July 2022

ಸುಳ್ಯ : ರಸ್ತೆ ಅಭಿವೃದ್ಧಿಗಾಗಿ ಚುನಾವಣೆಯ ಬಹಿಷ್ಕಾರ ಬ್ಯಾನರ್| ಮುಖ್ಯಮಂತ್ರಿ ಬರುವ ಹಿನ್ನೆಲೆ ಕಿಡಿಗೇಡಿಗಳಿಂದ ತೆರವು ..??

ಸಮಗ್ರ ನ್ಯೂಸ್: ರಸ್ತೆ ಅಭಿವೃದ್ಧಿಗಾಗಿ ಚುನಾವಣೆಯ ಬಹಿಷ್ಕಾರ ಬ್ಯಾನರ್ ಅಳವಡಿಸಿದನ್ನು ಯಾರೋ ಕಿಡಿಗೇಡಿಗಳು ತೆರವು ಮಾಡಿದ ಘಟನೆ ಅರಂತೋಡು ಎಲಿಮಲೆ ಭಾಗದಿಂದ ವರದಿಯಾಗಿದೆ. ಅರಂತೋಡು-ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಗ್ರಹಿಸಿ ಕಳೆದ 2 ತಿಂಗಳ ಹಿಂದೆ ರಸ್ತೆಯುದ್ಧಕ್ಕೂ 26 ಕಡೆ ಈ ರಸ್ತೆಯ ನೊಂದ ಪಲಾನುಭವಿಗಳು ಹಾಕಿದ್ದ ಅಡ್ತಲೆಯ ಚುನಾವಣಾ ಬಹಿಷ್ಕಾರದ ಬ್ಯಾನರ್ ಗಳ ಪೈಕಿ ಹೆದ್ದಾರಿಗೆ ಕಾಣುವಂತೆ ವೈ ಎಮ್ ಕೆ ರಸ್ತೆ ಕ್ರಾಸ್ ಬಳಿ ಹಾಕಿದ್ದರು. ಈ ಬ್ಯಾನರ್ ಗಳನ್ನು ಕಳೆದ(ಜು.11) ರಾತ್ರಿ ಯಾರೋ ಕಿಡಿಗೇಡಿಗಳು […]

ಸುಳ್ಯ : ರಸ್ತೆ ಅಭಿವೃದ್ಧಿಗಾಗಿ ಚುನಾವಣೆಯ ಬಹಿಷ್ಕಾರ ಬ್ಯಾನರ್| ಮುಖ್ಯಮಂತ್ರಿ ಬರುವ ಹಿನ್ನೆಲೆ ಕಿಡಿಗೇಡಿಗಳಿಂದ ತೆರವು ..?? Read More »

ಮಳೆಯಲ್ಲಿ ಆಟ ಆಡಬೇಡ ತಾಯಿ ಹೇಳಿದ್ದಕ್ಕೆ ಕೋಪಗೊಂಡು ಬಾಲಕ ನೇಣುಬಿಗಿದು ಆತ್ಮಹತ್ಯೆ

ಕೋಟ :  ಮಳೆಯಲ್ಲಿ ಆಟ ಆಡದಂತೆ ತಾಯಿ ಬುದ್ಧಿ ಮಾತು ಹೇಳಿದ್ದಕ್ಕೆ 9ನೇ ತರಗತಿ ಬಾಲಕನೊಬ್ಬ ಕೋಪಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬ್ರಹ್ಮಾವರ ತಾಲೂಕಿನ ಕಾರ್ಕಡದಲ್ಲಿ ನಡೆದಿದೆ. ಮೃತ ಬಾಲಕನನ್ನು ಕಾರ್ಕಡ ನಿವಾಸಿ ಲಕ್ಷ್ಮಿ ಎಂಬವರ ಮಗ, ಕೋಟ ವಿವೇಕ ಹೈಸ್ಕೂಲಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ ನಾಗೇಂದ್ರ (14) ಎಂದು ಗುರುತಿಸಲಾಗಿದೆ. ಲಕ್ಷ್ಮೀ ಕಾರ್ಕಡದಲ್ಲಿ ವೀರಭದ್ರ ಕ್ಯಾಂಟೀನ್ ನಡೆಸಿಕೊಂಡಿದ್ದು, ಶಾಲಾ ರಜೆ ಹಿನ್ನೆಲೆ ನಾಗೇಂದ್ರ ಕಾರ್ಕಡ ಶಾಲಾ ಮೈದಾನದಲ್ಲಿ ಆಟ ಆಡಲು ಹೋಗಿದ್ದ ಎನ್ನಲಾಗಿದೆ.

ಮಳೆಯಲ್ಲಿ ಆಟ ಆಡಬೇಡ ತಾಯಿ ಹೇಳಿದ್ದಕ್ಕೆ ಕೋಪಗೊಂಡು ಬಾಲಕ ನೇಣುಬಿಗಿದು ಆತ್ಮಹತ್ಯೆ Read More »

1ರಿಂದ 12ನೇ ತರಗತಿ ಮಕ್ಕಳಿಗೆ ಪ್ರಥಮ ಭಾಷೆಯಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯ; ರಾಜ್ಯ ಸರ್ಕಾರ ದಿಂದ ಕೇಂದ್ರ ಸರ್ಕಾರ ಕ್ಕೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು : ರಾಜ್ಯದ 1 ರಿಂದ 12 ನೇ ತರಗತಿವರೆಗಿನ ಮಕ್ಕಳಿಗೆ ಪ್ರಥಮ ಭಾಷೆಯಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಬೇಕು, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ತೃತೀಯ ಭಾಷೆಯಾಗಿ ಭಾರತದ ಯಾವುದಾದರೊಂದು ಭಾಷೆಯನ್ನು ಕಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದ ಕಾರ್ಯಪಡೆ ರಚಿಸಿತ್ತು. ಈ ಕಾರ್ಯಪಡೆಯು 26 ವಿಷಯಗಳಿಗೆ

1ರಿಂದ 12ನೇ ತರಗತಿ ಮಕ್ಕಳಿಗೆ ಪ್ರಥಮ ಭಾಷೆಯಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯ; ರಾಜ್ಯ ಸರ್ಕಾರ ದಿಂದ ಕೇಂದ್ರ ಸರ್ಕಾರ ಕ್ಕೆ ಪ್ರಸ್ತಾವನೆ ಸಲ್ಲಿಕೆ Read More »

ದಾಖಲೆಯ ಮಳೆಗೆ ನಲುಗಿದ ಕರಾವಳಿ| 8 ಪ್ರದೇಶಗಳಲ್ಲಿ ಬರೊಬ್ಬರಿ 100 ಮೀ.ಮೀ ಮಳೆ‌!

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಭಾಗದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. 24 ಗಂಟೆಗಳಲ್ಲಿ 8 ಪ್ರದೇಶಗಳಲ್ಲಿ 100 ಮಿಲಿ ಮೀಟರ್ ಗೂ ಹೆಚ್ಚಿನ ಮಳೆಯಾಗಿದ್ದು, ಕರಾವಳಿ ಬೆಚ್ಚಿ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ಪ್ರದೇಶದಲ್ಲಿ 152.4 ಮಿಲಿಮೀಟರ್ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ 159.8 ಮಿಲಿಮೀಟರ್ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕೋಟ ವ್ಯಾಪ್ತಿಯಲ್ಲಿ 118.8 ಮಿಲಿ ಮೀಟರ್ ಮಳೆಯಾಗಿದೆ. 7 ಪ್ರದೇಶಗಳಲ್ಲಿ

ದಾಖಲೆಯ ಮಳೆಗೆ ನಲುಗಿದ ಕರಾವಳಿ| 8 ಪ್ರದೇಶಗಳಲ್ಲಿ ಬರೊಬ್ಬರಿ 100 ಮೀ.ಮೀ ಮಳೆ‌! Read More »

ಬೈತಡ್ಕ: ಕಾರುದುರಂತ; ಇಬ್ಬರ ಶವಗಳೂ ಪತ್ತೆ

ಸಮಗ್ರ. ನ್ಯೂಸ್: ಜು.12. ಶನಿವಾರ ತಡರಾತ್ರಿ ಸೇತುವೆಯಿಂದ ಕೆಳಕ್ಕೆ ಕಾರು ಬಿದ್ದು ನಾಪತ್ತೆಯಾಗಿದ್ದ ಯುವಕರಿಬ್ಬರ ಮೃತದೇಹವು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ಅಪಘಾತ ನಡೆದು 200 ಮೀ. ವ್ಯಾಪ್ತಿಯಲ್ಲಿ ಮೃತದೇಹವು ಮೊದಲು ಪತ್ತೆಯಾಗಿದ್ದು, ಸ್ವಲ್ಪ ಅಂತರದಲ್ಲೇ ಎರಡನೇ ಮೃತದೇಹ ಪತ್ತೆಯಾಗಿದೆ.

ಬೈತಡ್ಕ: ಕಾರುದುರಂತ; ಇಬ್ಬರ ಶವಗಳೂ ಪತ್ತೆ Read More »

ಕಾಣಿಯೂರು: ಕಾರು ದುರಂತ ಪ್ರಕರಣ|ಓರ್ವ ವ್ಯಕ್ತಿಯ ಮೃತದೇಹ ಪತ್ತೆ

ಕಾಣಿಯೂರು: ಇಲ್ಲಿನ ಬೈತಡ್ಕ ಹೊಳೆಯಲ್ಲಿ ಕಾರು ದುರಂತದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಯುವಕರಲ್ಲಿ ಓರ್ವ ವ್ಯಕ್ತಿಯ ಮೃತದೇಹ ಜು.12ರಂದು ಪತ್ತೆಯಾಗಿದೆ. ಜು. 10 ರಂದು ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ಇಬ್ಬರು ವಿಟ್ಲ ಮೂಲದ ಯುವಕರು ನೀರುಪಾಲಾಗಿದ್ದರು. ಜು.12ರಂದು ಬೆಳಿಗ್ಗೆ 8 ಗಂಟೆಗೆ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾಗಿದೆ. ಮೃತದೇಹ ಅಂಗಿ ಕಳಚ್ಚಿದ್ದು, ಪ್ಯಾಂಟ್ ಧರಿಸಿದ ರೀತಿ ಕವುಚಿ ಮರದಲ್ಲಿ ನೇತಾಡುತ್ತಿದ್ದು. ಮಳೆ

ಕಾಣಿಯೂರು: ಕಾರು ದುರಂತ ಪ್ರಕರಣ|ಓರ್ವ ವ್ಯಕ್ತಿಯ ಮೃತದೇಹ ಪತ್ತೆ Read More »

ಕೊಡಗು: ಜಿಲ್ಲೆಯ ಈ ಶಾಲೆಗಳಿಗೆ ಇಂದು(ಜು.12) ರಜೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದ ಹಿನ್ನೆಲೆ ಕೆಲವೊಂದು ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿರುವ ಕೆಪಿಎಸ್ ಶಾಲೆ, ವಿರಾಜಪೇಟೆಯ ಸಂತ ಅನ್ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಆಡಳಿತ ಮಂಡಳಿಗಳು ಶಾಲೆಗಳಿಗೆ ರಜೆ ಘೋಷಣೆ ಮಾಡಿವೆ. ಇನ್ನೊಂದೆಡೆ ಮಳೆ ಹೆಚ್ಚಾಗುತ್ತಿರುವ ಕೊಡಗು ಜಿಲ್ಲೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಲಿದ್ದಾರೆ.

ಕೊಡಗು: ಜಿಲ್ಲೆಯ ಈ ಶಾಲೆಗಳಿಗೆ ಇಂದು(ಜು.12) ರಜೆ Read More »

ಕೊಂಚ ತಗ್ಗಿದ ಮಳೆಯಬ್ಬರ| ಇಂದಿನಿಂದ ಶಾಲಾ ಕಾಲೇಜುಗಳು ಎಂದಿನಂತೆ ಶುರು

ಸಮಗ್ರ ನ್ಯೂಸ್: ಕರಾವಳಿ‌ ಮತ್ತು ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಅಬ್ವರಿಸಿದ್ದ ಮಳೆ ಸೋಮವಾರದಿಂದ ಕೊಂಚ ಕಡಿಮೆಯಾಗಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ದ.ಕ, ಉಡುಪಿ, ಉ.ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಂಭವವಿದೆ. ಮಳೆ‌ ಕೊಂಚ ತಗ್ಗಿದ ಹಿನ್ನೆಲೆಯಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಮತ್ತೆ ಎಂದಿನಂತೆ ಶುರುವಾಗಲಿವೆ. ಕಳೆದೊಂದು ವಾರದಿಂದ ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡಿನ ಬಹುತೇಕ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಮಳೆ ಕಡಿಮೆಯಾಗಿದ್ದು

ಕೊಂಚ ತಗ್ಗಿದ ಮಳೆಯಬ್ಬರ| ಇಂದಿನಿಂದ ಶಾಲಾ ಕಾಲೇಜುಗಳು ಎಂದಿನಂತೆ ಶುರು Read More »

ಕಾಣಿಯೂರು: 40 ಗಂಟೆ ಕಳೆದರೂ ಪತ್ತೆಯಾಗದ ಯುವಕರು| ನದಿನೀರಲ್ಲೂ ಏರಿಕೆ; ಹುಡುಕಾಟಕ್ಕೆ ಅಡಚಣೆ

ಸಮಗ್ರ ನ್ಯೂಸ್: ತೀವ್ರ ಆತಂಕಕ್ಕೆ ಕಾರಣವಾಗಿರುವ ಕಾಣಿಯೂರಿನ ಬೈತಡ್ಕ ಸೇತುವೆಯಲ್ಲಿ ಜ.10ರ ಮಧ್ಯರಾತ್ರಿ 12 ಕ್ಕೆ ಕಾರು ನದಿಗೆ ಬಿದ್ದು ನಾಪತ್ತೆಯಾದ ಘಟನೆಯಲ್ಲಿ ಕಾಣೆಯಾದದವರ ವಿವರ 40 ಗಂಟೆ ಕಳೆದರೂ ಇನ್ನೂ ಲಭ್ಯವಾಗಿಲ್ಲ. ಈ ನಡುವೆ ಬೈತ್ತಡ್ಕದಲ್ಲಿ ಕಾರು ಅಪಘಾತವಾಗಿ ಸೇತುವೆಯ ತುಂಡಾದ ತಡೆಬೇಲಿ ಅಪಾಯ ಆಹ್ವಾನಿಸುತ್ತಿದೆ. ತುಂಡಾದ ಕಬ್ಬಿಣದ ರಾಡ್ ಗಳು ಹಾಗೆ ಬಿಟ್ಟಿದ್ದಾರೆ. ಇಲಾಖೆ ಯಾವೂದೇ ತಡೆಬೇಲಿಯೂ ಹಾಕುವ ಕಾರ್ಯವೂ ಮಾಡಿಲ್ಲ. ಇದರಿಂದ ಇನ್ನಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ‌ ಇದೆ. ಜ.10ರ ಮಧ್ಯರಾತ್ರಿ 12

ಕಾಣಿಯೂರು: 40 ಗಂಟೆ ಕಳೆದರೂ ಪತ್ತೆಯಾಗದ ಯುವಕರು| ನದಿನೀರಲ್ಲೂ ಏರಿಕೆ; ಹುಡುಕಾಟಕ್ಕೆ ಅಡಚಣೆ Read More »

ಮಂಗಳೂರು: ಕರಾವಳಿ ಜಿಲ್ಲೆಗಳ ʻಮಳೆಹಾನಿ ಪ್ರದೇಶಗಳಿಗೆ ʼ ನಾಳೆ (ಜು.12) ಸಿಎಂ ಭೇಟಿ

ಸಮಗ್ರ ನ್ಯೂಸ್: ಭಾರೀ ಮಳೆ ಸುರಿಯುತ್ತಿರುವ ಕರಾವಳಿ ಜಿಲ್ಲೆಗಳ ಮಳೆಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭೇಟಿ ನೀಡಲಿದ್ದಾರೆ. ಮಳೆ ಪೀಡಿತ ಪ್ರದೇಶಗಳಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾರವಾರಕ್ಕೆ ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸುತ್ತೇನೆ. ನಾಳೆ ರಾತ್ರಿ ಉಡುಪಿಯಲ್ಲಿ ವಾಸ್ತವ್ಯ ಹೂಡುತ್ತೇನೆ , ನೆರೆ ಹಾನಿ ವೀಕ್ಷಿಸಿ ಸ್ಥಳದಲ್ಲೇ ಸೂಚನೆ ನೀಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ. ಜು. 12ರ ನಾಳೆ ರಾತ್ರಿ ಉಡುಪಿಯಲ್ಲಿ ವಾಸ್ತವ್ಯ ಮಾಡಿ, ಆ ಬಳಿಕ ಜು. 14 ಕಾರವಾರಕ್ಕೆ

ಮಂಗಳೂರು: ಕರಾವಳಿ ಜಿಲ್ಲೆಗಳ ʻಮಳೆಹಾನಿ ಪ್ರದೇಶಗಳಿಗೆ ʼ ನಾಳೆ (ಜು.12) ಸಿಎಂ ಭೇಟಿ Read More »