July 2022

ಭಾರಿ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ

ಸುಬ್ರಹ್ಮಣ್ಯ: ರಾಜ್ಯದಲ್ಲಿ ಇದೀಗ ಭಾರಿ ಮಳೆಯಾಗುತ್ತಿದ್ದು, ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ಯಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ. ಶಿರಾಡಿ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ, ನೇತ್ರಾವತಿ, ಪಯಸ್ವಿನಿ, ಗುಂಡ್ಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ.

ಭಾರಿ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ Read More »

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ನಂದಿನಿ ವಾಹನ

ಸಮಗ್ರ ನ್ಯೂಸ್ : ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಕೆರೆಗೆ ನಂದಿನಿ ವಾಹನ ಮುಳುಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಅಂಗಡಿಗಳಿಗೆ ಹಾಲು ಪೂರೈಸುತ್ತಿದ್ದ ವಾಹನ ಇದಾಗಿದ್ದು, ಈ ವಾಹನದೊಂದಿಗೆ 500ಕ್ಕೂ ಅಧಿಕ ಲೀಟರ್ ಹಾಲು ನೀರಿನಲ್ಲಿ ಮುಳುಗಡೆಯಾಗಿದೆ. ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಾಹನ ದೇವರಹಳ್ಳಿ ಅಂಗಡಿಗಳಿಗೆ ಹಾಲು ವಿತರಿಸಲು ನಲ್ಲೂರು ಕಡೆ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೆರೆಯಲ್ಲಿ ಮುಳುಗಿದೆ. ಸಂತೆಬೆನ್ನೂರು

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ನಂದಿನಿ ವಾಹನ Read More »

ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳಲ್ಲಿ; ಓರ್ವ ಎಸ್ಕೇಪ್

ಸಮಗ್ರ ನ್ಯೂಸ್ : ಗೋವುಗಳನ್ನು ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಪತ್ತೆ ಹಿಡಿದ ಘಟನೆಯೊಂದು ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ. ಉಡುಪಿಯ ಮಲ್ಪೆ ಹೂಡೆಯಲ್ಲಿ ಅಕ್ರಮ ಕಸಾಯಿ ಖಾನೆ ನಡೆಸುತ್ತಿರುವ ಸಹೋದರರಾದ ಶಕೀಲ್ ಅಹಮದ್ ಮತ್ತು ಅಖಿಲ್ ಅಹಮದ್ ಬಂಧಿತ ಆರೋಪಿಗಳು. ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ತಲ್ವಾರು ಹಿಡಿದು ದನ ಕದಿಯುತ್ತಿದ್ದ ಸಹೋದರರು ಬೇಳಂಜೆ ಗ್ರಾಮದ ಈಸ ಗದ್ದೆ ಎಂಬಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ಜಾನುವಾರುಗಳನ್ನು

ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳಲ್ಲಿ; ಓರ್ವ ಎಸ್ಕೇಪ್ Read More »

ವಿಟ್ಲ: ಹಿಂದೂ ಯುವತಿಯನ್ನು‌ ಮದುವೆಯಾದ ಮುಸ್ಲಿಂ ಯುವಕ| ಸಂಘಟನೆಗಳಿಂದ ಲವ್ ಜಿಹಾದ್ ಆರೋಪ

ಸಮಗ್ರ ನ್ಯೂಸ್: ಅನ್ಯಕೋಮಿನ ಯುವಕನೋರ್ವ ಮೈಸೂರು ಮೂಲದ ಹಿಂದೂ ಯುವತಿಯನ್ನು ವಿವಾಹವಾದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್(27) ಎಂಬ ಅನ್ಯಕೋಮಿನ ಯುವಕ ಮೈಸೂರು ಲೋಕನಾಯಕನ ನಗರದ ಸೌಂದರ್ಯ(24) ಎಂಬ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಉಬೈದ್ ಮತ್ತು ಸೌಂದರ್ಯ ಮೈಸೂರಿನಲ್ಲಿ ರಿಜಿಸ್ಟರ್ ವಿವಾಹವಾಗಿದ್ದು, ಅವರ ಮದುವೆಯ ರಿಜಿಸ್ಟರ್ ಪತ್ರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಜೋಡಿ ಕೆಲ ದಿನ ಹಿಂದೆ ವಿಟ್ಲದಲ್ಲಿ ತಿರುಗಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಕೇರಳದಲ್ಲಿ ನಿಶ್ಚಿತಾರ್ಥವಾದ ಈ

ವಿಟ್ಲ: ಹಿಂದೂ ಯುವತಿಯನ್ನು‌ ಮದುವೆಯಾದ ಮುಸ್ಲಿಂ ಯುವಕ| ಸಂಘಟನೆಗಳಿಂದ ಲವ್ ಜಿಹಾದ್ ಆರೋಪ Read More »

ಜು.8ರವರೆಗೂ ಭಾರೀ ಮಳೆ| ರಾಜ್ಯದಲ್ಲಿ ಅಲರ್ಟ್ ಜಾರಿ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಭಾಗದ ಮಳೆಯ ಅಬ್ಬರ ಮುಂದುವರೆದಿದ್ದು, ಜುಲೈ 8ರವರೆಗೂ ಗುಡುಗು ಸಹಿತ ಭಾರೀ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಮತ್ತು ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಮುಂಗಾರು ಮಾರುತಗಳು ಹೆಚ್ಚು ಸಕ್ರಿಯವಾಗಿದ್ದರಿಂದ ಮಳೆ ಕಳೆದೊಂದು ವಾರದಿಂದ ಆ ಭಾಗದಲ್ಲಿ ಸುರಿಯುತ್ತಲೇ ಇದೆ. ಇದೀಗ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 8ರವರೆಗೂ

ಜು.8ರವರೆಗೂ ಭಾರೀ ಮಳೆ| ರಾಜ್ಯದಲ್ಲಿ ಅಲರ್ಟ್ ಜಾರಿ Read More »

ಭಾರೀ ಮಳೆ ಹಿನ್ನಲೆ; ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 4 ರ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನಲ್ಲಿ ಕಳೆದ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಹಿನ್ನಲೆ; ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಪುತ್ತೂರು: ಭೀಕರ ರಸ್ತೆ ಅಪಘಾಗ ತಂದೆ ಸಾವು, ಮಗ ಗಂಭೀರ

ಸಮಗ್ರ ನ್ಯೂಸ್: ಓಮ್ನಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು, ಇನ್ನೊರ್ವ ಗಂಭೀರ ಗಾಯಗೊಂಡ ಘಟನೆ ಪುತ್ತೂರು ಸಮೀಪದ ಕುಂಬ್ರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಪಂಜಿಗುಡ್ಡೆ ನಿವಾಸಿ ರಘುರಾಮ ಶೆಟ್ಟಿ ಎಂದು ತಿಳಿದು ಬಂದಿದೆ. ರಘುರಾಮ ಶೆಟ್ಟಿಯವರು ತನ್ನ ಮಗನನ್ನು ಬೆಂಗಳೂರು ಬಸ್ ಗೆ ಬಿಡಲು ಮನೆಯಿಂದ ಬೈಕ್ ನಲ್ಲಿ ಬರುತ್ತಿದ್ದ ವೇಳೆ ವಿರುದ್ಧ ಡಿಕ್ಕಿನಿಂದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಶೀನಪ್ಪ ಎಂಬವರು ಚಲಾಯಿಸುತ್ತಿದ್ದ ಮಾರುತಿ

ಪುತ್ತೂರು: ಭೀಕರ ರಸ್ತೆ ಅಪಘಾಗ ತಂದೆ ಸಾವು, ಮಗ ಗಂಭೀರ Read More »

ಮತ್ತೆ ಕೊಡಗು ಗಡಿಭಾಗದಲ್ಲಿ ಅಗೋಚರ ಸದ್ದು| ಭೂಮಿಯೊಳಗೆ ಕಂಪನ

ಸಮಗ್ರ ನ್ಯೂಸ್: ಭೂಕಂಪದ ಭಯದ ನೆರಳಲ್ಲಿ ಬದುಕುತ್ತಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗದ ಜನರಿಗೆ ಈಗ ದಿನನಿತ್ಯ ಜೋರಾದ ಶಬ್ದ ಹಾಗೂ ಲಘು ಕಂಪನಗಳೊಂದಿಗೆ ಬದುಕುವಂತಾಗಿದೆ. ಸರಣಿ ಕಂಪನ ಅನುಭವಿಸಿ ಚಿಂತೆಯಲ್ಲಿರುವ ಪೆರಾಜೆ ಹಾಗೂ ಚೆಂಬುವಿನಲ್ಲಿ ಇದೀಗ ಭಾನುವಾರ ರಾತ್ರಿ 9.15 ರಿಂದ 9.20 ರ ವೇಳೆಯಲ್ಲಿ ಕಂಪನದ ಅನುಭವ ಆಗಿದೆ ಎಂಬ ಮಾಹಿತಿ ಲಭಿಸಿದೆ. ಭೂಮಿಯೊಡಲಿನಿಂದ ಮೊದಲಿಗೆ ಅಗೋಚರ ಶಬ್ಧ ಹಾಗೂ ನಂತರ ಸಣ್ಣ ಮಟ್ಟಿನ ಕಂಪನ ಆಗಿದೆ ಎಂದು ತಿಳಿಸಿದ್ದಾರೆ. ಹಿಂದಿನ

ಮತ್ತೆ ಕೊಡಗು ಗಡಿಭಾಗದಲ್ಲಿ ಅಗೋಚರ ಸದ್ದು| ಭೂಮಿಯೊಳಗೆ ಕಂಪನ Read More »

ಜನಪ್ರಿಯ ಅಸ್ಸಾಮಿ ನಟ ಕಿಶೋರ್ ದಾಸ್ ನಿಧನ

ಸಮಗ್ರ ನ್ಯೂಸ್ : ಜನಪ್ರಿಯ ಅಸ್ಸಾಮಿ ನಟ ಕಿಶೋರ್ ದಾಸ್ ಅವರು 30 ವರ್ಷ ಪ್ರಾಯದ  ಯುವಕ ಇಹಲೋಕ ತ್ಯಜಿಸಿದ್ದಾರೆ. ಕಳೆದೊಂದು ವರ್ಷದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿದ ಕಿಶೋರ್ ದಾಸ್ ಶನಿವಾರ ಮೃತಪಟ್ಟಿದ್ದಾರೆ. 300 ಕ್ಕೂ ಹೆಚ್ಚು ಮ್ಯೂಸಿಕ್ ವೀಡಿಯೊಗಳಲ್ಲಿ ನಟಿಸಿರುವ ನಟ ಕಿಶೋರ್ ದಾಸ್ ಮಾರ್ಚ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದು, ಫಲಿಸದೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು.

ಜನಪ್ರಿಯ ಅಸ್ಸಾಮಿ ನಟ ಕಿಶೋರ್ ದಾಸ್ ನಿಧನ Read More »

ಗಂಡು ಮಗುವಿನ ಸಂತಸದಲ್ಲಿ ಕಿರುತೆರೆ ನಟಿ ಅಮೃತಾ ನಾಯ್ಡು

ಸಮಗ್ರ ನ್ಯೂಸ್: ಕಿರುತೆರೆ ನಟಿ ಅಮೃತಾ ನಾಯ್ಡು ಮನೆಯಲ್ಲಿ ಇದೀಗ ನೋವು ಮರೆಯಾಗಿ ಸಂತಸ ತಂದಿದೆ. ನಟಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ದಂಪತಿಗಳು ಸಂತೋಷದಲ್ಲಿದ್ದಾರೆ. ನಟಿ ಅಮೃತಾ ಜುಲೈ 2 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ನಟಿ ಅಮೃತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು,

ಗಂಡು ಮಗುವಿನ ಸಂತಸದಲ್ಲಿ ಕಿರುತೆರೆ ನಟಿ ಅಮೃತಾ ನಾಯ್ಡು Read More »