July 2022

ನಾಳೆಯಿಂದ ಅಗತ್ಯ ವಸ್ತುಗಳ ಮೇಲೆ‌ ಜಿಎಸ್ ಟಿ ಬರೆ| ಅಚ್ಚೇದಿನದ ಮತ್ತೊಂದು ಕೊಡುಗೆ ಎಂದ ಗ್ರಾಹಕ

ಸಮಗ್ರ ನ್ಯೂಸ್: ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ದರ ಸದ್ಯ ಕೊಂಚ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ಕೊಂಚ ರಿಲಾಕ್ಸ್ ಆಗಿದ್ದ ದೇಶವಾಸಿಗಳಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ. ಕೊಂಚ ಸುಧಾರಿಸಿಕೊಳ್ಳುವ ಜೊತೆಗೆ ನಾಳೆಯಿಂದ ಅಗತ್ಯ ವಸ್ತುಗಳು, ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ಬರೆ ಬೀಳುತ್ತಿದ್ದು, ದುನಿಯಾ ಮತ್ತಷ್ಟು ದುಬಾರಿಯಾಗಲಿದೆ. ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಈ ದುಬಾರಿ‌ ತೆರಿಗೆಯಿಂದಾಗಿ ಗ್ರಾಹಕ ಇದೇನಾ ಅಚ್ಚೇದಿನ್ […]

ನಾಳೆಯಿಂದ ಅಗತ್ಯ ವಸ್ತುಗಳ ಮೇಲೆ‌ ಜಿಎಸ್ ಟಿ ಬರೆ| ಅಚ್ಚೇದಿನದ ಮತ್ತೊಂದು ಕೊಡುಗೆ ಎಂದ ಗ್ರಾಹಕ Read More »

ಜಾಲತಾಣಗಳಲ್ಲಿ ಕೊಡವರ ಕುಲದೇವತೆಗೆ ಅವಮಾನ| ಆರೋಪಿ ಅಂದರ್

ಸಮಗ್ರ ನ್ಯೂಸ್: ಕೊಡಗಿನ ಕಾವೇರಿ ಹಾಗೂ ಕೊಡವ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಮಡಿಕೇರಿ ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ವಿರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದ ನಿವಾಸಿ ಕೆ.ಪಿ.ದಿವಿನ್ ದೇವಯ್ಯ (29) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತನ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ಆರೋಪದ ಹಿನ್ನೆಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಜಾಲತಾಣಗಳಲ್ಲಿ ಕೊಡವರ ಕುಲದೇವತೆಗೆ ಅವಮಾನ| ಆರೋಪಿ ಅಂದರ್ Read More »

ಡಿಪ್ಲೊಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಚಿತ್ರದುರ್ಗ : ಪ್ರಸಕ್ತ ಸಾಲಿನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹೊಳಲ್ಕೆರೆ ಹನುಮಂತ ದೇವರ ಕಣಿವೆ ಬಳಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲಭ್ಯವಿರುವ ನಾನ್ ಇಂಟರ್ ಆಕ್ಟೀವ್ ಕೌನ್ಸೆಲಿಂಗ್ ಮೂಲಕ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ & ವೆಹಿಕಲ್ ಟೆಕ್ನಾಲಜಿ ಕೋರ್ಸ್‍ಗಳು ಲಭ್ಯವಿದೆ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು: ಎಸ್.ಎಸ್.ಎಲ್.ಸಿ.ಅಂಕ ಪಟ್ಟಿ, ವರ್ಗಾವಣೆ

ಡಿಪ್ಲೊಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ Read More »

ವಿಷಪೂರಿತ ಆಹಾರ ಸೇವನೆಯಿಂದ ಮದರಸಾ ವಿದ್ಯಾರ್ಥಿ ಸಾವು ; ಐದು ಮಂದಿ ಅಸ್ವಸ್ಥ

ಆಂಧ್ರಪ್ರದೇಶ: 12 ವರ್ಷ ಪ್ರಾಯದ ಮದರಸಾ ವಿದ್ಯಾರ್ಥಿ ಮೃತಪಟ್ಟಿದ್ದು, ಐವರು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆಯೊಂದು ಆಂಧ್ರದ ಪಲ್ನಾಡು ಜಿಲ್ಲೆಯ ಗುರಜಾಲ ಮಂಡಲದಲ್ಲಿರುವ ಇಸ್ಲಾಮಿಯಾ ನೂರುಲ್ ಹುದಾ ಮದ್ರಸಾದಲ್ಲಿ ನಡೆದಿದೆ. ಮದರಸಾ ವಿದ್ಯಾರ್ಥಿ ಮುನ್ನಾ(12) ಮೃತ ಬಾಲಕ. ತರಕಾರಿ ಸೊಪ್ಪಿನ ಪದಾರ್ಥ ಸೇವಿಸಿದ ಬಳಿಕ ಮುನ್ನಾ ಸಾವನ್ನಪ್ಪಿದ್ದು, ಐವರು ವಿದ್ಯಾರ್ಥಿಗಳು ವಿಷಪೂರಿತ ಆಹಾರ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಗುರಜಾಲ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಬಾಬು ಅವರು ಈ‌ ಬಗ್ಗೆ ಪ್ರತಿಕ್ರಿಯಿಸಿದ್ದು, ಮದರಸಾದ ಬಳಿ ಆರು ಮಂದಿ ಮದರಸಾ ವಿದ್ಯಾರ್ಥಿಗಳು

ವಿಷಪೂರಿತ ಆಹಾರ ಸೇವನೆಯಿಂದ ಮದರಸಾ ವಿದ್ಯಾರ್ಥಿ ಸಾವು ; ಐದು ಮಂದಿ ಅಸ್ವಸ್ಥ Read More »

ಬೈಕ್ ಅಪಘಾತ ದಲ್ಲಿ ಬೈಕ್ ಸವಾರ ಸಾವು ಮತ್ತೊರ್ವ ಗಂಭೀರ ಗಾಯ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಸಾವನ್ನಪ್ಪಿದ ಘಟನೆಯೊಂದು ಜೆಪಿ ನಗರ ಮೂರನೇ ಹಂತದ ಖಾಸಗಿ ಸ್ಕೂಲ್ ಬಳಿ ನಡೆದಿದೆ. ಕಾರ್ತಿಕ್ ಮೃತ ದುರ್ದೈವಿ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ವೇಗವಾಗಿ ಬಂದ ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮತ್ತೋರ್ವ ಸವಾರ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಜಯನಗರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್ ಅಪಘಾತ ದಲ್ಲಿ ಬೈಕ್ ಸವಾರ ಸಾವು ಮತ್ತೊರ್ವ ಗಂಭೀರ ಗಾಯ Read More »

ಪಾದಚಾರಿ ಯ ಇರಿದು ಕೊಲೆ

ಆನೇಕಲ್: ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯನ್ನು ಇರಿದು ಕೊಲೆ ಮಾಡಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ರಸ್ತೆ ಅಪಘಾತದಂತೆ ಕಂಡ ಘಟನೆ ಇದೀಗ ಕೊಲೆ ಎಂದು ತಿಳಿದು ಬಂದಿದೆ. ಪ್ರಕರಣವನ್ನು ಜಿಗಣಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೇರಳ ಕಾಸರಗೂಡು ಮೂಲದ ಸನು ಥಾಮ್ಸನ್(31) ಕೊಲೆಯಾದವರು. ಜಿಗಣಿಯ ಟಾಟಾ ಅಡ್ವಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಸನು ಥಾಮ್ಸನ್ ರಾತ್ರಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಮೂರು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ಕೊಲೆ ಮಾಡಿ ಕೆಇಬಿ ಮುಂಭಾಗದಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ನೂತನ

ಪಾದಚಾರಿ ಯ ಇರಿದು ಕೊಲೆ Read More »

ಎರಡು ಬೈಕ್ ಗಳ ನಡುವೆ ಅಪಘಾತ; ಮಾಜಿ ಸಚಿವ ಹೆಚ್.ವೈ.ಮೇಟಿ ಮೊಮ್ಮಗ ಗಂಭೀರ ಗಾಯ

ತುಮಕೂರು: ಬೈಕ್ ಅಪಘಾತದಲ್ಲಿ ಮಾಜಿ ಸಚಿವ ಹೆಚ್.ವೈ.ಮೇಟಿ ಮೊಮ್ಮಗ ಗಂಭೀರ ಗಾಯಗೊಂಡ ಘಟನೆಯೊಂದು ತುಮಕೂರು ನಗರದ ಶಿರಾ ಗೇಟ್ ಬಳಿ ನಡೆದಿದೆ. ಶಿರಾ ಗೇಟ್ ಬಳಿ ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಘಟನೆಯಲ್ಲಿ ಮಾಜಿ ಸಚಿವ ಹೆಚ್.ವೈ.ಮೇಟಿ ಮೊಮ್ಮಗ, ಎಂಬಿಬಿಎಸ್ ವಿದ್ಯಾರ್ಥಿ ಹರ್ಷ ಮೇಟಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್.ವೈ.ಮೇಟಿ ಆಸ್ಪತ್ರೆಗೆ ತೆರಳಿ ಮೊಮ್ಮಗನ ಆರೋಗ್ಯ ವಿಚಾರಿಸಿದ್ದಾರೆ.

ಎರಡು ಬೈಕ್ ಗಳ ನಡುವೆ ಅಪಘಾತ; ಮಾಜಿ ಸಚಿವ ಹೆಚ್.ವೈ.ಮೇಟಿ ಮೊಮ್ಮಗ ಗಂಭೀರ ಗಾಯ Read More »

ಕುಂದಾಪುರ: ಬೈಕ್ ಸ್ಕಿಡ್ ಆಗಿ ಇಬ್ಬರು ವಿದ್ಯಾರ್ಥಿಗಳು ದುರ್ಮರಣ

ಸಮಗ್ರ ನ್ಯೂಸ್: ಕುಂದಾಪುರದ ಕಂಬದಕೋಣೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್‌ ಸ್ಕಿಡ್‌ ಆಗಿ ಪಲ್ಟಿಯಾಗಿ ಉಡುಪಿಯ ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಮೂಲತಃ ಆಂಧ್ರ ಪ್ರದೇಶದ ಆದಿತ್ಯ ರೆಡ್ಡಿ (18) ಮತ್ತು ಕರಣ್‌ ಕುಮಾರ್‌ ರೆಡ್ಡಿ (19) ಸಾವಿಗೀಡಾಗಿರುವ ದುರ್ದೈವಿಗಳು. ಇವರಿಬ್ಬರು ಉಡುಪಿಯಲ್ಲಿ ಕಾಲೇಜು ಕಲಿಯುತ್ತಿದ್ದರು. ಕುಂದಾಪುರದಿಂದ ಬೈಂದೂರು ಕಡೆಗೆ ಬೈಕಿನಲ್ಲಿ ಹೋಗುತ್ತಿರುವಾಗ ಕಂಬದಕೋಣೆಯ ಸೇತುವೆ ಬಳಿ ಅವರ ಬೈಕ್‌ ಸ್ಕಿಡ್‌ ಆಗಿ ಪಲ್ಟಿಯಾಗಿದೆ.

ಕುಂದಾಪುರ: ಬೈಕ್ ಸ್ಕಿಡ್ ಆಗಿ ಇಬ್ಬರು ವಿದ್ಯಾರ್ಥಿಗಳು ದುರ್ಮರಣ Read More »

ಇಂದು, ನಾಳೆ ಭಾರೀ‌ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮಾಹಿತಿ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದ್ದು, ಮಂಗಳವಾರದಿಂದ ರಾಜ್ಯಾದ್ಯಂತ ಮಳೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈರುತ್ಯ ಮುಂಗಾರು ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಬೀದರ್, ಕಲಬುರಗಿ, ಬೆಳವಾಗಿ ಹಾಗೂ ಹಾಸನ ಜಿಲ್ಲೆಯಲ್ಲಿ ಇಂದು ಯೆಲ್ಲೊ ಆಲರ್ಟ್ ಘೋಷಿಸಲಾಗಿದೆ. ಕರಾವಳಿ ತೀರದಲ್ಲಿ ಗಂಟೆಗೆ

ಇಂದು, ನಾಳೆ ಭಾರೀ‌ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮಾಹಿತಿ Read More »

ಸಿಂಗಾಪುರ್ ಓಪನ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಪಿ.ವಿ ಸಿಂಧು

ಸಮಗ್ರ ನ್ಯೂಸ್: ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅಮೋಘ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಚೀನಾದ ವಾಂಗ್ ಝಿ ಯಿ ವಿರುದ್ದ ನಡೆದ ಫೈನಲ್​ ಪಂದ್ಯದಲ್ಲಿ ಭಾರತೀಯ ತಾರೆ ಭರ್ಜರಿ ಪ್ರದರ್ಶನ ನೀಡಿದ್ದರು. ಆರಂಭದಿಂದಲೇ ವಾಂಗ್ ವಿರುದ್ದ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್​ ಅನ್ನು 21-9 ಅಂತರದಿಂದ ಗೆದ್ದುಕೊಂಡರು. ಇದಾಗ್ಯೂ 2ನೇ ಸೆಟ್​ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. ದ್ವಿತೀಯ ಸೆಟ್​ನ

ಸಿಂಗಾಪುರ್ ಓಪನ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಪಿ.ವಿ ಸಿಂಧು Read More »