“ಜೀಟಿಗೆ” ತುಳು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗೌರವ| ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಪುರಸ್ಕಾರ
ಸಮಗ್ರ ನ್ಯೂಸ್: ತುಳುನಾಡಿನ ಕಲಾರಾಧನೆಯ ಸೊಗಡಿನಲ್ಲಿ ನಿರ್ಮಾಣವಾದ “ಜೀಟಿಗೆ’ ತುಳು ಸಿನೆಮಾ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಎಂಬ ಗೌರವಕ್ಕೆ ಪಾತ್ರವಾಗಿದೆ. ತುಳು ಸಿನೆಮಾಕ್ಕೆ ಸಿಗುವ ಏಳನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು ಇದಕ್ಕೂ ಮುನ್ನ “ಬಂಗಾರ್ ಪಟ್ಲೆರ್’’, “ಕೋಟಿ ಚೆನ್ನಯ’, “ಗಗ್ಗರ’, “ಮದಿಪು’, “ಪಡ್ಡಾಯಿ’, “ಪಿಂಗಾರ’ ಸಿನೆಮಾಗಳು ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದ್ದವು. ಸಂತೋಷ್ ಮಾಡ ನಿರ್ದೇಶನ ಹಾಗೂ ಅರುಣ್ ರೈ ತೋಡಾರ್ ನಿರ್ಮಾಣ, ನವೀನ್ ಡಿ. ಪಡೀಲ್ ಅವರ ಮುಖ್ಯ ತಾರಾಗಣದಲ್ಲಿ “ಜೀಟಿಗೆ’ […]