July 2022

ಕಾಣಿಯೂರು: ಸೇತುವೆಯಿಂದ ಕೆಳಗುರುಳಿ ನೀರು ಪಾಲಾದ ಕಾರು| 50 ಮೀಟರ್ ದೂರದಲ್ಲಿ ಪತ್ತೆ

ಸಮಗ್ರ ನ್ಯೂಸ್: ಮಂಜೇಶ್ವರ – ಪುತ್ತೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ನೀರು ಪಾಲಾಗಿದ್ದು, 50 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ ಕಾರೊಂದು ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಈ ಘಟನೆ ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದೆ. ಘಟನೆ ಕುರಿತಂತೆ ಸ್ಥಳೀಯರು ಪರಿಶೀಲನೆ ನಡೆಸುತ್ತಿದ್ದು ವಿಟ್ಲ‌ ಕುಂಡಡ್ಕ ಮೂಲದ ಮೂವರು ನೀರುಪಾಲಾಗಿದ್ದಾರೆ ಎಂದು ಹೇಳಲಾಗಿದೆ. […]

ಕಾಣಿಯೂರು: ಸೇತುವೆಯಿಂದ ಕೆಳಗುರುಳಿ ನೀರು ಪಾಲಾದ ಕಾರು| 50 ಮೀಟರ್ ದೂರದಲ್ಲಿ ಪತ್ತೆ Read More »

ಮುಂದುವರಿದ ರಣಚಂಡಿ‌ ಮಳೆ| ಕರಾವಳಿಗೆ ಜಲ ದಿಗ್ಭಂದನ| ಇನ್ನೆರಡು ದಿನವೂ ರೆಡ್ ಅಲರ್ಟ್

ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದಲ್ಲಿ ಉಂಟಾದ ಸುಳಿಗಾಳಿ ಪರಿಣಾಮ ಕರಾವಳಿಯಲ್ಲಿ‌ ಭಾರೀ ಮಳೆ ಸುರಿಯುತ್ತಿದ್ದು, ದ.ಕ, ಉಡುಪಿ ಜಿಲ್ಲೆಗಳಿಗೆ ಜಲದಿಗ್ಬಂಧನ ಉಂಟಾಗಿದೆ. ದ.ಕ ಜಿಲ್ಲೆಯ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, 8.5 ಮಿ. ಎತ್ತರದಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶನಿವಾರ ಬೆಳಿಗ್ಗೆ ನೀರಿನ ಮಟ್ಟದಲ್ಲಿ ಇಳಿಕೆ ಕಂಡು ಬಂದಿದ್ದು, 6.3 ಮಿ. ಎತ್ತರದಲ್ಲಿ ಹರಿಯುತ್ತಿತ್ತು.ಆದರೆ ಸಂಜೆಯಾಗುತ್ತಿದ್ದಂತೆ ನೇತ್ರಾವತಿ ನದಿ ತುಂಬಿ‌ ಹರಿಯಲು ಪ್ರಾರಂಭಿಸಿದೆ. ಬಾರಿ ವೇಗವಾಗಿ ನೀರು ಹರಿಯುತ್ತಿದ್ದು ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಬೆಳಿಗ್ಗೆ

ಮುಂದುವರಿದ ರಣಚಂಡಿ‌ ಮಳೆ| ಕರಾವಳಿಗೆ ಜಲ ದಿಗ್ಭಂದನ| ಇನ್ನೆರಡು ದಿನವೂ ರೆಡ್ ಅಲರ್ಟ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ… ಮೇಷ ರಾಶಿಈ ವಾರ ಈ ರಾಶಿಯವರಿಗೆ ಹಣದ ಒಳಹರಿವು ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ಜುಲೈ 13 ರಂದು ಮಕರ ರಾಶಿಯಲ್ಲಿ ಹುಣ್ಣಿಮೆಯ ಚಂದ್ರನೊಂದಿಗೆ ಆರೋಗ್ಯವು ನಿಮ್ಮ ಕಡೆ ಇಲ್ಲದಿರಬಹುದು. ಹೀಗಾಗಿ ಆರೋಗ್ಯದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸುಳ್ಯ: ಕೊಚ್ಚಿಹೋದ ಏಕೈಕ ಮರದ ಪಾಲ; ದ್ವೀಪ ಸದೃಶವಾದ ಉಪ್ಪುಕಳ| ಅತಂತ್ರ ಸ್ಥಿತಿಯಲ್ಲಿ ಉಪ್ಪುಕಳ‌ ನಿವಾಸಿಗಳು

ಸಮಗ್ರ ನ್ಯೂಸ್: ನಿನ್ನೆ ತಡರಾತ್ರಿ(ಜು.9) ಸುರಿದ ಭಾರೀ ಮಳೆಯಿಂದಾಗಿ ಉಪ್ಪುಕಳ ಸಂಪರ್ಕಕ್ಕಾಗಿ ಇದ್ದ ಏಕೈಕ ಮರದ ಪಾಲ ನೀರುಪಾಲಾಗಿದ್ದು ಇಲ್ಲಿನ ನಿವಾಸಿಗಳು ದ್ವೀಪವಾಸಿಗಳಾಗಿದ್ದಾರೆ. ದ.ಕ ಜಿಲ್ಲೆಯ ‌ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಗತಿಯಾಗಿತ್ತು. 49ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು ಒಬ್ಬ ಅಂಗವಿಕಲರೂ ಇದ್ದಾರೆ. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ ಮರದ ಪಾಲ ನಿರ್ಮಿಸಿಕೊಂಡು ಹೊಳೆ ದಾಟುತ್ತಾರೆ. ತುಂಬಿ

ಸುಳ್ಯ: ಕೊಚ್ಚಿಹೋದ ಏಕೈಕ ಮರದ ಪಾಲ; ದ್ವೀಪ ಸದೃಶವಾದ ಉಪ್ಪುಕಳ| ಅತಂತ್ರ ಸ್ಥಿತಿಯಲ್ಲಿ ಉಪ್ಪುಕಳ‌ ನಿವಾಸಿಗಳು Read More »

ಸುಳ್ಯ: ಮತ್ತೆ ಕಂಪಿಸಿದ ಭೂಮಿ| ಬೆಚ್ಚಿಬಿದ್ದ ನಾಗರೀಕರು

ಸಮಗ್ರ ನ್ಯೂಸ್: ಸುಳ್ಯ ಹಾಗೂ ಕೊಡಗು ಗಡಿ ಪ್ರದೇಶದ ಹಲವೆಡೆ ಇಂದು ಬೆಳಿಗ್ಗೆ 6.23ರ ಸುಮಾರಿಗೆ ಭೂಮಿ ಕಂಪಿಸಿದೆ. ಹಲವೆಡೆ ಹಲವು ರೀತಿಯಲ್ಲಿ ಇದರ ಪ್ರತಿಫಲನ ವ್ಯಕ್ತವಾಗಿದೆ. ಭೂಮಿಯೊಳಗಿನಿಂದ ಗುಡುಗಿನ ಶಬ್ದದಂತೆ ಕೇಳಿ ಬಂದು ಬಳಿಕ ಭೂಮಿ ಅಲುಗಾಡಿದ ಅನುಭವ ಆಯಿತು ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ. ಸುಳ್ಯ, ಅರಂತೋಡು, ಸಂಪಾಜೆ, ಪೆರಾಜೆ, ಎಲಿಮಲೆ, ಮರ್ಕಂಜ, ಕೊಡಗು ಸಂಪಾಜೆ ಸೇರಿದಂತೆ ಹಲವು ಭಾಗಗಳಲ್ಲಿ ಈ ಅನುಭವ ಉಂಟಾಗಿದ್ದು ಎಂಟನೇ ಬಾರಿ ಭೂ ಕಂಪನ ದಾಖಲಾಗುತ್ತಿದೆ.

ಸುಳ್ಯ: ಮತ್ತೆ ಕಂಪಿಸಿದ ಭೂಮಿ| ಬೆಚ್ಚಿಬಿದ್ದ ನಾಗರೀಕರು Read More »

ಚೊಚ್ಚಲ ಮಹಿಳಾ ಗ್ರ್ಯಾನ್ ಸ್ಲ್ಯಾಮ್ ಗೆ ಮುತ್ತಿಕ್ಕಿದ ರೈಬಾಕಿನಾ

ಸಮಗ್ರ ನ್ಯೂಸ್: ವಿಂಬಲ್ಡನ್ ಮಹಿಳೆಯರ ಫೈನಲ್‌ನಲ್ಲಿ ಕಜಕಿಸ್ತಾನದ ಎಲೆನಾ ರೈಬಾಕಿನಾ ಅವರು ಟ್ಯುನೀಶಿಯಾದ ಆನ್ಸ್ ಜಬ್ಯೋರ್ ಅವರನ್ನು ಸೋಲಿಸುವ ಮೂಲಕ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಸೆಂಟರ್ ಕೋರ್ಟ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕಜಕಿಸ್ತಾನದ 17ನೇ ಶ್ರೇಯಾಂಕದ ರಿಬಾಕಿನಾ 3-6, 6-2, 6-2 ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ಜಬ್ಯೋರ್ ಅವರನ್ನು ಸೋಲಿಸಿದರು. ಇದು ರಿಬಾಕಿನಾ ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದ್ದು, ಅವರ ಮೂರನೇ ಪ್ರಶಸ್ತಿಯನ್ನು ಗೆದ್ದರು. ರಷ್ಯಾದಲ್ಲಿ ಬೆಳೆದು ಕಜಕಿಸ್ತಾನದಲ್ಲಿ ನೆಲೆಸಿ ಆ

ಚೊಚ್ಚಲ ಮಹಿಳಾ ಗ್ರ್ಯಾನ್ ಸ್ಲ್ಯಾಮ್ ಗೆ ಮುತ್ತಿಕ್ಕಿದ ರೈಬಾಕಿನಾ Read More »

ಗೋಮಾಂಸ ತಿನ್ನದೇ ಬಕ್ರೀದ್ ಆಚರಿಸೋಣ; ಹಿಂದೂಗಳ ಭಾವನೆಗೆ ಬೆಲೆ ಕೊಡೋಣ – ಗೌರವಯುತ ಮಾತನ್ನಾಡಿದ ಸಂಸದ ಬದ್ರುದ್ದಿನ್ ಅಜ್ಮಲ್

ಸಮಗ್ರ ನ್ಯೂಸ್: ಲೋಕಸಭಾ ಸಂಸದ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಹಾಗೂ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್, ಈದ್-ಉಲ್-ಅಧಾ ಸಂದರ್ಭದಲ್ಲಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಗೋವುಗಳನ್ನು ಬಲಿ ನೀಡದಂತೆ ಅಸ್ಸಾಂನ ಮುಸ್ಲಿಮರಿಗೆ ತನ್ನ ಮನವಿಯನ್ನು ಮಾಡಿದ್ದಾರೆ. ಆರ್‌ಎಸ್‌ ಎಸ್‌ ನ ಕೆಲವರು ಹಿಂದೂ ದೇಶ ಮಾಡಲು ಪ್ರಯತ್ನಿಸುವ ಮೂಲಕ ಹಿಂದೂಸ್ತಾನವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ. ಅವರ ಕನಸಿನಲ್ಲಿಯೂ ಹಿಂದೂ ದೇಶ ಆಗುವುದಿಲ್ಲ. ಅವರು ಈ ದೇಶದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಏಕತೆಯನ್ನು ಒಡೆಯಲು

ಗೋಮಾಂಸ ತಿನ್ನದೇ ಬಕ್ರೀದ್ ಆಚರಿಸೋಣ; ಹಿಂದೂಗಳ ಭಾವನೆಗೆ ಬೆಲೆ ಕೊಡೋಣ – ಗೌರವಯುತ ಮಾತನ್ನಾಡಿದ ಸಂಸದ ಬದ್ರುದ್ದಿನ್ ಅಜ್ಮಲ್ Read More »

ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ| ಜು.12ರವರೆಗೆ ರೆಡ್ ಅಲರ್ಟ್| ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ

ಸಮಗ್ರ ನ್ಯೂಸ್: ಕಳೆದೊಂದು ವಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದೀಗ ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ ಎದ್ದಿದ್ದು ಈ ಕಾರಣ ಹವಾಮಾನ ಇಲಾಖೆ ಜು.12ರವರೆಗೆ ರೆಡ್ ಅಲರ್ಟ್ ಮುಂದುವರಿಸಿದೆ. ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆ ಮುಂದುವರಿದಿದ್ದು, ಇನ್ನೂ ಕೆಲ ದಿನಗಳ ಕಾಲ ಸತತವಾಗಿ ಮಳೆಯಾಗಲಿರುವ ಕಾರಣದಿಂದ ರೆಡ್ ಅಲರ್ಟ್ ಮುಂದುವರಿಸಿದ್ದಾರೆ. ಕಳೆದ ಒಂದು ವಾರದಿಂದ ಕರಾವಳಿ ಜಿಲ್ಲೆಗಳಲ್ಲಿ

ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ| ಜು.12ರವರೆಗೆ ರೆಡ್ ಅಲರ್ಟ್| ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ Read More »

ಕೊಲಂಬೊ: ಪಲಾಯನಗೈದ ರಾಜಪಕ್ಸೆ| ಲಂಕನ್ನರ ನಾಡಲ್ಲಿ ಅರಾಜಕತೆ ಮುಂದುವರಿಕೆ

ಸಮಗ್ರ ನ್ಯೂಸ್: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಶನಿವಾರ ರಾಜಧಾನಿ ಕೊಲಂಬೊದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನಗೈದಿದ್ದಾರೆ ಎಂದು ಉನ್ನತ ರಕ್ಷಣಾ ಮೂಲ ತಿಳಿಸಿದೆ. ದೂರದರ್ಶನದ ದೃಶ್ಯಾವಳಿಗಳಲ್ಲಿ ಗೋಟಬಯ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದು ಕಂಪೌಂಡ್ ಗೆ ನುಗ್ಗಿರುವುದನ್ನು ಕಾಣಬಹುದು. “ಅಧ್ಯಕ್ಷರನ್ನು ಸುರಕ್ಷಿತವಾಗಿ ಬೇರೆಡೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ, ಉದ್ರಿಕ್ತ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸಕ್ಕೆ ನುಗ್ಗುವ ಸಾಧ್ಯತೆಯನ್ನು ತಡೆಯಲು ಭದ್ರತಾಪಡೆ ಗಾಳಿಯಲ್ಲಿ ಗುಂಡು ಹಾರಿಸಿದೆ. ಇಂದು ಸರ್ಕಾರದ ವಿರುದ್ಧ ಕೊಲಂಬೊ ಸೇರಿದಂತೆ ಪಶ್ಚಿಮ ಪ್ರಾಂತ್ಯದಲ್ಲಿ

ಕೊಲಂಬೊ: ಪಲಾಯನಗೈದ ರಾಜಪಕ್ಸೆ| ಲಂಕನ್ನರ ನಾಡಲ್ಲಿ ಅರಾಜಕತೆ ಮುಂದುವರಿಕೆ Read More »

ರಾಷ್ಟ್ರೀಯ ಪುಟ್ಬಾಲ್ ಆಟಗಾರ ವಿಶ್ವಾಸ್ ವಿದ್ಯುತ್ ಶಾಕ್ ನಿಂದ ಚಿಕಿತ್ಸೆ ಫಲಿಸದೇ ನಿಧನ

ಮಂಡ್ಯ: ವಿದ್ಯುತ್ ಶಾಕ್ ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಗುತ್ತಲು ಬಡಾವಣೆ ನಿವಾಸಿ ರಾಷ್ಟ್ರೀಯ ಫುಟ್‍ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಜು.1ರಂದು ಸ್ವರ್ಣ ಫುಟ್‍ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್‍ಬಾಲ್‌ ಪಂದ್ಯಕ್ಕಾಗಿ ತಯಾರಿಯಲ್ಲಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್‍ಗೆ ಒಳಗಾಗಿದ್ದರು. ನಂತರ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ

ರಾಷ್ಟ್ರೀಯ ಪುಟ್ಬಾಲ್ ಆಟಗಾರ ವಿಶ್ವಾಸ್ ವಿದ್ಯುತ್ ಶಾಕ್ ನಿಂದ ಚಿಕಿತ್ಸೆ ಫಲಿಸದೇ ನಿಧನ Read More »