July 2022

ಪ್ರವೀಣ್ ಹತ್ಯೆಗೆ ಡಿ.ಕೆ ಶಿ ಸಂತಾಪ| ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ

ಸಮಗ್ರ ನ್ಯೂಸ್: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರವೀಣ್ ನೆಟ್ಟಾರು ಭೀಕರ ಹತ್ಯೆಗೀಡಾಗಿದ್ದು ಬೇಸರದ ಸಂಗತಿ. ಪ್ರವೀಣ್ ನೆಟ್ಟಾರು ಕುಟುಂಬ, ಸ್ನೇಹಿತ ವರ್ಗಕ್ಕೆ ಸಂತಾಪಗಳು. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.

ಪ್ರವೀಣ್ ಹತ್ಯೆಗೆ ಡಿ.ಕೆ ಶಿ ಸಂತಾಪ| ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ Read More »

ಪ್ರತಿಭಟನೆ ಹಿನ್ನಲೆ; ಪುತ್ತೂರು ಉಪವಿಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ

ಸಮಗ್ರ ನ್ಯೂಸ್: ಪ್ರವೀಣ್​ ಹತ್ಯೆ ಖಂಡಿಸಿ, ಭಾರಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯಮಾರಾಟ ಬಂದ್ ಮಾಡಲು ಆದೇಶಿಸಲಾಗಿದೆ. ನಾಳೆ (ಜುಲೈ 29) ಮಧ್ಯರಾತ್ರಿ 12 ಗಂಟೆವರೆಗೆ ಮದ್ಯದ ಅಂಗಡಿಗಳನ್ನು ಮುಚ್ಚಲು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ಉಪವಿಭಾಗ ವ್ಯಾಪ್ತಿಯಾಗಿರುವ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ ವ್ಯಾಪ್ತಿಗೆ ಆದೇಶ ಜಾರಿಯಾಗಿದೆ.

ಪ್ರತಿಭಟನೆ ಹಿನ್ನಲೆ; ಪುತ್ತೂರು ಉಪವಿಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ Read More »

ಪ್ರವೀಣ್ ನೆಟ್ಟಾರು ಹತ್ಯೆ| ಸುಳ್ಯ ತಾಲೂಕು ಮತ್ತೆ ಉದ್ವಿಗ್ನ

ಸಮಗ್ರ ನ್ಯೂಸ್: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ನಡುವೆಯೇ ತಾಲೂಕಿನಾದ್ಯಂತ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವೆಡೆ ಟಯರ್ ಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದ್ದಾರೆ. ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಗುತ್ತಿಗಾರುನಲ್ಲಿ ಶಂಕಿತ ಆರೋಪಿ ಶಪೀಕ್ ಕೆಲಸ ಮಾಡುತ್ತಿದ್ದ ಅಂಗಡಿಗೆ ದಾಳಿ ನಡೆಸಿದ ಕಾರ್ಯಕರ್ತರು ಅಂಗಡಿಗೆ ಹಾನಿ‌ ನಡೆಸಿದ್ದಾರೆ. ಸುಳ್ಯ ನಗರದಲ್ಲೂ ಆತಂಕ ಮನೆ ಮಾಡಿದ್ದು, ಕೆಲವೆಡೆ

ಪ್ರವೀಣ್ ನೆಟ್ಟಾರು ಹತ್ಯೆ| ಸುಳ್ಯ ತಾಲೂಕು ಮತ್ತೆ ಉದ್ವಿಗ್ನ Read More »

ಪ್ರವೀಣ್ ಹತ್ಯೆ ನೋವು ತಂದಿದೆ; ಹಂತಕರಿಗೆ ತಕ್ಕ ಶಿಕ್ಷೆಗೆ ಕ್ರಮ| ಬೆಳ್ಳಾರೆಯಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ

ಸಮಗ್ರ ನ್ಯೂಸ್: ಪ್ರವೀಣ್ ಅವರ ಹತ್ಯೆ ಬಹಳ ನೋವು ತಂದಿದೆ ಹಾಗೂ ಇದು ರಾಜ್ಯ ಸರಕಾರ ಇದೀಗ ಹಿಂದೂ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿದೆ. ನಾವು ಈ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಕಠೀಣವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಬೆಳ್ಳಾರೆಯ ನೆಟ್ಟಾರು ಪ್ರವೀಣ್ ಮನೆಗೆ ಭೇಟಿ‌ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ಈ ವಿಷಯ ತಿಳಿಸಿದರು. ಪ್ರವೀಣ್ ಬಡ ಕುಟುಂಬದ ಯುವಕ ನಮ್ಮ ಪಕ್ಷದ ಕಾರ್ಯಕರ್ತ ಹಾಗಾಗಿ

ಪ್ರವೀಣ್ ಹತ್ಯೆ ನೋವು ತಂದಿದೆ; ಹಂತಕರಿಗೆ ತಕ್ಕ ಶಿಕ್ಷೆಗೆ ಕ್ರಮ| ಬೆಳ್ಳಾರೆಯಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ Read More »

ನಟಿ ಸಂಯುಕ್ತಾ ಹೆಗಡೆ ಚಿತ್ರೀಕರಣದ ವೇಳೆ ಅವಘಡ; ಗಂಭೀರ ಗಾಯ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಯುಕ್ತಾ ಹೆಗಡೆಗೆ ಶೂಟಿಂಗ್ ವೇಳೆ ಅವಘಡವಾಗಿದ್ದು, ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ. ಕ್ರೀಮ್ ಎಂಬ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಕಾಲೆತ್ತಿ ಹೊಡೆಯಲು ಹೋಗಿ ಸಂಯುಕ್ತಾ ಕೆಳಕ್ಕೆ ಬಿದ್ದಿದ್ದಾರೆ. ಬಳಿಕ ತೀವ್ರ ನೋವಿನಿಂದ ಕೂಗಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ವೈದ್ಯರು 15 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ನಟಿ ಸಂಯುಕ್ತಾ ಹೆಗಡೆ ಚಿತ್ರೀಕರಣದ ವೇಳೆ ಅವಘಡ; ಗಂಭೀರ ಗಾಯ Read More »

ತಿರುಪತಿ; ಕಾರು ಮತ್ತು ಲಾರಿ ಅಪಘಾತ, ಕರ್ನಾಟಕದ ಇಬ್ಬರು ಸಾವು

ತಿರುಪತಿ (ಆಂಧ್ರಪ್ರದೇಶ): ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕರ್ನಾಟಕದ ಇಬ್ಬರು ಮೃತಪಟ್ಟ ಘಟನೆಯೊಂದು ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಚಿಲ್ಲಕೂರು ಮಂಡಲದ ವಾರಗಲಿ ಕ್ರಾಸ್ ರಸ್ತೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಬಸವರಾಜು ಮತ್ತು ಮಂಜು ಎಂದು ಗುರುತಿಸಲಾಗಿದ್ದು, ಕರ್ನಾಟಕದ ಯಾವ ಊರಿನವರು ಎಂದು ಇನ್ನಷ್ಟೇ ತಿಳಿಯಬೇಕಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಗಿರೀಶ್, ಶಿವರಾಮ ಕೃಷ್ಣ ಮತ್ತು ವೆಂಕಟೇಶ್ ಎಂಬವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವ. ಇವರು ಕಾರಿನಲ್ಲಿದ್ದವರು ನಾಯ್ಡು ಪೇಟೆಗೆ ಹೋಗುತ್ತಿದ್ದರು

ತಿರುಪತಿ; ಕಾರು ಮತ್ತು ಲಾರಿ ಅಪಘಾತ, ಕರ್ನಾಟಕದ ಇಬ್ಬರು ಸಾವು Read More »

ನಿಯಂತ್ರಣ ತಪ್ಪಿ ಆಂಬುಲೆನ್ಸ್ ಸೇತುವೆಗೆ ಡಿಕ್ಕಿ; ಚಾಲಕನಿಗೆ ಗಾಯ

ತುಮಕೂರು: ಶಿರಾದಿಂದ ತುಮಕೂರು ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆ ತರುತ್ತಿದ್ದ ಆಂಬುಲೆನ್ಸ್ ತುಮಕೂರು ನಗರದ ಶಿರಾ ಗೇಟ್ ಎಸ್.ಮಾಲ್ ಬಳಿ ಅಪಘಾತಕ್ಕಿಡಾಗಿದೆ. ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಚಾಲಕನಿಗೆ ಗಾಯವಾಗಿದೆ. ಇನ್ನು ಈ ರಸ್ತೆ ಕಿರಿದಾಗಿದೆ. ಹಾಗಾಗಿ ಈ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ. ಆಂಬುಲೆನ್ಸ್ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕನಿಗೆ ಗಾಯಗೊಂಡಿದ್ದಾನೆ. ಚಾಲಕನಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಯಂತ್ರಣ ತಪ್ಪಿ ಆಂಬುಲೆನ್ಸ್ ಸೇತುವೆಗೆ ಡಿಕ್ಕಿ; ಚಾಲಕನಿಗೆ ಗಾಯ Read More »

ಬೈಕ್ ಅಪಘಾತ; ಕಾಲೇಜು ಉಪನ್ಯಾಸಕ ಸಾವು

ಅಂಕೋಲಾ: ಸವಾರನ ನಿಯಂತ್ರಣ ತಪ್ಪಿ ಬೈಕ್‌ ಉರುಳಿದ ಬಿದ್ದ ಪರಿಣಾಮ ಕಾಲೇಜ್ ಉಪನ್ಯಾಸಕ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ತಾಲೂಕಿನ ರಾ.ಹೆ.66ರ ಬೆಳೆಸೆಯಲ್ಲಿ ಗುರುವಾರ ನಡೆದಿದೆ. ತಾಲೂಕಿನ ವಾಸರೆಕುದ್ರಿಗೆಯ ನಿವಾಸಿ ಅರವಿಂದ್ ಬೀರಾ ಆಗೇರ (49) ಮೃತಪಟ್ಟ ದುರ್ದೈವಿ. ಅರವಿಂದ್ ಅಂಕೋಲಾ ಪಟ್ಟಣದ ಪಿ.ಎಂ.ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ವಿಷಯದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮುಂಜಾನೆ ವಾಸರೆ ಕುದ್ರಿಗೆಯಿಂದ ಕಾಲೇಜಿಗೆ ಬರುತ್ತಿರುವ ವೇಳೆ ಬೈಕ್ ಸ್ಕಿಡ್ ಆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಬೈಕ್ ಅಪಘಾತ; ಕಾಲೇಜು ಉಪನ್ಯಾಸಕ ಸಾವು Read More »

ಎರಡೇ ದಿನಗಳಲ್ಲಿ ಪ್ರವೀಣ್ ಕೊಲೆಗೆ ಸ್ಕೆಚ್ ಹಾಕಿದವರ ಬಂಧನ

ಸಮಗ್ರ ನ್ಯೂಸ್: ಹಿಂದೂ ಯುವ ಮುಖಂಡ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಳ್ಳಾರೆಯ ಶಫೀಕ್ ಹಾಗೂ ಸವಣೂರು ಮೂಲದ ಝಾಕಿರ್ ಎಂದು ಗುರುತಿಸಲಾಗಿದೆ. ಬಂಧಿತ ವ್ಯಕ್ತಿಗಳು ಪ್ರವೀಣ್ ಹತ್ಯೆಗೆ ಸ್ಕೆಚ್ ಹಾಕಿಕೊಟ್ಟವರು ಎಂದು ಹೇಳಲಾಗಿದೆ. ಅಕ್ಷಯ ಚಿಕನ್‌ ಸೆಂಟರ್‌ ನಲ್ಲಿ ಕೆಲಸ ಮಾಡುತ್ತಿರುವ ಮಧು ರಾಯನ್‌ ಅವರು ನೀಡಿದ ದೂರಿನಂತೆ ಕೃತ್ಯವೆಸಗಿದ ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಲಾಗಿತ್ತು. ಎರಡೇ ದಿನದೊಳಗೆ ಪ್ರಮುಖರೆಂದು ಹೇಳಲಾಗುತ್ತಿರುವ ಶಂಕಿತರನ್ನು ಬಂಧಿಸಿದ್ದಾರೆ. ಬೆಳ್ಳಾರೆಯಲ್ಲಿ ಎಡಿಜಿಪಿ‌

ಎರಡೇ ದಿನಗಳಲ್ಲಿ ಪ್ರವೀಣ್ ಕೊಲೆಗೆ ಸ್ಕೆಚ್ ಹಾಕಿದವರ ಬಂಧನ Read More »

ಪ್ರವೀಣ್ ಹತ್ಯೆ ಪ್ರಕರಣ|ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾಕಿರ್ ಹಾಗೂ ಮೊಹಮ್ಮದ್ ಶಪೀಕ್ ಎಂದು ಗುರುತಿಸಲಾಗಿದೆ. ಬೆಳ್ಳಾರೆಯಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಅಲೋಕ್ ಕುಮಾರ್ ಈ ವಿಷಯ ತಿಳಿಸಿದ್ದಾರೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಕಾಸರಗೋಡಿನಲ್ಲಿ‌ ಆರೋಪಿಗಳನ್ನು ಬಂಧಿಸಲಾಗಿದ್ದು ಇವರು ಬೆಳ್ಳಾರೆ ಹಾಗೂ ಸವಣೂರು ಮೂಲದವರು ಎಂದು ಹೇಳಲಾಗಿದೆ. ಇದುವರೆಗೆ 21 ಜನರನ್ನು ಅರೆಸ್ಟ್ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಇರುವ

ಪ್ರವೀಣ್ ಹತ್ಯೆ ಪ್ರಕರಣ|ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ ಪೊಲೀಸರು Read More »