July 2022

ದೇಶವಾಸಿಗಳಿಗೆ ಮೋದಿ ಕರೆ ಕೊಟ್ಟಿದ್ದಾರೆ; ಎನಂತ ಗೊತ್ತಾ?

ಸಮಗ್ರ ನ್ಯೂಸ್: ಆಗಸ್ಟ್ 13-15ರವರೆಗೆ ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಅಥವಾ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೈಜೋಡಿಸಿ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಮೋದಿ, 1947 ಜುಲೈ 22ಕ್ಕೆ ರಾಷ್ಟ್ರಧ್ವಜವನ್ನು ಅಳವಡಿಸಿಕೊಳ್ಳಲಾಯಿತು ಎಂದಿದ್ದಾರೆ. ವಸಾಹತುಶಾಹಿ ಆಡಳಿತ ವಿರುದ್ಧ ನಾವು ಹೋರಾಡುತ್ತಿದಾಗ ಸ್ವತಂತ್ರ ಭಾರತಕ್ಕೊಂದು ಧ್ವಜ ಬೇಕು ಎಂದು ಕನಸು ಕಂಡು ಅದಕ್ಕಾಗಿ ಪ್ರಯತ್ನಿಸಿದ, ಆ ಧೈರ್ಯವನ್ನು […]

ದೇಶವಾಸಿಗಳಿಗೆ ಮೋದಿ ಕರೆ ಕೊಟ್ಟಿದ್ದಾರೆ; ಎನಂತ ಗೊತ್ತಾ? Read More »

ರಾಯಚೂರು: ನಡುರಸ್ತೆಯಲ್ಲೇ ಗುತ್ತಿಗೆದಾರನ ಕೊಚ್ಚಿ ಕೊಲೆ

ಸಮಗ್ರ ನ್ಯೂಸ್: ಹಾಡ ಹಗಲೇ ಗುತ್ತಿಗೆದಾರನ ಮೇಲೆ ದಾಳಿ ಮಾಡಿದ ಹಂತಕರು, ನಡು ರಸ್ತೆಯಲ್ಲಿಯೇ ಮಚ್ಚಿನಿಂದ ಗುತ್ತಿಗೆದಾರನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರಿನ ಬಿಎಸ್ ಎನ್ ಎಲ್ ಕಚೇರಿಯ ಬಳಿಯಲ್ಲಿ ನಡೆದಿದೆ. ಹಾಡಹಗಲೇ ಗುತ್ತಿಗೆದಾರ ಮೆಹಬೂಬ್ ಆಲಿ (30) ಎಂಬುವರನ್ನು ಹಂತಕರು ಮಚ್ಚಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ನಡು ರಸ್ತೆಯಲ್ಲಿಯೇ ನಡೆದ ಈ ಘಟನೆ ಕಂಡು ರಾಯಚೂರಿನ ಜನತೆ ಬೆಚ್ಚಿ ಬೀಳುವಂತೆ ಆಗಿದೆ. ಈ ಹತ್ಯೆಯ ವಿಷಯ ತಿಳಿದು ಸ್ಥಳಕ್ಕೆ ರಾಯಚೂರಿನ ಸದರ್ ಬಜಾರ್ ಠಾಣೆಯ

ರಾಯಚೂರು: ನಡುರಸ್ತೆಯಲ್ಲೇ ಗುತ್ತಿಗೆದಾರನ ಕೊಚ್ಚಿ ಕೊಲೆ Read More »

ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಕ್ರಿಯೇಟಿವ್ ವೆಡ್ಡಿಂಗ್ ಕಾರ್ಡ್ ರೆಡಿ

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಅವರ ಮದುವೆಯ ಆಮಂತ್ರಣ ಪತ್ರಿಕೆ ಹೊರಬಂದಿದೆ. ಮನೋರಂಜನ್ ಆಗಸ್ಟ್ 20 ಮತ್ತು 21 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತಾ ದೀಪಕ್ ಎಂಬವರ ಜೊತೆ ಮದುವೆಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಕುಟುಂಬ ವಿಶಿಷ್ಟವಾಗಿ ವೆಡ್ಡಿಂಗ್ ಕಾರ್ಡ್ ತಯಾರಿಸಿದೆ. ಆಮಂತ್ರಣ ಪತ್ರಿಕೆಯಲ್ಲಿ ರವಿಮಾಮನ ವಿಶಿಷ್ಟ ಪೋಟೋವಿದ್ದು ಜೊತೆಗೆ ಹೃದಯದ ವಿನ್ಯಾಸವಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಕ್ರಿಯೇಟಿವ್ ವೆಡ್ಡಿಂಗ್ ಕಾರ್ಡ್ ರೆಡಿ Read More »

ಭಾರತದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಗೆ ಕೋವಿಡ್ ಸೋಂಕು ದೃಢ

ನವದೆಹಲಿ : ಭಾರತದ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ʼಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಮತ್ತೊಂದು ಹಿನ್ನಡೆಯನ್ನು ಅನುಭವಿಸಿದ್ದಾರೆ ಎಂದು ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಇನ್ನು ರಾಹುಲ್‌ಗೆ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸರಣಿಯ ಕೊನೆಯ ಭಾಗಕ್ಕಾಗಿ ವೆಸ್ಟ್ ಇಂಡೀಸ್‌ಗೆ ತೆರಳುವುದು ಅವರ ಚೇತರಿಕೆಯ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

ಭಾರತದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಗೆ ಕೋವಿಡ್ ಸೋಂಕು ದೃಢ Read More »

ಕನ್ನಡ ಗೊಂಬೆ ಖ್ಯಾತರಾಗಿರುವ ನಿವೇದಿತಾ ಗೌಡ ಮಿಸೆಸ್ ಇಂಡಿಯಾ 2022 ಪ್ರಶಸ್ತಿ ವಿಜೇತೆ

ಬೆಂಗಳೂರು : ಕನ್ನಡದ ಗೊಂಬೆ ಎಂದು ಖ್ಯಾತರಾಗಿರುವ ನಿವೇದಿತಾ ಗೌಡ ಮಿಸೆಸ್​ ಇಂಡಿಯಾ 2022ರ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಇದೀಗ ಅವರು ಸಂತಸದ ಸುದ್ದಿಯೊಂದು ಹಂಚಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಒಂದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿಕೊಂಡಿರುವ ಸಂಸ್ಥೆ, ಕೊನೆಗೂ ಜನರ ಹೃದಯವನ್ನು ಗೆದ್ದು ಅವರಿಗೆ ಇಷ್ಟವಾಗುವಂತೆ ಮಾಡುವುದು ನಿಜವಾದ ಸಾಧನೆ , ಅದನ್ನು ನಿವೇದಿತಾ ಮಾಡಿದ್ದಾರೆ.

ಕನ್ನಡ ಗೊಂಬೆ ಖ್ಯಾತರಾಗಿರುವ ನಿವೇದಿತಾ ಗೌಡ ಮಿಸೆಸ್ ಇಂಡಿಯಾ 2022 ಪ್ರಶಸ್ತಿ ವಿಜೇತೆ Read More »

ಶ್ರೀಲಂಕಾ ಪ್ರಧಾನಿಯಾಗಿ ದಿನೇಶ್ ಗುಣವರ್ಧನ ಅಧಿಕಾರ ಸ್ವೀಕಾರ

ಸಮಗ್ರ‌ ನ್ಯೂಸ್ : ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನ ಅವರು ಶುಕ್ರವಾರ ಶ್ರೀಲಂಕಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ತಮ್ಮ ನೂತನ ಸಚಿವ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶ್ರೀಲಂಕಾದ ರಾಜಕೀಯದ ಧೀಮಂತ ನಾಯಕ ಗುಣವರ್ಧನ ಈ ಹಿಂದೆ ವಿದೇಶಾಂಗ ಸಚಿವರಾಗಿ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಏಪ್ರಿಲ್ ನಲ್ಲಿ ಅಂದಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಗೃಹ ಸಚಿವರಾಗಿ ನೇಮಿಸಿದರು. ಗೊಟಬಯಾ ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿದ ನಂತರ

ಶ್ರೀಲಂಕಾ ಪ್ರಧಾನಿಯಾಗಿ ದಿನೇಶ್ ಗುಣವರ್ಧನ ಅಧಿಕಾರ ಸ್ವೀಕಾರ Read More »

ವಿಟ್ಲ: ಬೆಳ್ಳಂಬೆಳಗ್ಗೆ ಆಲ್ಟೋ ಕಾರ್ ನಲ್ಲಿ ಹಿಂಸಾತ್ಮಕವಾಗಿ ಅಕ್ರಮ ಗೋಸಾಗಾಟ| ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಸಂಘಟನೆ ಕಾರ್ಯಕರ್ತರು

ಸಮಗ್ರ ನ್ಯೂಸ್: ಅಕ್ರಮ ಗೋ ಸಾಗಾಟ ಮಾಡುತ್ತಿದ್ದವರನ್ನು ಹಿಂದೂ ಪರ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ‌ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಪದವು ಕೋಡಂದೂರು ರಸ್ತೆಯಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆಯೆ ಅಕ್ರಮದಲ್ಲಿ ತೊಡಗಿದ್ದವರು ಆಲ್ಟೋ ಕಾರಿನಲ್ಲಿ ಹಿಂಸಾತ್ಮಕವಾಗಿ ಎರಡು ಗೋವುಗಳನ್ನು ಕೂಡಿ ಹಾಕಿ ಸಾಗಾಟ ಮಾಡುತ್ತಿದ್ದರು. ಇದನ್ನರಿತ ಹಿಂದೂ ಪರ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು‌ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ವಾಹನ ಹಾಗೂ ವಾಹನದ ಮಾಲಕರನ್ನು ತಕ್ಷಣ

ವಿಟ್ಲ: ಬೆಳ್ಳಂಬೆಳಗ್ಗೆ ಆಲ್ಟೋ ಕಾರ್ ನಲ್ಲಿ ಹಿಂಸಾತ್ಮಕವಾಗಿ ಅಕ್ರಮ ಗೋಸಾಗಾಟ| ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಸಂಘಟನೆ ಕಾರ್ಯಕರ್ತರು Read More »

ಈ ಪುಟ್ಟ ಬಾಲಕನ ಚಿಕಿತ್ಸೆಗೆ ನೆರವಾಗುವಿರಾ?

ಸಮಗ್ರ ನ್ಯೂಸ್ :ಸುಳ್ಯದ ಕಾಂತಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಗಣೇಶ ಮತ್ತು ಜ್ಯೋತಿ ದಂಪತಿಗಳ ಎರಡನೇ ಪುತ್ರನಾಗಿರುವ ತಶ್ವಿತ್ ಎಂಬ 11 ವರ್ಷದ ಬಾಲಕ ಎಲ್ಲಾ ಮಕ್ಕಳಂತೆ ಒಡಾಡಿಕೊಂಡು ಆರೋಗ್ಯವಾಗಿದ್ದ ಹುಡುಗ. ಸುಳ್ಯದ ರೋಟರಿ ಪ್ರಾಥಮಿಕ ಶಾಲೆಯಲ್ಲಿ 6 ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಹುಷಾರಾಗಿದ್ದ ಬಾಲಕ ಕಳೆದ 2 ತಿಂಗಳ ಹಿಂದೆ ಹಠಾತ್ ಆಗಿ ಆರೋಗ್ಯ ಕಳೆದು ಮಲಗಿದಲ್ಲೆ ಇರುವಂತಾಗಿದೆ. ಹಲವು ಕಡೆ ಚಿಕಿತ್ಸೆ ನೀಡಿದ್ದರೂ ಯಾವುದೇ ಪಲಕಾರಿಯಾಗಿಲ್ಲ. ಇದೀಗ ವೈದ್ಯರು ಬಯಾಪ್ಸಿ ಚಿಕಿತ್ಸೆಗಾಗಿ ಮಣಿಪಾಲ

ಈ ಪುಟ್ಟ ಬಾಲಕನ ಚಿಕಿತ್ಸೆಗೆ ನೆರವಾಗುವಿರಾ? Read More »

ಜಲಸ್ಪೋಟದ ಬಳಿಕ ಕೊಡಗಿ‌‌ನ ರಾಮಕೊಲ್ಲಿಯ ಬೆಟ್ಟ ಕುಸಿಯುವ ಆತಂಕ| 25 ಎಕ್ರೆಯಷ್ಟು ಬೆಟ್ಟ ಬಿರುಕು; ಜೀವ ಭಯದಲ್ಲಿ ಗ್ರಾಮಸ್ಥರು!

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ರಾಮಕೊಲ್ಲಿಯಲ್ಲಿ ಜುಲೈ 18 ರಂದು ಜಲಸ್ಫೋಟ ಆಗಿದ್ದು ಇದೀಗ ಇದೇ ಬೆಟ್ಟ ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ. ರಾಮಕೊಲ್ಲಿಯ ಮೇಲ್ಭಾಗದಲ್ಲಿರುವ ಕಡ್ಯದ ಮನೆಯ ಮೇಲ್ಭಾಗದಲ್ಲಿ ಜಲಸ್ಫೋಟ ಆಗಿದ್ದರಿಂದ ಐದು ಕಿಲೋಮೀಟರ್ ದೂರದ ಕೆಳಭಾಗದಲ್ಲಿರುವ ರಾಮಕೊಲ್ಲಿಯ ಸೇತುವೆ ಕೊಚ್ಚಿಹೋಗಿತ್ತು. ಮೇಲ್ಭಾಗದಿಂದ ನೂರಾರು ಮರ, ಗಿಡ ಮತ್ತು ಬಂಡೆಗಳ ಸಮೇತ ಎಲ್ಲವೂ ತರಗೆಲೆಯಂತೆ ಕೊಚ್ಚಿಹೋಗಿದ್ದವು. ಇದನ್ನು ಕಂಡಿದ್ದ ರಾಮಕೊಲ್ಲಿಯ ಜನತೆ ಬೆಚ್ಚಿಬಿದ್ದಿದ್ದರು. ಆದರೆ ಈಗ ರಾಮಕೊಲ್ಲಿಯ ಮೇಲ್ಭಾಗದಲ್ಲಿರುವ ಬೆಟ್ಟದ ಬರೋಬ್ಬರಿ 25

ಜಲಸ್ಪೋಟದ ಬಳಿಕ ಕೊಡಗಿ‌‌ನ ರಾಮಕೊಲ್ಲಿಯ ಬೆಟ್ಟ ಕುಸಿಯುವ ಆತಂಕ| 25 ಎಕ್ರೆಯಷ್ಟು ಬೆಟ್ಟ ಬಿರುಕು; ಜೀವ ಭಯದಲ್ಲಿ ಗ್ರಾಮಸ್ಥರು! Read More »

ಕರ್ನಾಟಕದ ಈ ಜಿಲ್ಲೆಗಳಲ್ಲಿ ಜು.23ರವರೆಗೆ ಭಾರೀ ಮಳೆ ಸಾಧ್ಯತೆ; ಎಲ್ಲೋ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಏಳು ಜಿಲ್ಲೆಗಳಲ್ಲಿ ಶನಿವಾರದ (ಜು.23) ವರೆಗೆಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ, ಮೈಸೂರು, ಮಲೆನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಿಗೆ ಯಾವುದೇ ಅಲರ್ಟ್‌ ನೀಡಲಾಗಿಲ್ಲ. ಶನಿವಾರದಿಂದ ಸೋಮವಾರದ ತನಕ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಗುರುವಾರದಿಂದ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ,

ಕರ್ನಾಟಕದ ಈ ಜಿಲ್ಲೆಗಳಲ್ಲಿ ಜು.23ರವರೆಗೆ ಭಾರೀ ಮಳೆ ಸಾಧ್ಯತೆ; ಎಲ್ಲೋ ಅಲರ್ಟ್ ಘೋಷಣೆ Read More »