July 2022

MRPL ನಲ್ಲಿ‌‌ ಕಾಣಿಸಿಕೊಂಡ ದಟ್ಟ ಹೊಗೆ; ಆತಂಕದಲ್ಲಿ ಮಂಗಳೂರು

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಮತ್ತೆ MRPL ಪ್ರದೇಶದಲ್ಲಿ ಆತಂಕ ಮೂಡಿಸಿದ್ದು, MRPLನಿಂದ ರಾತ್ರಿಯಿಡೀ ಭಾರೀ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಮಂಗಳೂರಿಗರು ರಾತ್ರಿಯಿಡೀ ಆತಂಕದಿಂದ ಕಾಲ ಕಳೆಯುವಂತಾಯಿತು. ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್​​​​ ಕಂಪನಿ ಆತಂಕ ಮೂಡಿಸಿದೆ. MRPLನಿಂದ ರಾತ್ರಿಯಿಡೀ ಭಾರೀ ಹೊಗೆ ಕಾಣಿಸಿಕೊಂಡಿದೆ. ಬಾನೆತ್ತರಕ್ಕೆ ಹಾರುತ್ತಿದ್ದ ಹೊಗೆ ಕಂಡು ಜನರು ತೀವ್ರ ಆತಂಕಗೊಂಡರು. MRPL ಸುಮಾರು 5000 ಎಕರೆ ಪ್ರದೇಶದಲ್ಲಿದೆ. ಮಧ್ಯರಾತ್ರಿ ನಂತರ ಪೆಟ್ರೋಲ್​​ ವಾಸನೆ ಜತೆ ಹೊಗೆ ಕಾಣಿಸಿಕೊಂಡಿದೆ. ಪದೇ-ಪದೇ MRPLನಲ್ಲಿ ಬೆಂಕಿ ಅವಘಡ ಸಂಭವಿಸುತ್ತವೆ. […]

MRPL ನಲ್ಲಿ‌‌ ಕಾಣಿಸಿಕೊಂಡ ದಟ್ಟ ಹೊಗೆ; ಆತಂಕದಲ್ಲಿ ಮಂಗಳೂರು Read More »

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲ್ಲ – ಸಿದ್ದರಾಮಯ್ಯ| ಅಂಗಳ ಅಳೆಯಲಾಗದವ ಆಕಾಶ ಅಳೆಯಲು ಹೊರಟಿದ್ದಾನೆ – ಬಿಜೆಪಿ

ಸಮಗ್ರ ನ್ಯೂಸ್: ಕಳೆದ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಸೋಲಿಸಿದ್ದು, ಮತ್ತೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಈ ಮಾತಿಗೆ ಬಿಜೆಪಿ ವ್ಯಂಗ್ಯವಾಡಿದ್ದು, ಸರಣಿ ಟ್ವೀಟ್ ಮೂಲಕ ಕಾಲೆಳೆದಿದೆ. ಸ್ಪರ್ಧಿಸಿ ಗೆಲ್ಲಲು ಸೂಕ್ತ ಕ್ಷೇತ್ರವಿಲ್ಲದ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ, ಬಾದಾಮಿಯಲ್ಲಿ ಗೆಲ್ಲಲ್ಲ, ಚಾಮರಾಜಪೇಟೆ ದಕ್ಕಲ್ಲ! ಅಂಗಳ ಅಳೆಯಲು ಸಾಧ್ಯವಿಲ್ಲದ ವ್ಯಕ್ತಿಯಿಂದ ಆಕಾಶ ಅಳೆಸಲು ಹೊರಟಿರುವುದು ಹಾಸ್ಯಾಸ್ಪದವಲ್ಲವೇ ಎಂದಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲ್ಲ – ಸಿದ್ದರಾಮಯ್ಯ| ಅಂಗಳ ಅಳೆಯಲಾಗದವ ಆಕಾಶ ಅಳೆಯಲು ಹೊರಟಿದ್ದಾನೆ – ಬಿಜೆಪಿ Read More »

ಕೊಡಗಿನ ಮೊಣ್ಣಂಗೇರಿಯಲ್ಲಿ ಭಾರೀ ಭೂಕುಸಿತ| ಕೊಚ್ಚಿ ಹೋಯ್ತು ಐದು ಎಕರೆಯಷ್ಟು ಭೂಮಿ!

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಮಡಿಕೇರಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಪರಿಣಾಮ ಬೀರಿದ್ದು, ನಿನ್ನೆ ಭಾರೀ ಶಬ್ದವೊಂದು ಕೇಳಿಸಿದ ನಂತರ ಭೂಕುಸಿತ ಉಂಟಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು, ಸುಮಾರು ಐದು ಎಕರೆಯಷ್ಟು ಭೂಮಿ ಕೊಚ್ಚಿ ಬಂದಿದೆ. ನಿಶಾನಿ ಬೆಟ್ಟದ ಮೇಲ್ಭಾಗದಿಂದ ಕಲ್ಲುಗಳು, ಮಣ್ಣು, ಮರಗಳು ಕೊಚ್ಚಿ ಬರುತ್ತಿವೆ. ಭೂಕುಸಿತಕ್ಕೂ ಮೊದಲು‌ ಭಾರೀ ಶಬ್ಧವೊಂದು ಕೇಳಿಸಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದರು. ಸದ್ಯ ಭೂ ಕುಸಿತ ವ್ಯಾಪ್ತಿಯಿಂದ ಜನರು

ಕೊಡಗಿನ ಮೊಣ್ಣಂಗೇರಿಯಲ್ಲಿ ಭಾರೀ ಭೂಕುಸಿತ| ಕೊಚ್ಚಿ ಹೋಯ್ತು ಐದು ಎಕರೆಯಷ್ಟು ಭೂಮಿ! Read More »

ಮೇಕೇರಿ ಬಳಿ‌ ರಸ್ತೆ ಕುಸಿತ| ಮಡಿಕೇರಿ- ಮಂಗಳೂರು ಸಂಚಾರ ಸಂಪೂರ್ಣ ಬಂದ್

ಸಮಗ್ರ ನ್ಯೂಸ್: ಮಡಿಕೇರಿಯಿಂದ ಮಂಗಳೂರಿಗೆ ಮೇಕೇರಿ ತಾಳತ್ ಮನೆ ಮಾರ್ಗವಾಗಿ ಪರ್ಯಾಯ ರಸ್ತೆಯಿಂದ ವಾಹನಗಳು ಸಂಚರಿಸುತ್ತಿದ್ದು, ಈ ರಸ್ತೆಯಲ್ಲೂ ಕುಸಿತ ಉಂಟಾಗಿರುವ ಕಾರಣ ಮಂಗಳೂರು- ಮಡಿಕೇರಿ ಸಂಪರ್ಕ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಕರಾವಳಿಗೆ ಇದ್ದ ಕೊನೆಯ ಸಂಪರ್ಕ ರಸ್ತೆಯೂ ಮುಚ್ಚಿದಂತಾಗಿದೆ. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಕುಸಿತದ ಭೀತಿಯ ಕಾರಣ ಮಡಿಕೇರಿ- ಮಂಗಳೂರು ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಇದೀಗ ಈ ರಸ್ತೆಯೂ ಕುಸಿತ ಕಂಡಿದ್ದು ಎಲ್ಲಾ ವಾಹನಗಳನ್ನು ಸಂಪಾಜೆ ಗೇಟ್ ಬಳಿ ತಡೆ

ಮೇಕೇರಿ ಬಳಿ‌ ರಸ್ತೆ ಕುಸಿತ| ಮಡಿಕೇರಿ- ಮಂಗಳೂರು ಸಂಚಾರ ಸಂಪೂರ್ಣ ಬಂದ್ Read More »

ಸರಕಾರಿ ಸವಲತ್ತುಗಳಲ್ಲಿ ತಾರತಮ್ಯ ನಡೆಸುತ್ತಿರುವ ಸಚಿವ ಅಂಗಾರರ ನಡೆ ಖಂಡನಾರ್ಹ – ಎಸ್‌ಡಿಪಿಐ

ಸಮಗ್ರ ನ್ಯೂಸ್: ಸರ್ಕಾರಿ ಸವಲತ್ತುಗಳನ್ನು ನೀಡುವುದರಲ್ಲಿ ಸಚಿವ ಅಂಗಾರ ರವರು ತಾರತಮ್ಯ ನಡೆಸಿರುವ ಆಡಿಯೋ ವೊಂದು ವೈರಲ್ ಆಗಿದ್ದು,ಮೇಲ್ನೋಟಕ್ಕೆ ಶಾಸಕರು ತಾರತಮ್ಯ ನಡೆಸುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ, ಸಚಿವರ ಈ ತಾರತಮ್ಯ ನಡೆಯನ್ನು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ತೀವ್ರವಾಗಿ ಖಂಡಿಸಿದೆ. ದಲಿತ ಅಂಗವಿಕಲ ರಾಮಚಂದ್ರ ನಾಯಕ್ ಎಂಬವರು ಕೊಳವೆ ಬಾವಿಗಾಗಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ಅದರ ಶಿಫಾರಸ್ಸಿಗಾಗಿ ಶಾಸಕ ಹಾಗೂ ಸಚಿವ ಅಂಗಾರರವರ ಸಹಿಗಾಗಿ ದಲಿತ ಸಂಘಟನೆಯ ಮುಖಂಡರೋರ್ವರ ಮೂಲಕ ಬಿಜೆಪಿ ಕಛೇರಿಯ

ಸರಕಾರಿ ಸವಲತ್ತುಗಳಲ್ಲಿ ತಾರತಮ್ಯ ನಡೆಸುತ್ತಿರುವ ಸಚಿವ ಅಂಗಾರರ ನಡೆ ಖಂಡನಾರ್ಹ – ಎಸ್‌ಡಿಪಿಐ Read More »

ಸಚಿವ ಅಂಗಾರರದ್ದು ಪ್ರಜಾಪ್ರಭುತ್ವದ ಕಗ್ಗೊಲೆ; ಅನ್ಯಾಯವಾದವರಿಗೆ ನ್ಯಾಯ ಸಿಗಲೇಬೇಕು – ಬ್ಲಾಕ್ ಕಾಂಗ್ರೆಸ್

ಸಮಗ್ರ ನ್ಯೂಸ್: ಕಳೆದ ಮೂವತ್ತು ವರ್ಷಗಳಿಂದ ಶಾಸಕರಾಗಿದ್ದು ನನಗೆ ಯಾರೂ ಆಡಳಿತ ಹೇಳಿಕೊಡಬೇಕಾಗಿಲ್ಲ ಎಂದು ಹೇಳುತ್ತಿರುವ ಸಚಿವ ಎಸ್.ಅಂಗಾರರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಕಾರ್ಯಕರ್ತರಲ್ಲದವರಿಗೆ ಯೋಜನೆಯ ಲಾಭಕ್ಕೆ ಕೊಕ್ಕೆ ಹಾಕಿದ್ದು ಇದು ಅನ್ಯಾಯ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ಹೇಳಿದ್ದಾರೆ. ಬಿಜೆಪಿ ಸುಳ್ಯ ಕಚೇರಿ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿರುವ ಆಡಿಯೋ ಕುರಿತಂತೆ ಪ್ರತಿಕ್ರಿಯಿಸಿದ ಅವರು ‘ಚುನಾಯಿತ ಜನಪ್ರತಿನಿಧಿಯಾಗಿ ಸಚಿವ ಅಂಗಾರರು ರಾಜ್ಯದ ಎಲ್ಲಾ ಜನರಿಗೆ ಸಮಾನರಾಗಿರಬೇಕು. ಪಕ್ಷಕ್ಕೆ ಸಂಬಂಧಪಟ್ಟವರಿಗೆ ಮಾತ್ರ ಯೋಜನೆಗಳ ಲಾಭಕ್ಕೆ

ಸಚಿವ ಅಂಗಾರರದ್ದು ಪ್ರಜಾಪ್ರಭುತ್ವದ ಕಗ್ಗೊಲೆ; ಅನ್ಯಾಯವಾದವರಿಗೆ ನ್ಯಾಯ ಸಿಗಲೇಬೇಕು – ಬ್ಲಾಕ್ ಕಾಂಗ್ರೆಸ್ Read More »

ವಿದೇಶದಿಂದ ಬಂದ ಯುವಕನಲ್ಲಿ ಮಂಕಿಪಾಕ್ಸ್ ಲಕ್ಷಣ| ಆಸ್ಪತ್ರೆಗೆ ದಾಖಲಾದ ಯುವಕ

ಸಮಗ್ರ ನ್ಯೂಸ್: ವಿದೇಶದಿಂದ ಬಂದ ಯುವಕನೋರ್ವನಲ್ಲಿ ಮಂಕಿಪಾಕ್ಸ್‌ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಕಣ್ಣೂರಿನ ಪರಿಯಾರಂ ಮೆಡಿಕಲ್‌ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಕಣ್ಣೂರು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ವಿದೇಶದಿಂದ ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಇಲ್ಲಿಗೆ ಬಂದಿದ್ದ ಯುವಕನಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಾಣಿಸಿದ್ದರಿಂದ ಆತ ಸ್ವತಃ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಆರೋಗ್ಯಾಧಿಕಾರಿ ತಿಳಿಸಿದರು. ಯುವಕನ ಸ್ಯಾಂಪಲ್‌ಗ‌ಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ಫ‌ಲಿತಾಂಶ ಬಂದ ಬಳಿಕವಷ್ಟೇ ಆತನಿಗೆ ಮಂಕಿಪಾಕ್ಸ್‌ ತಗಲಿದೆಯೇ ಎಂಬುದು ಸ್ಪಷ್ಟವಾಗಲಿದೆ. ಪ್ರಸ್ತುತ

ವಿದೇಶದಿಂದ ಬಂದ ಯುವಕನಲ್ಲಿ ಮಂಕಿಪಾಕ್ಸ್ ಲಕ್ಷಣ| ಆಸ್ಪತ್ರೆಗೆ ದಾಖಲಾದ ಯುವಕ Read More »

“ಅದು ಕನ್ನಡ್ ಅಲ್ಲ ಕನ್ನಡ ” | ಸುದೀಪ್ ಮಾತು ವೈರಲ್

ಸಮಗ್ರ ನ್ಯೂಸ್: ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ವಿಕ್ರಾಂತ್ ರೋಣ ಪ್ರಚಾರ ಕಾರ್ಯ ದೆಹಲಿ ಸೇರಿದಂತೆ ಹಲವೆಡೆ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ ಪ್ರಚಾರ ಕಾರ್ಯದಲ್ಲಿ ಕಿಚ್ಚನ ಒಂದು ಮಾತು ಕನ್ನಡಿಗರ ಅಭಿಮಾನ ಹೆಚ್ಚು ಮಾಡಿದೆ. ಈ ಮೊದಲು ಹಿಂದಿ ರಾಷ್ಟ್ರಭಾಷೆಯ ಕುರಿತು ಬಾಲಿವುಡ್ ನಟ ಅಜಯ್ ದೇವಗನ್ ಜೊತೆಗಿನ ಟ್ವೀಟ್ ವಾರ್‌ನಿಂದ ಕನ್ನಡಾಭಿಮಾನ ಮೆರೆದಿದ್ದ ಸುದೀಪ್‌, ಇದೀಗ ಸ್ಟೇಜ್ ಮೇಲೆ ಕನ್ನಡದ ಬಗೆಗಿನ ಅವರ ಮಾತು ಫುಲ್ ವೈರಲ್ ಆಗುತ್ತಿದೆ. ನಿನ್ನೆ ವಿಕ್ರಾಂತ್ ರೋಣ ಸಿನಿಮಾದ

“ಅದು ಕನ್ನಡ್ ಅಲ್ಲ ಕನ್ನಡ ” | ಸುದೀಪ್ ಮಾತು ವೈರಲ್ Read More »

ಮಂಗಳೂರು: ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನ| ಆರೋಪಿಯ ಬಂಧನ

ಸಮಗ್ರ ನ್ಯೂಸ್: ವಿಧ್ಯಾರ್ಥಿನಿಯೊಬ್ಬಳ ಮನೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಂಜಿಮೊಗರಿನ ಮುಸ್ತಫಾ (35) ಎಂದು ಗುರುತಿಸಲಾಗಿದೆ. ಆರೋಪಿಯು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದ ತರಕಾರಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ವಿಧ್ಯಾರ್ಥಿನಿಯ ನಂಬರ್ ಪಡೆದುಕೊಂಡ ಆರೋಪಿ ಆಕೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಅಲ್ಲದೆ ಆರೋಪಿ ಜುಲೈ 8ರಂದು ರಾತ್ರಿ 8.30ಕ್ಕೆ ವಿದ್ಯಾರ್ಥಿನಿಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ ಕೃತ್ಯವನ್ನು ಇತರರಿಗೆ ಹೇಳಿದರೆ

ಮಂಗಳೂರು: ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನ| ಆರೋಪಿಯ ಬಂಧನ Read More »

3 ಅಂತಸ್ತಿನ ಮನೆಯ ಛಾವಣಿಯಿಂದ ಮಗುವನ್ನು ಎಸೆದ ಕೋತಿ; 4 ತಿಂಗಳ ಗಂಡು ಮಗು ಸಾವು

ಸಮಗ್ರ ನ್ಯೂಸ್: ಕೋತಿಯೊಂದು ಮೂರು ಅಂತಸ್ತಿನ ಮನೆಯ ಛಾವಣಿಯಿಂದ ಮಗುವನ್ನು ಎಸೆದ ಪರಿಣಾಮ ನಾಲ್ಕು ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆಯೊಂದು ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಈ ಬಗ್ಗೆ ವರದಿಯಾಗಿದ್ದು, ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿದ್ದಾರೆ. ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತಮ್ಮ ಪತ್ನಿ ಮತ್ತು ನಾಲ್ಕು ತಿಂಗಳ ಮಗುವಿನೊಂದಿಗೆ

3 ಅಂತಸ್ತಿನ ಮನೆಯ ಛಾವಣಿಯಿಂದ ಮಗುವನ್ನು ಎಸೆದ ಕೋತಿ; 4 ತಿಂಗಳ ಗಂಡು ಮಗು ಸಾವು Read More »