July 2022

ಪಿಎಸ್ಐ ನೇಮಕಾತಿ ಅಕ್ರಮ ಕೊಲೆಗಿಂತಲೂ ಗಂಭೀರ‌ – ಹೈಕೋರ್ಟ್

ಸಮಗ್ರ ನ್ಯೂಸ್: ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಇಂದು ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದು, ಈ ಅಕ್ರಮ ಕೊಲೆಗಿಂತಲೂ ಗಂಭೀರ ಅಪರಾಧ ಎಂದು ಅಭಿಪ್ರಾಯಪಟ್ಟಿದೆ. ‘ಇದು ಕೊಲೆಗಿಂತ ಗಂಭೀರವಾದ ಅಪರಾಧ, ಕೊಲೆಯಾದರೆ ಒಬ್ಬ ಸಾವಿಗೀಡಾಗುತ್ತಾನೆ, ಇಲ್ಲಿ 50 ಸಾವಿರ ಅಭ್ಯರ್ಥಿಗಳು ತೊಂದರೆಗೀಡಾಗಿದ್ದಾರೆ’ ಎಂದು ನ್ಯಾ.ಹೆಚ್.ಪಿ.ಸಂದೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ರಮ ನೇಮಕಾತಿ ಸಮಾಜಕ್ಕೇ ಬಹು ದೊಡ್ಡ ಬೆದರಿಕೆ. ಪ್ರತಿ ನೇಮಕದಲ್ಲೂ ಹೀಗೇ ಆದರೆ ಕೋರ್ಟ್ ಕಣ್ಮುಚ್ಚಿ ಕೂರಬೇಕೇ? ಎಂದು ಪ್ರಶ್ನಿಸಿದ್ದಾರೆ. ಜು.20 ಕ್ಕೆ ತನಿಖಾ ಪ್ರಗತಿ […]

ಪಿಎಸ್ಐ ನೇಮಕಾತಿ ಅಕ್ರಮ ಕೊಲೆಗಿಂತಲೂ ಗಂಭೀರ‌ – ಹೈಕೋರ್ಟ್ Read More »

ಸುಳ್ಯ: ನಗರದ ಹೃದಯ ಭಾಗದಲ್ಲಿವೆ ಮೃತ್ಯುಕೂಪಗಳು|
ಜನಸಾಮಾನ್ಯರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದರೂ ನಿರ್ಲಕ್ಷ್ಯ

ಸಮಗ್ರ ನ್ಯೂಸ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿರುವ ಸುಳ್ಯ ನಗರ ಸೇರಿದಂತೆ ನ.ಪಂ ವ್ಯಾಪ್ತಿಯಲ್ಲಿ ಹಲವು ಗುಂಡಿಗಳು ಬಿದ್ದಿದ್ದು ಜನಸಾಮಾನ್ಯರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ನೋಡಿಯೂ ನೋಡದಂತೆ ತೆರಳುತ್ತಿದ್ದು, ಸಾರ್ವಜನಿಕರ ಪ್ರಾಣದ ಮೇಲೆ ಯಾಕಿಷ್ಟು ನಿರ್ಲಕ್ಷ್ಯ ಎಂಬ ಆಕ್ರೋಶ ಕೇಳಿಬರುತ್ತಿದೆ. ಸುಳ್ಯ ನ. ಪಂಚಾಯತ್ ನವರು ಗುಂಡಿ ಅಗೆದು ಕಾಮಗಾರಿ ನಡೆಸಿ ಅದನ್ನು ಸರಿಯಾಗಿ ಮುಚ್ಚದೆ ಇರುವುದು ನಗರದ ಹೃದಯ ಭಾಗವಾದ ಪೊಲೀಸ್ ಠಾಣೆಯ ಮುಂಭಾಗ ಮತ್ತು ಆಲೆಟ್ಟಿ ತಿರುವಿನಲ್ಲಿ

ಸುಳ್ಯ: ನಗರದ ಹೃದಯ ಭಾಗದಲ್ಲಿವೆ ಮೃತ್ಯುಕೂಪಗಳು|
ಜನಸಾಮಾನ್ಯರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದರೂ ನಿರ್ಲಕ್ಷ್ಯ
Read More »

ಕೈಕೊಟ್ಟ ಟ್ವಿಟರ್ ಸರ್ವರ್; ಬಳಕೆದಾರರ ಪರದಾಟ

ಸಮಗ್ರ ನ್ಯೂಸ್: ಭಾರತದ ಹಲವಾರು ನಗರಗಳಲ್ಲಿ ಮೈಕ್ರೋ-ಬ್ಲಾಗಿಂಗ್ ಸೇವೆ ಟ್ವಿಟರ್ ಸರ್ವರ್‌ ಡೌನ್‌ ಆಗಿದ್ದು, ಸೇವೆ ಲಭಿಸದೇ ಬಳಕೆದಾರರು ಪರದಾಡುತ್ತಿದ್ದಾರೆ. ಹಲವಾರು ಬಳಕೆದಾರರು ಫೋನ್‌ಗಳು ಮತ್ತು ಡೆಸ್ಕ್ ಟಾಪ್ಗಳೆರಡರಲ್ಲೂ ಟ್ವಿಟ್ಟರ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಸಂಜೆ 4:45 ರಿಂದ ಸಂಜೆ 5:00 ರವರೆಗೆ ಟ್ವಿಟ್ಟರ್‌ನ ದೂರುಗಳು ಹೆಚ್ಚಾಗುತ್ತಲೇ ಇವೆ. ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್‌ನಿಂದ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಕೈಕೊಟ್ಟ ಟ್ವಿಟರ್ ಸರ್ವರ್; ಬಳಕೆದಾರರ ಪರದಾಟ Read More »

ಲವ-ಕುಶನ ಕೊಂದ‌‌ ಹಂದಿಯ‌ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಕುಖ್ಯಾತ ರೌಡಿ, ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಂದಿ ಅಣ್ಣಿಯನ್ನು ಇಂದು ಬೆಳಗ್ಗೆ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶಿವಮೊಗ್ಗದ ವಿನೋಬನಗರದ ಪೊಲೀಸ್ ಚೌಕಿಯ ಬಳಿ ಪೊಲೀಸ್ ಠಾಣೆಯ ಅನತಿ ದೂರದಲ್ಲೇ ಬರ್ಬರ ಹತ್ಯೆ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ಇನ್ನೋವಾ ಕಾರ್ ನಲ್ಲಿ ಬಂದು ಮಚ್ಚು ಲಾಂಗ್ ಗಳಿಂದ ಹಂದಿ ಅಣ್ಣಿಯ ತಲೆಗೆ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಣ್ಣಿ ಮೃತಪಟ್ಟಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ

ಲವ-ಕುಶನ ಕೊಂದ‌‌ ಹಂದಿಯ‌ ಬರ್ಬರ ಹತ್ಯೆ Read More »

ರಾಜ್ಯದಲ್ಲಿಯೇ ಮದ್ಯ ಸೇವನೆಯಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆ

ಸಮಗ್ರ ನ್ಯೂಸ್:  ವಿವಿಧ ವಿಷಯಗಳಲ್ಲಿ ಸದಾ ಸುದ್ದಿಯಲ್ಲಿರುವ ದಕ್ಷಿಣ ಕನ್ನಡ ಇದೀಗ ಮತ್ತೊಂದು ದಾಖಲೆ ಬರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಸೇವನೆ ಪ್ರಮಾಣ ಜಾಸ್ತಿಯಾಗಿದ್ದು, ಪ್ರತಿ ವರ್ಷ ಸುಮಾರು 2.2 ಕೋಟಿ ಲೀಟರ್ (ದಿನಕ್ಕೆ ಸುಮಾರು 60 ಲೀಟರ್‍ ಹಾರ್ಡ್ ಲಿಕ್ಕರ್, 1.4 ಕೋಟಿ ಲೀಟರ್ ಬಿಯರ್ ಮದ್ಯ ಮಾರಾಟವಾಗಿದೆ. ಆ ಮೂಲಕ ದಕ್ಷಿಣ ಕನ್ನಡ ಮದ್ಯ ಸೇವನೆಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನ ಪಡೆದಿದೆ. ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸರಾಸರಿ

ರಾಜ್ಯದಲ್ಲಿಯೇ ಮದ್ಯ ಸೇವನೆಯಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆ Read More »

ಅಲೆಮಾರಿಗಳ ಸೋಗಿನಲ್ಲಿ ಬೆಂಗಳೂರಿನಲ್ಲಿ ಹ್ಯಾಶಿಶ್ ಆಯಿಲ್ ಮಾರಾಟ, ನಾಲ್ಕು ಮಂದಿ ಆರೋಪಿಗಳ ಬಂಧಿಸಿದ ಸಿಸಿಬಿ ಪೋಲಿಸರು

ಬೆಂಗಳೂರು: ಅಲೆಮಾರಿಗಳ ಸೋಗಿನಲ್ಲಿ ಬೆಂಗಳೂರಿಗೆ ಹ್ಯಾಶಿಶ್ ಆಯಿಲ್ ತಂದು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಪ್ರತಿಷ್ಠಿತ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಲ್ಲಿ ಗಿರಾಗಿಗಳಿಗೆ ಹ್ಯಾಶ್ ಆಯಿಲ್ ಮಾರಾಟ ಮಾಡುತ್ತಿದ್ದರು. ಡಿಜೆ ಜೂಡ್ ಹ್ಯಾರೀಸ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಂತರರಾಜ್ಯ ಪೆಡ್ಲರ್ಸ್ ಮಾಹಿತಿ ಹೊರಬಂದಿದೆ. ಆರೋಪಿಗಳು ಸೆಂಥಿಪಲ್ಲಿ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದು ಹ್ಯಾಶಿಶ್ ಆಯಿಲ್ ತಯಾರಿಕೆ ಮಾಡಿ, ಮಾರಾಟ ಮಾಡ್ತಿದ್ದರು. ಕೊಚ್ಚಿನ್, ಚೆನೈ, ಹೈದ್ರಾಬಾದ್, ಮುಂಬೈ ಹಾಗೂ ಮೇಟ್ರೋಪಾಲಿಟನ್ ನಗರಗಳ ಡ್ರಗ್​ಗಳನ್ನು

ಅಲೆಮಾರಿಗಳ ಸೋಗಿನಲ್ಲಿ ಬೆಂಗಳೂರಿನಲ್ಲಿ ಹ್ಯಾಶಿಶ್ ಆಯಿಲ್ ಮಾರಾಟ, ನಾಲ್ಕು ಮಂದಿ ಆರೋಪಿಗಳ ಬಂಧಿಸಿದ ಸಿಸಿಬಿ ಪೋಲಿಸರು Read More »

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು

ತುಮಕೂರು: ರಾಷ್ಟ್ರೀಯ ಹೆದ್ದಾರಿ-48ರ ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಸಮೀಪ ಬುಧವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಅನ್ವರ್ ಖಾನ್ (55) ಮೃತಪಟ್ಟಿದ್ದಾರೆ. ಶಿರಾ ನಗರದ ಅನ್ವರ್ ಖಾನ್ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅನ್ನರ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಕಳ್ಳಂಬೆಳ್ಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು Read More »

ಆಟ ಆಡುತ್ತಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಸಾವು

ಉಡುಪಿ: ಆಟವಾಡುತ್ತಿದ್ದ ಮಗು ನೀರಿನ‌ ಹೊಂಡಕ್ಕೆ ಬಿದ್ದು 5 ವರ್ಷದ ಬಾಲಕ ಮೃತಪಟ್ಟ‌ ಘಟನೆಯೊಂದು ಉಪ್ಪೂರು ಸಮೀಪದ ಕೆ.ಜಿ.ರೋಡ್ ಎಂಬಲ್ಲಿ ನಡೆದಿದೆ. ನಾರ್ಮನ್ ಹಾಗೂ ಸಿಲ್ವಿಯಾ ದಂಪತಿಯ ಪುತ್ರ ಲಾರೆನ್ ಲೆವಿಸ್(5) ಮೃತ ಬಾಲಕ. ಬುಧವಾರ ಸಂಜೆ ಮನೆ ಸಮೀಪ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿತ್ತೆನ್ನಲಾಗಿದೆ. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮನೆ ಸಮೀಪದ ನೀರಿನ ಹೊಂಡದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆಟ ಆಡುತ್ತಿದ್ದ ಬಾಲಕ ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಆಟ ಆಡುತ್ತಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಸಾವು Read More »

ಬೆಳ್ತಂಗಡಿ ; ಕಾಲೇಜಿನ ಉಪನ್ಯಾಸಕಿ ಮಲ್ಲಿಕಾ ನಿಧನ

ಬೆಳ್ತಂಗಡಿ : ಶ್ರೀ ಗುರುದೇವ ಪದವಿ ಕಾಲೇಜಿನ ಉಪನ್ಯಾಸಕಿ ಮಲ್ಲಿಕಾ (40ವ) ಅವರು ಹೃದಯಾಘಾತದಿಂದ ಜು.14 ರಂದು ಮೃತಪಟ್ಟ ಘಟನೆಯೊಂದು ನಡೆದಿದೆ. ಮಲ್ಲಿಕಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಅವರನ್ನು ಬೆಳ್ತಂಗಡಿಯ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಮಲ್ಲಿಕಾ ಅವರು ಪಿಲಿಚಂಡಿ ಕಲ್ಲು ನಿವಾಸಿಯಾಗಿದ್ದು, ಪ್ರಸ್ತುತ ಬೆಳ್ತಂಗಡಿಯ ಶ್ರೀ ಗುರುದೇವ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತಿ, ತಂದೆ, ತಾಯಿ ಹಾಗೂ

ಬೆಳ್ತಂಗಡಿ ; ಕಾಲೇಜಿನ ಉಪನ್ಯಾಸಕಿ ಮಲ್ಲಿಕಾ ನಿಧನ Read More »

ದೋಣಿಗಲ್ ನಲ್ಲಿ ಭೂಕುಸಿತ| ಶಿರಾಡಿ ಘಾಟ್ ನಲ್ಲಿ ಘನವಾಹನ ಸಂಚಾರ ಬಂದ್

ಸಮಗ್ರ ನ್ಯೂಸ್: ಶಿರಾಡಿ ಘಾಟ್‌ನ ದೋಣಿಗಲ್ ಬಳಿ ಮತ್ತೆ ಭೂಕುಸಿತಗೊಂಡ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಕಳೆದ ವರ್ಷ ಹೆದ್ದಾರಿ ಕುಸಿತಗೊಂಡ ಅಲ್ಪ ದೂರದಲ್ಲೇ ವಾರದ ಹಿಂದೆ ರಸ್ತೆ ಕುಸಿದಿದ್ದು, ಇಂದು ಮತ್ತೆ ಭೂ ಕುಸಿತಗೊಂಡು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಲಾರಿ ಸೇರಿದಂತೆ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಲಘು ವಾಹನಗಳನ್ನು ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ದೋಣಿಗಲ್ ನಲ್ಲಿ ಭೂಕುಸಿತ| ಶಿರಾಡಿ ಘಾಟ್ ನಲ್ಲಿ ಘನವಾಹನ ಸಂಚಾರ ಬಂದ್ Read More »