ಹುಟ್ಟೂರಲ್ಲೇ ಸಂಸದರಿಗೆ, ಶಾಸಕರಿಗೆ ಮುಖಭಂಗ|
ಇನ್ನಾದರೂ ಹಣ, ಅಧಿಕಾರದ ಆಸೆ ಬಿಟ್ಟುಬಿಡಿ| ಯುವ ನಾಯಕರ ಜೀವ ಉಳಿಸಿಕೊಡಿ|
ಸಮಗ್ರ ವಿಶೇಷ: ಜು.26ರ ರಾತ್ರಿ ಯುವ ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರವರ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಯುಧಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಬಳಿಕ ರಕ್ತದ ನಡುವಿನಲ್ಲಿ ಬಿದ್ದಿದ್ದ ಪ್ರವೀಣ್‌ನನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯುವ ವಯಸ್ಸಿನಿಂದಲೇ ಹಿಂದೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದಲ್ಲದೇ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದವರು ಪ್ರವೀಣ್ ನೆಟ್ಟಾರು. ಬಿಜೆಪಿ ಯುವ ಮೋರ್ಚಾದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಇದರ ಜೊತೆಗೆ ಬೆಳೆಯುತ್ತಿರುವ ಯುವಕರೊಡನೆ ಹಾಗೂ […]