July 2022

ಮಂಗಳೂರು: ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

ಸಮಗ್ರ ನ್ಯೂಸ್: ಉಳ್ಳಾಲ ಪ್ರಕರಣವೊಂದರ ಮಹಜರಿಗೆ ತೆರಳುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಓರ್ವನಿಗೆ ಪೊಲೀಸ್ ಸಿಬಂದಿ ಫೈರಿಂಗ್ ನಡೆಸಿರುವ ಘಟನೆ ಕೊಣಾಜೆ‌ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬಂದಿ ಗಾಯಗೊಂಡಿದ್ದಾರೆ. 14ಕ್ಕೂ ಅಧಿಕ ಪ್ರಕರಣ ಇರುವ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ನಡೆದಿದೆ. ಫೈರಿಂಗ್ ವೇಳೆ ಉಳ್ಳಾಲ ಠಾಣಾ ಪೊಲೀಸ್ ಸಿಬಂದಿ ವಾಸುದೇವ ಹಾಗೂ ಅಕ್ಬರ್ ಎಂಬುವವರು ಗಾಯಗೊಂಡಿದ್ದಾರೆ. ಆರೋಪಿ ಮುಕ್ತರ್ ಹಲವು ವರ್ಷಗಳಿಂದ ಪೊಲೀಸರ ಕೈಗೆ […]

ಮಂಗಳೂರು: ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್ Read More »

ಮಡಿಕೇರಿ: ಕುಸಿಯುವ ಭೀತಿಯಲ್ಲಿ ಬಹುಕೋಟಿ ವೆಚ್ಚದ ತಡೆಗೋಡೆ| ಮಡಿಕೇರಿ – ಮಂಗಳೂರು ಸಂಚಾರಕ್ಕೆ ಬದಲಿ ಮಾರ್ಗ!

ಸಮಗ್ರ ನ್ಯೂಸ್: ಬಹುಕೋಟಿ ವೆಚ್ಚದಲ್ಲಿ ವಿನೂತನ ರೀತಿ ನಿರ್ಮಿಸಿದ ಕೊಡಗು ಜಿಲ್ಲಾಧಿಕಾರಿ ಕಚೇರಿಯ ಬೃಹತ್ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಹಿಡಿಯಲಾಗಿದೆ. ಮಂಗಳೂರು ಸಂಚರಿಸುವ ಆ ರಸ್ತೆ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ. ಮಡಿಕೇರಿ ಪೇಟೆಯ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ರಸ್ತೆ ಬಂದ್ ಮಾಡಿದ್ದಾರೆ. ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ಮತ್ತು ಮಡಿಕೇರಿಗೆ ಮಂಗಳೂರಿನಿಂದ ಬರುವವರು ಮೇಕೆರಿ ತಾಳತ್ತಮನೆ ಅಪ್ಪಂಗಳ ಮಾರ್ಗವಾಗಿ

ಮಡಿಕೇರಿ: ಕುಸಿಯುವ ಭೀತಿಯಲ್ಲಿ ಬಹುಕೋಟಿ ವೆಚ್ಚದ ತಡೆಗೋಡೆ| ಮಡಿಕೇರಿ – ಮಂಗಳೂರು ಸಂಚಾರಕ್ಕೆ ಬದಲಿ ಮಾರ್ಗ! Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಗ್ರ ನ್ಯೂಸ್: ಜುಲೈ ಎರಡನೇ ವಾರದಲ್ಲಿ ನಾವಿದ್ದೇವೆ. ಈ ವಾರ ರಾಶಿಗೆ ಏನು ಫಲ? ದೋಷ ಪರಿಹಾರಗಳೇನು? ಹೀಗೆ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ಮೇಷ ರಾಶಿ: ರೈತಾಪಿ ವರ್ಗದವರು ನೀರಿನಲ್ಲಿ ಕೆಲಸ ಮಾಡುವಾಗ ಎಚ್ಚರವಹಿಸುವುದು ಒಳ್ಳೆಯದು. ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಹಣದ ಒಳಹರಿವು ನಿಧಾನ ಸಾಧ್ಯತೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಪ್ರಗತಿ.

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ಸುಳ್ಯ: ಟಯರ್ ಶಾಪ್ ನಲ್ಲಿ ರಾತ್ರೋರಾತ್ರಿ ಹತ್ತಿಕೊಂಡ ಬೆಂಕಿ; ಭಾರೀ ನಷ್ಟ

ಸಮಗ್ರ ನ್ಯೂಸ್: ಟಯರ್ ಅಂಗಡಿಯೊಂದಕ್ಕೆ ತಡ ರಾತ್ರಿ ಬೆಂಕಿ ತಗುಲಿದ ಪರಿಣಾಮ ಭಾರೀ ನಷ್ಟ ಉಂಟಾಗಿರುವ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ‌ ಕಲ್ಲುಗುಂಡಿಯ ಕೂಲಿಶೆಡ್‌ನಲ್ಲಿ ನಡೆದಿದೆ. ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಚಿಮ್ಮಿತ್ತು. ಟಯರ್, ಟ್ಯೂಬ್ ರಿಪೇರಿ ಮತ್ತು ಮಾರಾಟದ ಅಂಗಡಿಗೆ ಬೆಂಕಿ ತಗುಲಿದ್ದು ಸಮೀಪದ ಗೂಡಂಗಡಿ, ಸೈಕಲ್ ರಿಪೇರಿ ಅಂಗಡಿ, ಹೋಟೆಲ್‌ಗೂ ಹಾನಿಯಾಗಿದೆ. ಸುಳ್ಯದ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ: ಟಯರ್ ಶಾಪ್ ನಲ್ಲಿ ರಾತ್ರೋರಾತ್ರಿ ಹತ್ತಿಕೊಂಡ ಬೆಂಕಿ; ಭಾರೀ ನಷ್ಟ Read More »

ಸುಳ್ಯ: ಎರಡು ದಿನವಾದರೂ ಪತ್ತೆಯಾಗದ ಕರೆಂಟ್| ಸಚಿವರೇ ಈ ಕೆಲಸ ಯಾವತ್ತಾಗುತ್ತೆ?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಕರೆಂಟ್ ನಾಪತ್ತೆಯಾಗಿದ್ದು, ಜನರು ಪರದಾಡುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಜನರ ಮುಂದಿಟ್ಟರೆ ಇದಕ್ಕಿಂತ ಮೊದಲು ಮಾಡಿದ ಕೆಲಸಗಳನ್ನು ಹೇಳಿ ಎಂದು ಮೀನುಗಾರಿಕಾ ಸಚಿವರು 6 ಬಾರಿ ಶಾಸಕರೂ ಆಗಿರುವ ಎಸ್ ಅಂಗಾರರು ಗರಂ ಆಗ್ತಾರೆ. ಕ್ಷೇತ್ರದಲ್ಲಿ ನಿರಂತರ ಎರಡನೇ ದಿನವೂ ದಿನಪೂರ್ತಿ ಕರೆಂಟ್‌ ನಾಪತ್ತೆಯಾಗಿದ್ದು ಜನರು ಬಸವಳಿದು ಹೋಗಿದ್ದಾರೆ. ಸುಳ್ಯದ ಜನತೆ ವಿದ್ಯುತ್ ಸಮಸ್ಯೆ ಮುಗಿಯದ ಕರೆಯಾಗಿದೆ. ಜು 16ರಂದು ದಿನಪೂರ್ತಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವ

ಸುಳ್ಯ: ಎರಡು ದಿನವಾದರೂ ಪತ್ತೆಯಾಗದ ಕರೆಂಟ್| ಸಚಿವರೇ ಈ ಕೆಲಸ ಯಾವತ್ತಾಗುತ್ತೆ? Read More »

ಯೋಧನ ಪಾದ ಸ್ಪರ್ಶಿಸಿದ ಪುಟಾಣಿ| ಮಗುವಿನ ಮುಗ್ದ ನಡೆಗೆ ವ್ಯಾಪಕ ಪ್ರಶಂಸೆ

ಸಮಗ್ರ ನ್ಯೂಸ್: ಸೈನಿಕರು ಅಂದರೆ ಅದೇನೋ ಪ್ರೀತಿ, ಗೌರವ ಪ್ರತಿಯೊಬ್ಬ ಭಾರತೀಯನಿಗೂ ಇರುತ್ತದೆ. ಪುಟ್ಟ ಬಾಲಕಿಯೊಬ್ಬಳು ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಸೇನಾ ಸಿಬ್ಬಂದಿಯ ಪಾದಗಳನ್ನು ಸ್ಪರ್ಶಿಸಿದ್ದಾಳೆ. ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾಳೆ. ಆ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸೇನಾ ಸಿಬ್ಬಂದಿ ಕಾಲಿಗೆ ನಮಸ್ಕರಿಸಿದ ಪುಟಾಣಿಮೆಟ್ರೋ ನಿಲ್ದಾಣದಲ್ಲಿ ಮಾವರು ಸೇನಾ ಸಿಬ್ಬಂದಿ ನಿಂತಿರುತ್ತಾರೆ. ಆಗ ಪುಟಾಣಿ ಬಾಲಕಿಯೊಬ್ಬಳು ಅವರತ್ತ ಓಡಿ ಹೋಗುತ್ತಾಳೆ. ಆಗ ಓರ್ವ ಸಿಬ್ಬಂದಿ ಆ ಮಗುವನ್ನು

ಯೋಧನ ಪಾದ ಸ್ಪರ್ಶಿಸಿದ ಪುಟಾಣಿ| ಮಗುವಿನ ಮುಗ್ದ ನಡೆಗೆ ವ್ಯಾಪಕ ಪ್ರಶಂಸೆ Read More »

ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಪ.ಬಂಗಾಳ ರಾಜ್ಯಪಾಲ ಜಗದೀಪ್ ಧಂಗರ್ | ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಘೋಷಣೆ

ಸಮಗ್ರ ನ್ಯೂಸ್: ರಾಷ್ಟ್ರಪತಿ ಚುನಾವಣೆಗೆ ದೇಶಾದ್ಯಂತ ಚುನಾವಣಾ ಪ್ರಚಾರ ನಡೆಯುತ್ತಿರುವ ನಡುವೆಯೇ, ಭಾರತೀಯ ಜನತಾ ಪಕ್ಷ ಸಂಸದೀಯ ಮಂಡಳಿ ಸಭೆ ಶನಿವಾರ ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಕರ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿ ಜಗದೀಪ್ ಧಂಕರ್’ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಬಿಜೆಪಿ

ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಪ.ಬಂಗಾಳ ರಾಜ್ಯಪಾಲ ಜಗದೀಪ್ ಧಂಗರ್ | ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಘೋಷಣೆ Read More »

“ನನ್ನ ಮೆಸೇಜ್ ಗೆ ಉತ್ತರಿಸಿ” ಟ್ರೋಲ್ ಆಯ್ತು‌ ಲಲಿತ್ ಮೋದಿ ಟ್ವೀಟ್

ಸಮಗ್ರ ನ್ಯೂಸ್: ಉದ್ಯಮಿ ಹಾಗೂ ಐಪಿಎಲ್ ಹೊಸ ರೂಪ ಕೊಟ್ಟು ಹೆಸರು ಮಾಡಿದ್ದ ಲಲಿತ್​ ಮೋದಿಯವರು ಸುಶ್ಮಿತಾ ಸೇನ್​ ಅವರೊಂದಿಗೆ ಡೇಟಿಂಗ್​ ಮಾಡುವುದಾಗಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಅವರ ಹಳೆಯ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಲು ಪ್ರಾರಂಭವಾಗಿದೆ. “ಸುಶ್ಮಿತಾ ಸೇನ್​ ನನ್ನ ಎಸ್​ಎಂಎಸ್​ಗೆ ಉತ್ತರಿಸಿ’ ಎಂದು ಲಲಿತ್​ ಮೋದಿ ಮಾಡಿದ್ದ ಟ್ವೀಟ್​ ಈಗ ಸದ್ದು ಮಾಡುತ್ತಿದೆ. ಆ ಟ್ವೀಟ್​ ಮಾಡಿದ್ದು 2013ರಲ್ಲಿ. ಆದರೆ, ಈಗ ಹಾಸ್ಯಮಯ ಪ್ರತಿಕ್ರಿಯೆಗಳಿಗೆ ಆ ಒಂದು ಸಣ್ಣ ಪೋಸ್ಟ್​ ಕಾರಣವಾಗಿದೆ. ಜುಲೈ

“ನನ್ನ ಮೆಸೇಜ್ ಗೆ ಉತ್ತರಿಸಿ” ಟ್ರೋಲ್ ಆಯ್ತು‌ ಲಲಿತ್ ಮೋದಿ ಟ್ವೀಟ್ Read More »

ಮಂಗಳೂರು; ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ,ಇಬ್ಬರ ಸೆರೆ ಹಿಡಿದ ಸಿಸಿಬಿ ಪೋಲಿಸ್

ಸಮಗ್ರ ನ್ಯೂಸ್ : ಮಂಗಳೂರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಬಿ ರವರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ನಗರದ ಕಾವೂರು ಶಂಕರ ನಗರ ಕೆ ಸಿ ಆಳ್ವ ಲೇಔಟ್ ನ ಮನೆಯೊಂದಕ್ಕೆ ದಾಳಿ ನಡೆಸಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿದ

ಮಂಗಳೂರು; ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ,ಇಬ್ಬರ ಸೆರೆ ಹಿಡಿದ ಸಿಸಿಬಿ ಪೋಲಿಸ್ Read More »

ದಲಿತರ ಕಾಲೋನಿಗೆ‌ ಬಂದ ಅನುದಾನ ಬೇರೆಡೆಗೆ ವರ್ಗಾವಣೆ| ಶಾಸಕರೇ ಈ ಕೆಲಸ ‌ಮಾಡಿದ್ದಾರೆ ಎಂದು ಆರೋಪಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ದಲಿತರ ಕಾಲೋನಿಗೆ ಬಂದ ಶೌಚಾಲಯ ಮತ್ತು ಸ್ನಾನ ಗೃಹ ಕಟ್ಟಡ ಸ್ಥಳ ಬದಲಾವಣೆಗೆ ಶಾಸಕ ಅಂಗಾರರೇ ಕಾರಣ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪಿಸಿದೆ. ಕಾಲೋನಿಯಲ್ಲಿ ನೂತನ ಕಟ್ಟಡ ಮಾಡಿಕೊಡದಿದ್ದಲ್ಲಿ ಬಿಜೆಪಿ ಕಚೇರಿ ಮುಂದೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲು ದಲಿತ ಕಾಲೋನಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡ ನಿರ್ಮಿಸಲು 30 ಲಕ್ಷ ಅನುದಾನ ಬಂದಿದ್ದು, ಬಂದಿರುವ

ದಲಿತರ ಕಾಲೋನಿಗೆ‌ ಬಂದ ಅನುದಾನ ಬೇರೆಡೆಗೆ ವರ್ಗಾವಣೆ| ಶಾಸಕರೇ ಈ ಕೆಲಸ ‌ಮಾಡಿದ್ದಾರೆ ಎಂದು ಆರೋಪಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆ Read More »