July 2022

ರಾಜ್ಯಸಭೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ

ಸಮಗ್ರ ನ್ಯೂಸ್: ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ವೀರೇಂದ್ರ ಹೆಗ್ಗಡೆಯವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯ ಮಾದರಿಯಾಗಿದೆ. ಅವರು ಸಂಸತ್ತಿಗೆ ಆಯ್ಕೆಯಾಗಿರುವುದು ಅಭಿನಂದನಾರ್ಹ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕೇಂದ್ರ ಸರಕಾರ ನಾಮನಿರ್ದೇಶನ ಮಾಡಿದೆ.ಇವರ ಜೊತೆ ಖ್ಯಾತ ಅಥ್ಲೀಟ್ ಪಿ.ಟಿ. […]

ರಾಜ್ಯಸಭೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ Read More »

ದ.ಕ‌ ದಲ್ಲಿ ಮುಂದುವರಿದ ವರುಣಾರ್ಭಟ| ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ(ಜು.7) ರಜೆ ಘೋಷಣೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 7 ರಂದು‌ ಗುರುವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನೇತ್ರಾವತಿ, ಕುಮಾರಧಾರಾ, ಗುರುಪುರ, ಗುಂಡ್ಯ‌ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ದ.ಕ‌ ದಲ್ಲಿ ಮುಂದುವರಿದ ವರುಣಾರ್ಭಟ| ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ(ಜು.7) ರಜೆ ಘೋಷಣೆ Read More »

ಹಾಸನದಲ್ಲಿ ಮಹಾಮಳೆ ಭೀತಿ|ಜಿಲ್ಲೆಯ ಮೂರು ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ(ಜು.7)ರಜೆ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ನಾಳೆ ಜಿಲ್ಲೆಯ ಮೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆಲೂರು, ಅರಕಲಗೂಡು, ಸಕಲೇಶಪುರ ತಾಲೂಕಿನ, ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್ ಆದೇಶ ಹೊರಡಿಸಿದ್ದಾರೆ. ನಾಳಿನ ಮಳೆ ಪರಿಸ್ಥಿತಿ ಗಮನಿಸಿ ಮತ್ತೆ ರಜೆ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ.

ಹಾಸನದಲ್ಲಿ ಮಹಾಮಳೆ ಭೀತಿ|ಜಿಲ್ಲೆಯ ಮೂರು ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ(ಜು.7)ರಜೆ Read More »

ನಿರಂತರ ಮಳೆ; ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ‌ ಶಾಲಾ ಕಾಲೇಜಿಗೆ ರಜೆ; ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್ : ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ Whats ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ನಾಳೆ(ಜು.7) ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜುಲೈ ೭ರಂದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲೆ ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಣೆಯನ್ನು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಜೆಯ ಅವಧಿಯನ್ನು

ನಿರಂತರ ಮಳೆ; ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ‌ ಶಾಲಾ ಕಾಲೇಜಿಗೆ ರಜೆ; ಅಲರ್ಟ್ ಘೋಷಣೆ Read More »

ಕೊಡಗಿನಲ್ಲಿ ಮುಂದುವರಿದ ಮಹಾಮಳೆ| ಜಿಲ್ಲೆಯಲ್ಲಿ ನಾಳೆಯೂ(ಜು.8) ಶಾಲಾ ಕಾಲೇಜಿಗೆ ರಜೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಗುರುವಾರವೂ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಈ ಹಿನ್ನೆಲೆಯಲ್ಲಿ ಶುಕ್ರವಾರ(ಜು.8) ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾಬಿ.ಸಿ. ಸತೀಶ ಅವರು ಆದೇಶ ಹೊರಡಿಸಿದ್ದಾರೆ. ಭಾರೀ ಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಮರಗಳು ಉರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ. ಕೊಡ್ಲಿಪೇಟೆ ಹೋಬಳಿಯ ಶಿವರಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಸುಶೀಲಾ ಎಂಬವರ ಮನೆ ಮೇಲೆ ಮರ

ಕೊಡಗಿನಲ್ಲಿ ಮುಂದುವರಿದ ಮಹಾಮಳೆ| ಜಿಲ್ಲೆಯಲ್ಲಿ ನಾಳೆಯೂ(ಜು.8) ಶಾಲಾ ಕಾಲೇಜಿಗೆ ರಜೆ Read More »

ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಬುರ್ಖಾ ಸಿಲುಕಿ ಮಹಿಳೆ ಸಾವು

ಸಮಗ್ರ ನ್ಯೂಸ್: ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ತಾವು ಧರಿಸಿದ್ದ ಬಟ್ಟೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಆಕಸ್ಮಿಕ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯ ತಹಶೀಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಕೌಸರ್ (37) ಮೃತಪಟ್ಟ ಮಹಿಳೆ. ಕಬ್ಬಿನ ಹಾಲು ತೆಗೆಯುವ ವೇಳೆ ಮಹಿಳೆ ಧರಿಸಿದ್ದ ಬುರ್ಕಾ ಯಂತ್ರಕ್ಕೆ ಸಿಲುಕಿದ ಪರಿಣಾಮ ಕುತ್ತಿಗೆ ಬಿಗಿದು ಸಾವು ಸಂಭವಿಸಿದೆ. ರಾಬರ್ಟ್‌ ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಬುರ್ಖಾ ಸಿಲುಕಿ ಮಹಿಳೆ ಸಾವು Read More »

ಜಮೀರ್ ಸಂಪತ್ತಿಗೆ ಎಸಿಬಿ ಸವಾಲ್| ಆಸ್ತಿ ಮೌಲ್ಯ ನೋಡಿ ದಂಗಾದ ಅಧಿಕಾರಿಗಳು| ಲೆಕ್ಕ ಇಲ್ಲ ಪಕ್ಕಾ…! ಬಾದ್ ಷಾಗೆ ಬಂಧನ ಭೀತಿ

ಸಮಗ್ರ ನ್ಯೂಸ್: ಜಾರಿ ನಿರ್ದೇಶನಾಲಯ ವರದಿ ಆಧರಿಸಿ ಶಾಸಕ ಜಮೀರ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಎಸಿಬಿ, ಈಗ ಜಮೀರ್‌ ಸಾಮ್ರಾಜ್ಯದ ಸಂಪತ್ತಿನ ಶೋಧನೆಗೆ ಕಾರ್ಯಾಚರಣೆ ಶುರು ಮಾಡಿದೆ. ಎಸಿಬಿ ದಾಳಿ ಬಳಿಕ ಜಮೀರ್‌ಗೀಗ ಬಂಧನದ ಭೀತಿ ಎದುರಾಗಿದೆ. ಜಮೀರ್‌ ಅಹಮದ್‌ ಖಾನ್‌ ಅವರ ನಿವಾಸದ ಮೇಲೆ ನಡೆದ ದಾಳಿ ವೇಳೆ ಲಕ್ಷಾಂತರ ರು. ನಗದು, ಕೋಟ್ಯಂತರ ಮೌಲ್ಯದ ವಜ್ರ ವೈಢೂರ್ಯ, ಚಿನ್ನಾಭರಣ, ಬೆಳ್ಳಿ ವಸ್ತುಗಳು, 9 ಲೀಟರ್‌ ವಿದೇಶಿ ಮದ್ಯ,

ಜಮೀರ್ ಸಂಪತ್ತಿಗೆ ಎಸಿಬಿ ಸವಾಲ್| ಆಸ್ತಿ ಮೌಲ್ಯ ನೋಡಿ ದಂಗಾದ ಅಧಿಕಾರಿಗಳು| ಲೆಕ್ಕ ಇಲ್ಲ ಪಕ್ಕಾ…! ಬಾದ್ ಷಾಗೆ ಬಂಧನ ಭೀತಿ Read More »

ಕಿಶೋರ್ ಶೆಟ್ಟಿ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ಡ್ರಗ್ಸ್​ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಶೆಟ್ಟಿಯ ಅಂಗಿ ಬಿಚ್ಚಿ ಅವನು ಹಾಕಿಸಿಕೊಂಡಿದ್ದ ಟ್ಯಾಟು ನೋಡಿ ಮಂಗಳೂರು ಪೊಲೀಸ್ ಕಮಿಷನರ್ ಬುದ್ದಿವಾದ ಹೇಳಿದ್ದಾರೆ. ಸ್ಯಾಂಡಲ್ಲ್​​ವುಡ್ ಡ್ರಗ್ ಪ್ರಕರಣದಲ್ಲಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಬಂಧಿತನಾಗಿದ್ದ. ಇಂದು ಮಂಗಳೂರಿನಲ್ಲಿ ನಡೆದ ಎಂಒಬಿ ಪರೇಡ್​​​​ನಲ್ಲಿ ಇದ್ದ ಅವನನ್ನು ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಅವರು ಪ್ರಶ್ನಿಸಿದ್ದಾರೆ. ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್​ಡ್ಯಾನ್ಸರ್ ಕಿಶೋರ್ ಅಮನ್

ಕಿಶೋರ್ ಶೆಟ್ಟಿ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್ Read More »

ಮಂಗಳೂರು: ಕಾಂಪೌಂಡ್ ಗೋಡೆ ಕುಸಿದು ಮೂರು ಕಾರುಗಳು ಜಖಂ

ಸಮಗ್ರ ನ್ಯೂಸ್: ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ (ಎಂಐಟಿಇ) ಕಾಲೇಜಿನ ಕಾಂಪೌಂಡ್ ಗೋಡೆ ಕುಸಿದು ಮೂರು ಕಾರುಗಳು ಜಖಂಗೊಂಡಿವೆ. ಘಟನೆ ನಡೆದಾಗ ಹೊಸ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಂಗಳೂರು: ಕಾಂಪೌಂಡ್ ಗೋಡೆ ಕುಸಿದು ಮೂರು ಕಾರುಗಳು ಜಖಂ Read More »

ರಾಜ್ಯದಲ್ಲಿ ಪ.ಪೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಭರ್ತಿಗೆ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಅತಿಥಿ ಉಪನ್ಯಾಸಕರಿಗೆ ಈಗಿನ 9 ಸಾವಿರ ರೂ. ಗೌರವ ಸಂಭಾವನೆಯನ್ನು 12 ಸಾವಿರ ರೂ.ಗೆ ಹೆಚ್ಚಿಸಲು ಸರಕಾರವು ಅನುಮೋದನೆ ನೀಡಿದೆ. ಗೌರವ ಸಂಭಾವನೆಯನ್ನು ಹದಿನೈದು ಸಾವಿರ ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದ್ದರೂ, ಸರಕಾರವು ಮಾಸಿಕವಾಗಿ ಮೂರು ಸಾವಿರ ರೂ. ಹೆಚ್ಚಿಸಿದೆ. ರಾಜ್ಯ ಸರಕಾರವು ಒಟ್ಟು 3708

ರಾಜ್ಯದಲ್ಲಿ ಪ.ಪೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಭರ್ತಿಗೆ ನಿರ್ಧಾರ Read More »