ಸುಳ್ಯ: ಮತ್ತೆ ಎಂದಿನಂತೆ ಕಂಪಿಸಿದ ಭೂಮಿ
ಸಮಗ್ರ ನ್ಯೂಸ್: ಕಳೆದ ಕೆಲ ದಿನಗಳಿಂದ ಕಂಪನಕ್ಕೆ ಒಳಗಾಗುತ್ತಿರುವ ಸುಳ್ಯ ಪರಿಸರ ಇಂದೂ ಮತ್ತದೇ ಅನುಭವವನ್ನು ಹಂಚಿಕೊಂಡಿದೆ. ಸುಳ್ಯ ತಾಲೂಕಿನ ಅರಂತೋಡು, ಉಬರಡ್ಕ, ತೊಡಿಕಾನ, ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ, ಸಂಪಾಜೆ ಪರಿಸರದಲ್ಲಿ ಸೋಮವಾರ ಸಂಜೆ 4ರ ಸುಮಾರಿಗೆ ಭೂಕಂಪನವಾಗಿದೆ. ಈ ಕುರಿತಂತೆ ನಾಗರೀಕರು ಅನುಭವ ಹಂಚಿಕೊಂಡಿದ್ದು, ಭೂಕಂಪದ ಬಗ್ಗೆ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ನಿತ್ಯ ಸಂಭವಿಸುವ ಈ ಪ್ರಕೃತಿಯ ವಿದ್ಯಮಾನದಿಂದ ಜನರು ಗಾಬರಿಗೊಳಗಾದರೂ ಸುಧಾರಿಸಿಕೊಳ್ಳುತ್ತಿದ್ದಾರೆ.
ಸುಳ್ಯ: ಮತ್ತೆ ಎಂದಿನಂತೆ ಕಂಪಿಸಿದ ಭೂಮಿ Read More »