July 2022

ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ಬಳಿ ಮೇಘಸ್ಫೋಟ| ಐವರು ಯಾತ್ರಾರ್ಥಿಗಳ ದುರ್ಮರಣ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಭಾಗದಲ್ಲಿ ಮೇಘಸ್ಫೋಟಗೊಂಡಿದೆ. ಒಂದೇ ಸಮನೆ ಸುರಿದ ಭಾರೀ ಮಳೆಗೆ ಅಮರನಾಥ ಯಾತ್ರಾರ್ಥಿಗಳು ನಿಧನರಾಗಿದ್ದು ಹಲವರು ಗಾಯಗೊಂಡಿದ್ದಾರೆ. ಪವಿತ್ರ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಬಳಿ ನದಿಗಳು ಉಕ್ಕಿ ಹರಿದಿದೆ. ಬೆಟ್ಟ ಗುಡ್ಡಗಳು ಕುಸಿದಿವೆ. ಅಮರನಾಥ ಯಾತ್ರೆ ಬೇಸ್‌ಕ್ಯಾಂಪ್‌ನಲ್ಲಿ ತಂಗಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಗಳು ಚುರುಕುಗೊಂಡಿದೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ನಿರಂತರ ಕಾರ್ಯನಿರ್ವಹಿಸುತ್ತಿದೆ. ಶುಕ್ರವಾರ ಸಂಜೆ 5.30ಕ್ಕೆ ಮೇಘಸ್ಫೋಟ ಸಂಭವಿಸಿದೆ. ಭಾರಿ […]

ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ಬಳಿ ಮೇಘಸ್ಫೋಟ| ಐವರು ಯಾತ್ರಾರ್ಥಿಗಳ ದುರ್ಮರಣ Read More »

ಪಿಲಿಕುಳ: ಮೊಟ್ಟೆಯೊಡೆದು ಹೊರಬಂತು 38 ಕಾಳಿಂಗ ಸರ್ಪದ ಮರಿಗಳು

ಸಮಗ್ರ ನ್ಯೂಸ್: ಮಂಗಳೂರಿನ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ 38 ಕಾಳಿಂಗ ಸರ್ಪದ ಮರಿಗಳು ಮೊಟ್ಟೆಯೊಡೆದು ಹೊರಬಂದಿವೆ. ಸಂಪಾಜೆ ಪರಿಸರದಲ್ಲಿ ಸೆರೆ ಹಿಡಿದಿದ್ದ ಎಂಟು ವರ್ಷದ ನಾಗಮಣಿ ಮೊಟ್ಟೆ ಇಟ್ಟಿತ್ತು. ಮೊಟ್ಟೆಗಳಿಗೆ ಕೃತಕ ಕಾವು ನೀಡಿದ 76 ದಿನಗಳ ನಂತರ ಮರಿಗಳು ಹೊರ ಬಂದಿವೆ. ಈ ನಾಗಮಣಿ ಮತ್ತು ಪಿಲಿಕುಳದಲ್ಲಿ ಹುಟ್ಟಿದ್ದ 10 ವರ್ಷದ ನಾಗೇಂದ್ರನ ಸಂಯೋಗದಲ್ಲಿ ಈ ಮರಿಗಳು ಜನಿಸಿವೆ ಎಂದು ಜೈವಿಕ ಉದ್ಯಾನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ. ಕೇಂದ್ರ ಮೃಗಾಲಯ

ಪಿಲಿಕುಳ: ಮೊಟ್ಟೆಯೊಡೆದು ಹೊರಬಂತು 38 ಕಾಳಿಂಗ ಸರ್ಪದ ಮರಿಗಳು Read More »

26 ಸಾವಿರ ಸಂಬಳ; 100 ಖಾಲಿ ಹುದ್ದೆ, ಜು.12ಕ್ಕೆ ನೇರ ಸಂದರ್ಶನ| ಮಂಗಳೂರಿನ ಯುವಜನತೆ ಅಪ್ಲೈ‌ಮಾಡಿ…

ಸಮಗ್ರ ನ್ಯೂಸ್: ಅಮೆಜಾನ್ ಕಂಪನಿಯಲ್ಲಿ ತಿಂಗಳಿಗೆ 26 ಸಾವಿರ ವೇತನವುಳ್ಳ 100 ಡೆಲಿವರಿ ಬಾಯ್ ಹುದ್ದೆಗಳಿಗೆ ಜು.12ರ ಮಂಗಳವಾರ ಮಂಗಳೂರಿನ ಉರ್ವಾ ಮಾರುಕಟ್ಟೆಯ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ದಿ ಕಚೇರಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ. ಯಾವುದೇ ವಿದ್ಯಾರ್ಹತೆಯುಳ್ಳ ಆಸಕ್ತ ಉದ್ಯೋಗಾಕಾಂಕ್ಷಿಗಳು ದ್ವಿಚಕ್ರ ವಾಹನ ಪರವಾನಿಗೆ, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಂಡ್ರಾಯಿಡ್ ಸ್ಮಾರ್ಟ್‍ಫೋನ್ ಹಾಗೂ ಇತರೆ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಮಾಹಿತಿಗಾಗಿ ಕಚೇರಿ ದೂ.ಸಂಖ್ಯೆ:0824-2453222 ಅನ್ನು ಸಂಪರ್ಕಿಸುವಂತೆ ಜಿಲ್ಲಾ

26 ಸಾವಿರ ಸಂಬಳ; 100 ಖಾಲಿ ಹುದ್ದೆ, ಜು.12ಕ್ಕೆ ನೇರ ಸಂದರ್ಶನ| ಮಂಗಳೂರಿನ ಯುವಜನತೆ ಅಪ್ಲೈ‌ಮಾಡಿ… Read More »

ನಡುಗಿದ ಬಸವನಾಡು; ಬೆಳ್ಳಂಬೆಳಗ್ಗೆ ವಿಜಯಪುರದಲ್ಲಿ ಭೂಕಂಪನ

ಸಮಗ್ರ ನ್ಯೂಸ್: ಶನಿವಾರ ಬೆಳ್ಳಂಬೆಳಿಗ್ಗೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭೂಕಂಪನದ ಅನುಭವವಾಗಿದೆ. ಬೆಳಿಗ್ಗೆ 6.22ರಿಂದ 6.23ರ ವೇಳೆಗೆ ಭೂಮಿ 10 ಸೆಕೆಂಡ್ ಗೂ ಅಧಿಕ ಸಮಯ ಕಂಪಿಸಿದೆ. ಜೊತೆಗೆ ಭಾರೀ ಶಬ್ಧ ಭೂಮಿಯೊಳಗಿಂದ ಕೇಳಿಬಂದಿತು. ನಿದ್ರೆಯಿಂದ ಆಗ ತಾನೆ ಎದ್ದವರು, ಏಳದವರು ಭೂಮಿಯ ಕಂಪನ ಮತ್ತು ಭಾರೀ ಶಬ್ಧದಿಂದ ಬೆಚ್ಚಿ ಬಿದ್ದು ಆತಂಕದಿಂದ ಮನೆಯಿಂದ ಓಡಿ ಹೊರಬಂದರು. ಭೂಕಂಪನದ ಕೇಂದ್ರಬಿಂದು ಯಾವುದು ಮತ್ತು ಭೂಕಂಪನದ ತೀವ್ರತೆ ಎಷ್ಟಿತ್ತು ಎಂಬುದು ಇನ್ನು ಖಚಿತವಾಗಿಲ್ಲ. ಎರಡು ವರ್ಷಗಳಿಂದ

ನಡುಗಿದ ಬಸವನಾಡು; ಬೆಳ್ಳಂಬೆಳಗ್ಗೆ ವಿಜಯಪುರದಲ್ಲಿ ಭೂಕಂಪನ Read More »

ನದಿಗೆ ಉರುಳಿದ ಕಾರು; 9 ಮಂದಿ ಜಲಸಮಾಧಿ

ಸಮಗ್ರ ನ್ಯೂಸ್: ಕಾರು ನದಿಗೆ ಉರುಳಿದ ಪರಿಣಾಮ 9 ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಉತ್ತರಾಖಂಡ್‌ ನ ರಾಮ್‌ ನಗರ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಕಾರಿನಲ್ಲಿ ಒಬ್ಬ ಮಹಿಳೆ ಹಾಗೂ ಮಗು ಸೇರಿದಂತೆ 11 ಮಂದಿ ಪ್ರಯಾಣಿಸುತ್ತಿದ್ದ ಕಾರು ನದಿಗೆ ಉರುಳಿದ್ದು, ಮೃತಪಟ್ಟವರೆಲ್ಲರೂ ಪಂಜಾಬ್‌ ಮೂಲದವರು ಎಂದು ತಿಳಿದು ಬಂದಿದೆ. ಶುಕ್ರವಾರ ಮುಂಜಾನೆ 5 ಗಂಟೆ ಸುಮಾರಿಗೆ ಕಾರು ನದಿಗೆ ಉರುಳಿದೆ. ಕಾರು ವೇಗವಾಗಿ ಚಲಿಸುತ್ತಿದ್ದು, ನದಿಯಲ್ಲಿ ಬಿದ್ದರೂ ಚಲಿಸುತ್ತಿದ್ದು, ನದಿ ಹರಿವಿನ ನಡುವೆ

ನದಿಗೆ ಉರುಳಿದ ಕಾರು; 9 ಮಂದಿ ಜಲಸಮಾಧಿ Read More »

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ ಅಗಲಿದ ಭಾರತದ ಮಿತ್ರನಿಗಾಗಿ ನಾಳೆ ರಾಷ್ಟ್ರೀಯ ಶೋಕಾಚರಣೆ

ಸಮಗ್ರ ನ್ಯೂಸ್: ‘ಆತ್ಮೀಯ ಸ್ನೇಹಿತ’ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಶಿಂಜೋ ಅಬೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಮತ್ತು ಭಾರತದ ಆಳವಾದ ಗೌರವದ ಸಂಕೇತವಾಗಿ ಜುಲೈ 9 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾಳೆ ದೇಶಾದ್ಯಂತ

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ ಅಗಲಿದ ಭಾರತದ ಮಿತ್ರನಿಗಾಗಿ ನಾಳೆ ರಾಷ್ಟ್ರೀಯ ಶೋಕಾಚರಣೆ Read More »

‘ವೀರ ಸಾವರ್ಕರ್’ ಸಿನಿಮಾ ಮಾಡಿದರೆ ಕೊಲೆ ಮಾಡುವುದಾಗಿ ನಿರ್ಮಾಪಕನಿಗೆ ಬೆದರಿಕೆ

ಸಮಗ್ರ ನ್ಯೂಸ್: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತಾಗಿ ಬಾಲಿವುಡ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದ್ದು, ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ನಡುವೆ ವೀರ ಸಾವರ್ಕರ್ ಸಿನಿಮಾ ಮಾಡಿದರೆ, ಕೊಲ್ಲುವುದಾಗಿ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರಂತೆ. ಈ ಕುರಿತು ಅವರು ಅಂಬೋಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈಗಾಗಲೇ ಸಿನಿಮಾದ ಸಿದ್ಧತೆ ನಡೆಸಿದ್ದೇವೆ. ನಾಯಕರ ಆಯ್ಕೆಯಾಗಿದೆ. ವೀರ ಸಾವರ್ಕರ್ ಹುಟ್ಟು ಹಬ್ಬದ ದಿನದಂದು ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಇನ್ನೇನು ಶೂಟಿಂಗ್

‘ವೀರ ಸಾವರ್ಕರ್’ ಸಿನಿಮಾ ಮಾಡಿದರೆ ಕೊಲೆ ಮಾಡುವುದಾಗಿ ನಿರ್ಮಾಪಕನಿಗೆ ಬೆದರಿಕೆ Read More »

ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್| ಜು.12ರವರೆಗೂ ಮುಂದುವರಿಯಲಿದೆ ವರ್ಷಧಾರೆ

ಸಮಗ್ರ ನ್ಯೂಸ್: ಕರಾವಳಿ ಭಾಗದಲ್ಲಿ ಬಿರುಸಿನ ಮಳೆ ಸುರಿಯುತ್ತಿದ್ದು, ಜು.10ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಮುಂದಿನ 48 ಗಂಟೆಗಳಲ್ಲಿ ಮತ್ತೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜು.7 ರಿಂದ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಆದರೇ ಇದೀಗ ಜು.10 ರವರೆಗೆ ಮುಂದುವರಿಯಲಿದೆ. ಈ ವೇಳೆ ಈ ಮೂರು ಜಿಲ್ಲೆಯಲ್ಲಿ 204 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಜು.11,

ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್| ಜು.12ರವರೆಗೂ ಮುಂದುವರಿಯಲಿದೆ ವರ್ಷಧಾರೆ Read More »

ಸುರತ್ಕಲ್: ಓಮ್ನಿ ಮೇಲೆ ಲಾರಿ ಪಲ್ಟಿ; ಓಮ್ನಿ ಚಾಲಕ ಮೃತ್ಯು

ಸಮಗ್ರ ನ್ಯೂಸ್: ಸರಕು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಗಂಭೀರ ಗಾಯಗೊಂಡಿದ್ದ ಓಮ್ನಿ ಚಾಲಕ ಮೃತಪಟ್ಟಿರುವ ಘಟನೆ ಸುರತ್ಕಲ್ ನ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಸಂಭವಿಸಿದೆ. ಮೃತರನ್ನು ಗೋಕುಲ ನಗರ ನಿವಾಸಿ ಲೋಕೇಶ್ ಕುಲಾಲ್ (38) ಎಂದು ಗುರುತಿಸಲಾಗಿದೆ. ಅಪಘಾತದ ಪರಿಣಾಮ ಓಮಿನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿ ಚಾಲಕನ ಅಜಾಗರೂಕತೆಯೇ ಅವಘಡಕ್ಕೆ ಸಂಭವಿಸಿದೆ ಎನ್ನಲಾಗಿದ್ದು, ಸುರತ್ಕಲ್ ಉತ್ತರ ಟ್ರಾಫಿಕ್ ಪೊಲೀಸರು ಆಗಮಿಸಿ ಸ್ಕ್ರೈನ್ ಸಹಾಯದಿಂದ ಲಾರಿಯನ್ನು ಎತ್ತಿ ಓಮಿನಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ

ಸುರತ್ಕಲ್: ಓಮ್ನಿ ಮೇಲೆ ಲಾರಿ ಪಲ್ಟಿ; ಓಮ್ನಿ ಚಾಲಕ ಮೃತ್ಯು Read More »

ತಮಿಳು ನಟ ವಿಕ್ರಂ ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಜನಪ್ರಿಯ ನಟ ಚಿಯಾನ್ ವಿಕ್ರಮ್‌ಗೆ ಹೃದಯಾಘಾತವಾಗಿದೆ. ಶುಕ್ರವಾರ (ಜುಲೈ 7) ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ರಮ್ ಅಥವಾ ಚಿಯಾನ್ ವಿಕ್ರಮ್ ಎಂದೇ ಜನಪ್ರಿಯರಾಗಿರುವ ನಟನ ಅಸಲಿ ಹೆಸರು ಕೆನಡಿ ಜಾನ್ ವಿಕ್ಟರ್. ತಮಿಳು ಚಿತ್ರರಂಗದಲ್ಲಿ ಹಲವು ಏಳುಬೀಳು ಕಂಡಿರುವ ವಿಕ್ರಮ್ ಏಳು ಫಿಲಂಫೇರ್ ಪ್ರಶಸ್ತಿ ಪಡೆದಿದ್ದು, ಗಾಯಕರಾಗಿ ಕೂಡಾ ಹೆಸರುವಾಸಿಯಾಗಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ರಮ್ ಹಲವು ಬಾರಿ

ತಮಿಳು ನಟ ವಿಕ್ರಂ ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು Read More »