July 2022

ಪ್ರವೀಣ್ ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ; ಯುವ ಮೋರ್ಚಾದಿಂದ 15ಲಕ್ಷ ಚೆಕ್ ವಿತರಣೆ

ಸಮಗ್ರ ನ್ಯೂಸ್: ದುಷ್ಕರ್ಮಿಗಳಿಂದ ಸಾವಿಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಸಂಸದ ತೇಜಸ್ವಿ‌ ಸೂರ್ಯ ಭೇಟಿ‌ ನೀಡಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ ಭರವಸೆ ನೀಡಿದ ಅವರು ಬಿಜೆಪಿ ರಾಜ್ಯ ಯುವ ಮೋರ್ಚಾದಿಂದ 15 ಲಕ್ಷ ಚೆಕ್ ವಿತರಿಸಿದರು.

ಪ್ರವೀಣ್ ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ; ಯುವ ಮೋರ್ಚಾದಿಂದ 15ಲಕ್ಷ ಚೆಕ್ ವಿತರಣೆ Read More »

ಪ್ರವೀಣ್ ಹತ್ಯೆ ಪ್ರಕರಣ ಹಿನ್ನಲೆ; ಪೊಲೀಸ್ ಇಲಾಖೆಯ ಅಧಿಕಾರಿಗಳ ಎತ್ತಂಗಡಿ| ಬೆಳ್ಳಾರೆ ಮತ್ತು ಸುಬ್ರಮಣ್ಯಕ್ಕೆ ನೂತನ ಪಿಎಸೈಗಳ ನೇಮಕ

ಸಮಗ್ರ ನ್ಯೂಸ್: ಕರಾವಳಿಯಲ್ಲಿ 10 ದಿನದಲ್ಲೆ ನಡೆದ ಮೂರು ಕೊಲೆಗಳ ಪರಿಣಾಮ ಇದೀಗ ಸುಳ್ಯ ಬೆಳ್ಳಾರೆಯ ಗ್ರಾಮಾಂತರ ಠಾಣೆಯ ಪಿಎಸ್ ಐ ರುಕ್ಮಯ್ಯ ನಾಯ್ಕರನ್ನು ವರ್ಗಾವಣೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಬೆಳ್ಳಾರೆಯ ನೆಟ್ಟಾರಿನ ಪ್ರವೀಣ್ ಹತ್ಯೆಯ ಹಿನ್ನೆಲೆ ಪೋಲಿಸ್ ಇಲಾಖೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗಿದೆ. ಇದೀಗ ಬೆಳ್ಳಾರೆಯ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್ ಐ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಳಕ್ಕೆ ನೂತನ ಪಿಎಸ್ ಐ ಆಗಿ ಸುಹಾಸ್ ಅವರನ್ನು ನೇಮಕ ಮಾಡಲಾಗಿದೆ.

ಪ್ರವೀಣ್ ಹತ್ಯೆ ಪ್ರಕರಣ ಹಿನ್ನಲೆ; ಪೊಲೀಸ್ ಇಲಾಖೆಯ ಅಧಿಕಾರಿಗಳ ಎತ್ತಂಗಡಿ| ಬೆಳ್ಳಾರೆ ಮತ್ತು ಸುಬ್ರಮಣ್ಯಕ್ಕೆ ನೂತನ ಪಿಎಸೈಗಳ ನೇಮಕ Read More »

ರಸ್ತೆ ಅಪಘಾತ ದಲ್ಲಿ ವೈದ್ಯರು ಸಾವು

ಕೊಪ್ಪಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನ ಮಂಗಳಪುರ ಬಳಿ ಗುರುವಾರ ನಡೆದ ಅಪಘಾತದಲ್ಲಿ ತಾಲ್ಲೂಕಿನ ಬೆಟಗೇರಿ ಗ್ರಾಮದ ಆರ್‌ಎಂಪಿ ವೈದ್ಯ ಕಲಿಗಣನಾಥ (65) ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಮೇಲೆಲ್ಲಾ ದಿನಬಳಕೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ ದಲ್ಲಿ ವೈದ್ಯರು ಸಾವು Read More »

ಎಂಟು ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಬಲಿ

ಶಿವಮೊಗ್ಗ: ಕಳೆದ ಎಂಟು ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆಯೊಂದು ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ. ಮೇಗರವಳ್ಳಿಯ ಕೆಪಿ ರಸ್ತೆಯ ಸಂಜೀವ ಅವರ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿವೆ. ಇದರಿಂದ ಆ ಕುಟುಂಬದವರು ಕಂಗಾಲಾಗಿದ್ದಾರೆ. ಹೌದು, ಸಂಜೀವ ಅವರ ಪುತ್ರಿ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅನಾರೋಗ್ಯದ ಕಾರಣ ಬುಧವಾರ ಮೃತಪಟ್ಟಿದ್ದರು. ಎರಡು ತಿಂಗಳ ಹಿಂದೆ ಅವರ ಮೊದಲ ಪುತ್ರಿ ಪೂರ್ಣಿಮಾ ಸಾವನ್ನಪ್ಪಿದ್ದರು. ಈ ಮೊದಲು ಸಂಜೀವ ಅವರ ತಾಯಿ ಮೃತಪಟ್ಟಿದ್ದರು. ಗುರುವಾರ ಬೆಳಗಿನ ಜಾವ ಸಂಜೀವ

ಎಂಟು ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಬಲಿ Read More »

ಸರಕು ತುಂಬಿದ ಲಾರಿಗೆ ಬೆಂಕಿ

ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸರಕು ತುಂಬಿದ ಲಾರಿಯೊಂದಕ್ಕೆ ಬೆಂಕಿ ತಾಗಿ ಲಾರಿ ಹೊತ್ತಿ ಉರಿದ ಘಟನೆಯೊಂದು ಶುಕ್ರವಾರ ಬೆಳಿಗ್ಗೆ 7.30 ಸುಮಾರಿಗೆ ನಡೆದಿದೆ. ಸಿಮೆಂಟ್ ತುಂಬಿದ ಲಾರಿಯಾಗಿದ್ದು ಲಾರಿಯ ಲೈನರ್ ಹೀಟ್ ಆಗಿ ಬೆಂಕಿ ಕಾಣಿಸಿಕೊಂಡು ಬೆಂಕಿ ಉರಿಯಿತು. ನಂತರ ಅಗ್ನಿಶಾಮಕದವರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ಆರಿಸಿದ್ದಾರೆ. ಲಾರಿಯ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಅದರಲ್ಲಿದ್ದ ಸಿಮೆಂಟಿಗೂ ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿಲ್ಲ.

ಸರಕು ತುಂಬಿದ ಲಾರಿಗೆ ಬೆಂಕಿ Read More »

ಪುತ್ತೂರು:‌ ಪಂಚಾಯತ್ ಸದಸ್ಯರಿಂದ ಸಾಮೂಹಿಕ ರಾಜಿನಾಮೆಗೆ ಚಿಂತನೆ!?

ಸಮಗ್ರ ನ್ಯೂಸ್: ಪುತ್ತೂರು‌ ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರಿಂದ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆಗೆ ಚಿಂತನೆ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ಗಮನಿಸಿದಾಗ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯರು ರಾಜೀನಾಮೆ ಚಿಂತನೆ ನಡೆಸಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ.ನಿನ್ನೆ ನಡೆದ ಸಾಮಾನ್ಯ ಸಭೆಗೆ ಕೂಡ ಬಹಿಷ್ಕಾರ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದೀಗ ಎಲ್ಲಾ ಸದಸ್ಯರು ರಾಜೀನಾಮೆ ಕೊಡುವ ಚಿಂತನೆಯಲ್ಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.

ಪುತ್ತೂರು:‌ ಪಂಚಾಯತ್ ಸದಸ್ಯರಿಂದ ಸಾಮೂಹಿಕ ರಾಜಿನಾಮೆಗೆ ಚಿಂತನೆ!? Read More »

ಫಾಝಿಲ್ ಹತ್ಯೆ‌ ಪ್ರಕರಣ| 14 ಮಂದಿ ಪೊಲೀಸರ ವಶಕ್ಕೆ| ಜನಸ್ತೋಮದ ಮಧ್ಯೆ ಅಂತ್ಯಸಂಸ್ಕಾರಕ್ಕೆ ಸಿದ್ದತೆ

ಸಮಗ್ರ ನ್ಯೂಸ್: ಸುರತ್ಕಲ್’ನಲ್ಲಿ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎರಡು ತಂಡಗಳನ್ನು ರಚಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ 14 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಇನ್ನೊಂದೆಡೆಯಲ್ಲಿ ಮಂಗಲಪೇಟೆಯ ಮಸೀದಿಯಲ್ಲಿ ಫಾಝಿಲ್ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ನಡೆಯುತ್ತಿದೆ. ಫಾಝಿಲ್ ಅಂತಿಮ ದರ್ಶನಕ್ಕೆ ನೂರಾರು ಜನ ಆಗಮಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಎಲ್ಲಡೆ ಹದ್ದಿನ ಕಣ್ಣು

ಫಾಝಿಲ್ ಹತ್ಯೆ‌ ಪ್ರಕರಣ| 14 ಮಂದಿ ಪೊಲೀಸರ ವಶಕ್ಕೆ| ಜನಸ್ತೋಮದ ಮಧ್ಯೆ ಅಂತ್ಯಸಂಸ್ಕಾರಕ್ಕೆ ಸಿದ್ದತೆ Read More »

ಪ್ರವೀಣ್ ಹತ್ಯೆ ‌ಪ್ರಕರಣ; ಮೂರನೇ ಆರೋಪಿ ಪೊಲೀಸ್ ವಶ

ಸಮಗ್ರ‌ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಕಳೆದ ಜುಲೈ 26ರಂದು ನಡೆದಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಚಿಕನ್ ಸೆಂಟರ್ ಹೊಂದಿದ್ದ ಸದ್ದಾಂ ಎಂಬಾತನನ್ನು ವಶಕ್ಕೆ ಪಡೆದಿದ್ದು, ಕಾಣಿಯೂರಿನಲ್ಲಿ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬೆಳ್ಳಾರೆಯ ಶಫೀಕ್‌ (27) ಮತ್ತು ಸವಣೂರಿನ ಝಾಕೀರ್‌ (29) ಬಂಧಿತರು. ಈ ಪೈಕಿ ಓರ್ವನನ್ನು ಕೇರಳದಲ್ಲಿ

ಪ್ರವೀಣ್ ಹತ್ಯೆ ‌ಪ್ರಕರಣ; ಮೂರನೇ ಆರೋಪಿ ಪೊಲೀಸ್ ವಶ Read More »

ರಾಜಕೀಯ ಒತ್ತಡಕ್ಕೆ ಮಣಿದು‌ ಪೊಲೀಸರು ಅಮಾಯಕರನ್ನು ಬೇಟೆಯಾಡುತ್ತಿದ್ದಾರೆ – ಪಿಎಫ್ಐ ಆರೋಪ

ಸಮಗ್ರ ನ್ಯೂಸ್: ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ನಡೆಸುತ್ತಿರುವ ಬಂಧನ ಕಾರ್ಯಾಚರಣೆ ಖಂಡನಾರ್ಹವಾಗಿದೆ. ಬಿಜೆಪಿ ಸರಕಾರದ ಒತ್ತಡದಲ್ಲಿ ಪೊಲೀಸರು ಅಮಾಯಕರ ಬೇಟೆಯಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್‌ ಆರೋಪಿಸಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ‌ ಪಿಎಫ್ಐ ಸಂಘಪರಿವಾರದ ಯಾವುದೇ ಕಾರ್ಯಕರ್ತರ ಹತ್ಯೆಗಳು ನಡೆದಾಗಲೂ ಬಿಜೆಪಿ ಸಂಸದರು, ಸಚಿವರು ಗೊಂದಲಕಾರಿ ಹೇಳಿಕೆಗಳನ್ನು ನೀಡುವುದು, ಪಾಪ್ಯುಲರ್ ಫ್ರಂಟ್ ಮೇಲೆ ಆರೋಪ ಹೊರಿಸುವುದು, ನಂತರ ಜಿಲ್ಲೆಯ ಪೊಲೀಸರುಅಮಾಯಕ ಮುಸ್ಲಿಮ್ ಯುವಕರನ್ನು ರಾತ್ರೋರಾತ್ರಿ ವಿಚಾರಣೆಯ ನೆಪದಲ್ಲಿ ಬಂಧಿಸಿ

ರಾಜಕೀಯ ಒತ್ತಡಕ್ಕೆ ಮಣಿದು‌ ಪೊಲೀಸರು ಅಮಾಯಕರನ್ನು ಬೇಟೆಯಾಡುತ್ತಿದ್ದಾರೆ – ಪಿಎಫ್ಐ ಆರೋಪ Read More »

ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡ ‌ರಾಜಾಸ್ಥಾನ| 48 ಗಂಟೆ ಕಳೆದರೂ‌ ಪ್ರವೀಣ್ ಕೊಲೆಗಡುಕರ ಬಂಧಿಸದ್ದಕ್ಕೆ ಪ್ರಶ್ನೆ|

ಸಮಗ್ರ‌ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರೋ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್​ ನೆಟ್ಟಾರು ಹತ್ಯೆಯನ್ನು ನಾನು ಖಂಡಿಸುತ್ತೇನೆ ಎಂದು ರಾಜಸ್ಥಾನ ಸಿಎಂ ಅಶೋಕ್​​ ಗೆಹ್ಲೋಟ್​ ಟ್ವೀಟ್​ ಮಾಡಿದ್ದಾರೆ. “ಇತ್ತೀಚೆಗೆ ಉದಯಪುರದಲ್ಲಿ ಕನ್ಹಯ್ಯ ಲಾಲ್​ ಹತ್ಯೆ ಆದಾಗ ಕೇವಲ 4 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದೆವು. ಈಗ ಕರ್ನಾಟಕದಲ್ಲಿ ಪ್ರವೀಣ್​ ಹತ್ಯೆಯಾಗಿ 48 ಗಂಟೆ ಆದ್ರೂ ಆರೋಪಿ ಬಂಧನವಾಗಿಲ್ಲ” ಎಂದು ಗೆಹ್ಲೋಟ್​ ಪ್ರಶ್ನಿಸಿದ್ದಾರೆ. ಇನ್ನು, ಕನ್ಹಯ್ಯ ಲಾಲ್​​ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಕನ್ಹಯ್ಯ

ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡ ‌ರಾಜಾಸ್ಥಾನ| 48 ಗಂಟೆ ಕಳೆದರೂ‌ ಪ್ರವೀಣ್ ಕೊಲೆಗಡುಕರ ಬಂಧಿಸದ್ದಕ್ಕೆ ಪ್ರಶ್ನೆ| Read More »