July 2022

ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಇಳಿಕೆ

ಅಗತ್ಯ ವಸ್ತುಗಳಲ್ಲಿ ಒಂದಾದ ಎಸಿ, ಫ್ರಿಡ್ಜ್  ವಾಷಿಂಗ್ ಮೇಷಿನ್,ಮುಂತಾದವುಗಳ ಬೆಲೆ ಇಳಿಕೆಯಾಗಲಿದೆ. ಏಕೆಂದರೆ ಅವುಗಳ ಉತ್ಪಾದನೆ ಬೇಕಾಗುವ ತಾಮ್ರ ಮತ್ತು ಸ್ಟೀಲ್‌ಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಫೆ.24ರಿಂದ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಶುರುವಾದ ಬಳಿಕ ತಾಮ್ರ, ಉಕ್ಕು ಅಲ್ಯುಮಿನಿಯಂ ದರ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿತ್ತು. ತಾಮ್ರ ಈಗ ಶೇ21, ಉಕ್ಕು ಶೇ.19, ಅಲ್ಯುಮಿನಿಯಂ ಶೇ.19ರಷ್ಟು ಇಳಿಯಾಗಿದೆ. ಕಂಪನಿಗಳು ಕೂಡಾ ಅವುಗಳ ಲಾಭವನ್ನು ಗ್ರಾಹಕರಿಗೆ ಕೊಡುತ್ತಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಫ್ರಿಡ್ಜ್‌, ಎಸಿ, ವಾಷಿಂಗ್‌ […]

ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಇಳಿಕೆ Read More »

ಚಾಲಕನ ನಿಯಂತ್ರಣ ತಪ್ಪಿ ಆನೆಗುಂಡಿ ಚರಂಡಿಗೆ ವಾಲಿದ ಕೆಎಸ್ ಆರ್ ಟಿಸಿ ಬಸ್

ಸುಳ್ಯ ; ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಬಸ್ ಚರಂಡಿಗೆ ವಾಲಿದ ಘಟನೆಯೊಂದು ಕನಕಮಜಲು ಗ್ರಾಮದ ಆನೆಗುಂಡಿ ಬಳಿ ನಡೆದಿದೆ ಪುತ್ತೂರು ನಿಂದ ಸುಳ್ಯದ ಕಡೆಗೆ ಚಲಿಸುತ್ತಿದ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಆನೆಗುಂಡಿ ರಸ್ತೆ ಬದಿಯ ಚರಂಡಿಗೆ ಇಳಿದಿದ್ದು, ಸದ್ಯ ಯಾವುದೇ ಅಪಾಯ ಸಂಭವಿಸಲಿಲ್ಲ

ಚಾಲಕನ ನಿಯಂತ್ರಣ ತಪ್ಪಿ ಆನೆಗುಂಡಿ ಚರಂಡಿಗೆ ವಾಲಿದ ಕೆಎಸ್ ಆರ್ ಟಿಸಿ ಬಸ್ Read More »

ಬೆಂಗಳೂರು; ಇಲ್ಲೊಂದು ಮೊಬೈಲ್ ಶೌಚಾಲಯ,
ಸರ್ಕಾರ ಮಾಡದ ಕೆಲಸವನ್ನ ತಾನೇ ನಿರ್ಮಾಣ ಮಾಡಿದ ಪಿಎಸ್ ಐ ಶಾಂತಪ್ಪ

ಬೆಂಗಳೂರು : ನೂರು ದಿನಗಳ ಶೌಚಾಲಯಕ್ಕಾಗಿ ಪಿಎಸ್ಐಯಿಂದ ನಿರಂತರ ಅಭಿಯಾನಕ್ಕು ಬಿಬಿಎಂಪಿ ಕ್ಯಾರೇ ಎಂದಿಲ್ಲ. ಟ್ವಿಟರ್‌ನಲ್ಲಿ ಬರೋಬ್ಬರಿ ಪಿಎಸ್ಐ ಶಾಂತಪ್ಪ ನೂರು ದಿನ ಅಭಿಯಾನ ನಡೆಸಿದರೂ ಪ್ರಯೋಜನವಾಗಿಲ್ಲ. ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಾಲಯಬೇಕೆಂದು ಹೋರಾಟ ಮಾಡಲಾಗುತ್ತಿದೆ. ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರಿಗೆ ಟ್ಯಾಗ್ ಮಾಡಿ ಟ್ವಿಟರ್ ಅಭಿಯಾನ ಮಾಡಿದ್ದಾರೆ. ಕೊನೆಗೆ ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರು ಮಾಡಬೇಕಿದ್ದ ಕೆಲಸವನ್ನು ತಾವೇ ಮಾಡಿ ಪೂರೈಸಿದ್ದಾರೆ. ನೂರು ದಿನಗಳ ಬಳಿಕ ತಾವೇ ಮೊಬೈಲ್ ಶೌಚಾಲಯ ನಿರ್ಮಿಸಿದ್ದಾರೆ. ಇದರಿಂದ ಗೊರಗುಂಟೆಪಾಳ್ಯ ಜಂಕ್ಷನ್

ಬೆಂಗಳೂರು; ಇಲ್ಲೊಂದು ಮೊಬೈಲ್ ಶೌಚಾಲಯ,
ಸರ್ಕಾರ ಮಾಡದ ಕೆಲಸವನ್ನ ತಾನೇ ನಿರ್ಮಾಣ ಮಾಡಿದ ಪಿಎಸ್ ಐ ಶಾಂತಪ್ಪ
Read More »

ರಾಜ್ಯದಲ್ಲಿ ಇನ್ನೂ ಭಾರೀ ಮಳೆ ಲಕ್ಷಣ- ಎಚ್ಚರಿಕೆ ನೀಡಿದ ಸಿಎಂ

ಸಮಗ್ರ ನ್ಯೂಸ್ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮಳೆ ಹಾನಿ ಕುರಿತಾಗಿ ನಿನ್ನೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂಜಾಗೃತಾ ಕ್ರಮ ಹಾಗೂ ಪರಿಹಾರದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಇಂದು ಸ್ವಲ್ಪ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಇನ್ನೂ 2-3 ದಿನಗಳ ಕಾಲ ಹಲವೆಡೆ ಮಳೆಯಾಗಲಿದೆ. ಅದಕ್ಕೆ ಅನುಗುಣವಾಗಿ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು

ರಾಜ್ಯದಲ್ಲಿ ಇನ್ನೂ ಭಾರೀ ಮಳೆ ಲಕ್ಷಣ- ಎಚ್ಚರಿಕೆ ನೀಡಿದ ಸಿಎಂ Read More »

ಮಂಗಳೂರು: ಮಾದಕದ್ರವ್ಯ ಮಾರಾಟ ಹಿನ್ನಲೆ; 12 ಕಾಲೇಜು ವಿದ್ಯಾರ್ಥಿಗಳು ಅರೆಸ್ಟ್

ಸಮಗ್ರ ನ್ಯೂಸ್: ನಗರದಲ್ಲಿ ಸಾರ್ವಜನಿಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 12 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಾನೂಫ್ ಅಬ್ದುಲ್ ಗಫೂರ್(21), ಮೊಹಮ್ಮದ್ ರಸೀನ್(22), ಗೋಕುಲ ಕೃಷ್ಣನ್(22), ಶಾರೂನ್ ಆನಂದ(19), ಅನಂತು ಕೆ.ಪಿ(18), ಅಮಲ್(21), ಅಭಿಷೇಕ(21), ನಿದಾಲ್(21), ಶಾಹೀದ್ ಎಂ.ಟಿ.ಪಿ(22), ಫಹಾದ್ ಹಬೀಬ್(22), ಮೊಹಮ್ಮದ್ ರಿಶಿನ್(22), ರಿಜಿನ್ ರಿಯಾಜ್(22) ಬಂಧಿತರು. ಬಂಧಿತ ವಿದ್ಯಾರ್ಥಿಗಳೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ. ಆರೋಪಿಗಳ ಪೈಕಿ 9 ಮಂದಿ ವಿದ್ಯಾರ್ಥಿಗಳು ಯೇನೆಪೋಯ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿದ್ದು, 3

ಮಂಗಳೂರು: ಮಾದಕದ್ರವ್ಯ ಮಾರಾಟ ಹಿನ್ನಲೆ; 12 ಕಾಲೇಜು ವಿದ್ಯಾರ್ಥಿಗಳು ಅರೆಸ್ಟ್ Read More »

ಮತ್ತೆ ಸುದ್ದಿಯಾಗುತ್ತಿರುವ ಚೆಂಬು ಗ್ರಾಮ| ಈ ಬಾರಿ ಮತ್ತೆ ಭೂಮಿಯೊಳಗೆ ನಿಗೂಢ ಶಬ್ದ

ಸಮಗ್ರ ನ್ಯೂಸ್: ಭೂಕಂಪನದಿಂದ ದಿಗಿಲುಗೊಂಡಿದ್ದ ಗಡಿಗ್ರಾಮ ಚೆಂಬುವಿನಲ್ಲಿ ಮತ್ತೆ ನಿಗೂಢ ಸದ್ದು ಪುನರಾವರ್ತನೆಗೊಂಡಿದೆ. ಇಂದು ಮುಂಜಾನೆ 4.40ರ ಸುಮಾರಿಗೆ ಭೂಮಿಯಾಳದಿಂದ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಕೊಡಗು ಭೂಗರ್ಭ ಶಾಸ್ತ್ರಜ್ಞ ಅನನ್ಯಾ ವಾಸುದೇವ್ ಪ್ರತಿಕ್ರಿಯೆ ನೀಡಿದ್ದು, ಭೂಕಂಪವಾದ ಭೂಮಿಯೊಳಗೆ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಿರುತ್ತದೆ. ಇದರಿಂದ ಆಗಾಗ್ಗೆ ಶಬ್ದ, ಕಂಪನಗಳು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಜನರು ಆತಂಕ ಪಡಬೇಕಿಲ್ಲ. ಇದರಿಂದ ಯಾವುದೇ ಅನಾಹುತ ಸಂಭವಿಸಲಾರದು ಎಂದಿದ್ದಾರೆ. ಚೆಂಬು ಗ್ರಾಮದ ಜನತೆಯೂ ಈಗೀಗ ಪ್ರಕೃತಿಯೊಂದಿಗೆ ಹೊಂದಿಕೊಳ್ಳುತ್ತಿದ್ದು,

ಮತ್ತೆ ಸುದ್ದಿಯಾಗುತ್ತಿರುವ ಚೆಂಬು ಗ್ರಾಮ| ಈ ಬಾರಿ ಮತ್ತೆ ಭೂಮಿಯೊಳಗೆ ನಿಗೂಢ ಶಬ್ದ Read More »

ನೂಪುರ್ ಶರ್ಮಾ ತಲೆ ಕಡಿದು ತಂದವರಿಗೆ 5ಲಕ್ಷ| ವಿವಾದಿತ ಹೇಳಿಕೆ ನೀಡಿದ ಟಿಎಂಸಿ ಸಂಸದ

ಸಮಗ್ರ ನ್ಯೂಸ್: ಬಿಜೆಪಿ ವಿವಾದಿತ ನಾಯಕಿ ನೂಪುರ್ ಶರ್ಮಾ ವಿರುದ್ಧ ಮತ್ತೊಬ್ಬ ನಾಯಕ ನಾಲಿಗೆ ಹರಿಬಿಟ್ಟಿದ್ದಾನೆ. ನೂಪುರ್ ಶರ್ಮಾ ತಲೆ ಕಡಿದು ತಂದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮಮತಾ ಬ್ಯಾನರ್ಜಿಯ ಟಿಎಂಸಿ ಪಕ್ಷದ ಸಂಸದ ವಾಸಿಮ್ ರಝಾ ಘೋಷಿಸಿದ್ದಾನೆ. ಇದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದೆ. ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆ, ಹಿಂಸಾಚಾರ ನಡೆದಿದೆ. ಇದೀಗ ನೂಪುರ್ ಬೆಂಬಲಿಸಿದವರ ಹತ್ಯೆಗಳು ನಡೆದಿದೆ. ಈ ಸಂಘರ್ಷಕ್ಕೆ

ನೂಪುರ್ ಶರ್ಮಾ ತಲೆ ಕಡಿದು ತಂದವರಿಗೆ 5ಲಕ್ಷ| ವಿವಾದಿತ ಹೇಳಿಕೆ ನೀಡಿದ ಟಿಎಂಸಿ ಸಂಸದ Read More »

ಸುಧಾ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಅಭ್ಯರ್ಥಿ

ಸಮಗ್ರ ನ್ಯೂಸ್: ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ತಾವು ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಮತ್ತು ಯುಕೆ ಪ್ರಧಾನಿ ಅಭ್ಯರ್ಥಿ ಎಂದು ಶುಕ್ರವಾರ ಘೋಷಣೆ ಮಾಡಿದ್ದಾರೆ. ಬ್ರಿಟನ್‌ನ ಪ್ರಧಾನಿ ಹುದ್ದೆಗೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ನಾಯಕತ್ವದ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಬೋರಿಸ್‌ ಜಾನ್ಸನ್ ಅವರ ನಾಯಕತ್ವವನ್ನು ವಿರೋಧಿಸಿ ಸುನಕ್‌ ಅವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುನಕ್‌ ಅವರು ತಾವು ಕನ್ಸರ್‌ವೇಟಿವ್‌ ಪಕ್ಷದ ಬ್ರಾಂಡ್ ಅನ್ನು ರಕ್ಷಿಸುವ ಹಾಗೂ ಆರ್ಥಿಕ ಬಿಕ್ಕಟ್ಟನ್ನು

ಸುಧಾ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಅಭ್ಯರ್ಥಿ Read More »

ಹಳ್ಳದಲ್ಲಿ ನಿಂತು ಸೇತುವೆ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪದ್ಮಶ್ರೀ ತುಳಸಿ ಗೌಡ| ಖಾಸಗಿ ಜಾಗದ ಮಾಲೀಕರು ಒಪ್ಪಬೇಕು: ಜಿಲ್ಲಾಡಳಿತ

ಸಮಗ್ರ ನ್ಯೂಸ್: ತಮ್ಮ ಮನೆಯ ಮುಂದೆ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಪರಿಸರ ಪ್ರೇಮಿ ತುಳಸಿ ಗೌಡ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ತುಳಸಿ ಗೌಡರವರ ಮನೆಯಿದ್ದು ಅದರ ಮುಂದೆ ಸಣ್ಣದೊಂದು ಹಳ್ಳ ಹರಿಯುತ್ತಿದೆ. ಈ ಹಳ್ಳವನ್ನು ಮಳೆಗಾಲದಲ್ಲಿ ದಾಟಲು ಆಗುವುದಿಲ್ಲ. ಹಾಗಾಗಿ ಹರಿಯುವ ಹಳ್ಳದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ನಿಂತು ಸೇತುವೆ ನಿರ್ಮಿಸಿ ಕೊಡುವಂತೆ ವೀಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಪ್ರತಿ

ಹಳ್ಳದಲ್ಲಿ ನಿಂತು ಸೇತುವೆ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪದ್ಮಶ್ರೀ ತುಳಸಿ ಗೌಡ| ಖಾಸಗಿ ಜಾಗದ ಮಾಲೀಕರು ಒಪ್ಪಬೇಕು: ಜಿಲ್ಲಾಡಳಿತ Read More »

ಕೆಪಿಸಿಸಿ ವಾರ್ ರೂಮ್ ಅಧ್ಯಕ್ಷರಾಗಿ ಸಸಿಕಾಂತ್ ಸೆಂಥಿಲ್ ನೇಮಕ

ಸಮಗ್ರ ನ್ಯೂಸ್: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪರವಾಗಿ ರಾಜಕೀಯ ತಂತ್ರಗಾರಿಕೆ ರೂಪಿಸಲಿರುವ ಕೆಪಿಸಿಸಿ ‘ವಾರ್ ರೂಮ್’ ಅಧ್ಯಕ್ಷರನ್ನಾಗಿ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ನೇಮಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗುರುವಾರ ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಸಸಿಕಾಂತ್ ಸೆಂಥಿಲ್ ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಐಎಎಸ್ ದರ್ಜೆ ಅಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದರು.

ಕೆಪಿಸಿಸಿ ವಾರ್ ರೂಮ್ ಅಧ್ಯಕ್ಷರಾಗಿ ಸಸಿಕಾಂತ್ ಸೆಂಥಿಲ್ ನೇಮಕ Read More »