ. ಮಳೆಯಿಂದಾಗಿ ಓವರ್‌ಗಳ ಸಂಖ್ಯೆಯನ್ನು ಇಳಿಕೆ ಮಾಡಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಶುಭಮನ್ ಗಿಲ್ ಹಾಗೂ ನಾಯಕ ಶಿಖರ್ ಧವನ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೂರು ವಿಕೆಟ್

ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ| ಕೆರೆಬಿಯನ್ ನಾಡಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ Read More »

ಇಂದಿನಿಂದ ವಿಶ್ವದಾದ್ಯಂತ ‘ವಿಕ್ರಾಂತ್ ರೋಣ’ ಅಬ್ವರ| 2500 ಸ್ಕ್ರೀನ್ ಗಳಲ್ಲಿ ಶೋ ಕಾಣಲಿದೆ ಕಿಚ್ಚನ ಸಿನಿಮಾ

ಸಮಗ್ರ ನ್ಯೂಸ್: ಜಗತ್ತಿನಾದ್ಯಂತ ಇಂದು ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲಿದೆ. 2500 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ತೆರೆ ಕಾಣಲಿದೆ. ವಿಶ್ವದಾತ್ಯಂತ ಮೊದಲ ದಿನ 9 ಸಾವಿರಕ್ಕೂ ಹೆಚ್ಚು ಶೋ ಪ್ರದರ್ಶನ ಕಾಣಲಿದೆ. ಕರ್ನಾಟಕದಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ತೆರೆ ಕಾಣಲಿದ್ದು, 65 ಮಲ್ಟಿಪ್ಲೆಕ್ಸ್ ನಲ್ಲಿ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲಿದೆ. ರಾಜ್ಯಾದ್ಯಂತ ಇಂದು 2500 ಶೋ ನಡೆಯುವ ಸಾಧ್ಯತೆ ಇದೆ. ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿ,

ಇಂದಿನಿಂದ ವಿಶ್ವದಾದ್ಯಂತ ‘ವಿಕ್ರಾಂತ್ ರೋಣ’ ಅಬ್ವರ| 2500 ಸ್ಕ್ರೀನ್ ಗಳಲ್ಲಿ ಶೋ ಕಾಣಲಿದೆ ಕಿಚ್ಚನ ಸಿನಿಮಾ Read More »

ಮನೆಯ ಕನಸನ್ನು ನುಚ್ಚುನೂರುಗೊಳಿಸಿದ ದುಷ್ಕರ್ಮಿಗಳು| ಗೃಹನಿರ್ಮಾಣಕ್ಕೆ ಮಾಡಿದ ಜಾಗದಲ್ಲೇ ಹೊತ್ತಿ‌ಉರಿದ ಪ್ರವೀಣ್ ಚಿತೆ|

ಸಮಗ್ರ ನ್ಯೂಸ್: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಪ್ರವೀಣ್‌ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ನೆಟ್ಟಾರುವಿನಲ್ಲಿ ನೆರವೇರಿಸಲಾಗಿದೆ. ಈ ವೇಳೆ ನೆರೆದಿದ್ದ ಸಾವಿರಾರು ಮಂದಿ ತಮ್ಮ ಅಂತಿಮ ನಮನ ಸಲ್ಲಿಸಿದ್ದಾರೆ. ಮೂರು ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರವೀಣ್‌ ನೆಟ್ಟಾರು, ಸುಂದರವಾದ ಮನೆಯೊಂದನ್ನು ಕಟ್ಟಿಸಿಕೊಳ್ಳಲು ಚಿಂತನೆ ನಡೆಸಿದ್ದು, ಇದಕ್ಕಾಗಿ ತಮ್ಮ ಜಾಗವನ್ನು ಸಮತಟ್ಟುಗೊಳಿಸಿದ್ದರು ಎನ್ನಲಾಗಿದೆ. ಇದೀಗ ಅದೇ ಜಾಗದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಪ್ರವೀಣ್‌ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು,

ಮನೆಯ ಕನಸನ್ನು ನುಚ್ಚುನೂರುಗೊಳಿಸಿದ ದುಷ್ಕರ್ಮಿಗಳು| ಗೃಹನಿರ್ಮಾಣಕ್ಕೆ ಮಾಡಿದ ಜಾಗದಲ್ಲೇ ಹೊತ್ತಿ‌ಉರಿದ ಪ್ರವೀಣ್ ಚಿತೆ| Read More »

ಪ್ರವೀಣ್ ಹತ್ಯೆ ಹಿನ್ನಲೆ| ಜನೋತ್ಸವ ಸಮಾವೇಶ ರದ್ದುಗೊಳಿಸಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಒಂದು ವರ್ಷ ಪೂರ್ಣಗೊಂಡಿದ್ದು, ವರ್ಷಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜನೋತ್ಸವ ಸಮಾವೇಶವನ್ನು ರದ್ದುಗೊಳಿಸಲಾಗಿದೆ. ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 12.30 ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿ ಈ ವಿಷಯ ಪ್ರಕಟಿಸಿದ್ದಾರೆ. ಪ್ರವೀಣ್ ಹತ್ಯೆ ನನಗೆ ನೋವು ಹಾಗೂ ಸಂಕಟ ತಂದಿದ್ದು, ಮನಸ್ಸಿಗೆ ತುಂಬಾ ಘಾಸಿಯಾಗಿರುವುದರಿಂದ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವರ್ಷಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಯುವ ಮುಖಂಡ

ಪ್ರವೀಣ್ ಹತ್ಯೆ ಹಿನ್ನಲೆ| ಜನೋತ್ಸವ ಸಮಾವೇಶ ರದ್ದುಗೊಳಿಸಿದ ರಾಜ್ಯ ಸರ್ಕಾರ Read More »

ಪ್ರವೀಣ್ ಕೊಲೆ ಹಿಂದೆ ಎರಡು ಮೂರು ಕಾರಣಗಳಿವೆ – ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ

ಸಮಗ್ರ ನ್ಯೂಸ್:ಹಿಂದೂ‌ ಕಾರ್ಯಕರ್ತ ಪ್ರವೀಣ್ ಹತ್ಯೆಯ ತನಿಖೆ ಪ್ರಗತಿಯಲ್ಲಿದ್ದು ಹತ್ಯೆಗೆ 2- 3 ಕಾರಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂಬ ಸ್ಫೋಟಕ ಮಾಹಿತಿಯನ್ನು ರಾಜ್ಯದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ನೀಡಿದ್ದಾರೆ. ಬೆಳ್ಳಾರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಹತ್ಯೆಯ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪ್ರಕರಣದ ಕುರಿತಾಗಿ ಮುಖ್ಯಮಂತ್ರಿಗಳು ಗೃಹಸಚಿವರು ನಿನ್ನೆಯಿಂದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಿನ್ನೆ ಮತ್ತು ಇಂದು ಹಿರಿಯ

ಪ್ರವೀಣ್ ಕೊಲೆ ಹಿಂದೆ ಎರಡು ಮೂರು ಕಾರಣಗಳಿವೆ – ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ Read More »