July 2022

ರಾಜ್ಯದಲ್ಲಿ ‌ಮುಂದಿನ‌ ಎರಡು‌ ದಿನ‌ ಭಾರೀ ಮಳೆ – ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ […]

ರಾಜ್ಯದಲ್ಲಿ ‌ಮುಂದಿನ‌ ಎರಡು‌ ದಿನ‌ ಭಾರೀ ಮಳೆ – ಹವಾಮಾನ ಇಲಾಖೆಯಿಂದ ಎಚ್ಚರಿಕೆ Read More »

ಕೊಡಗಿನಲ್ಲಿ ಪದೇಪದೇ ಭೂಕಂಪ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಪದೇ ಪದೇ ಭೂ ಕುಸಿತ ಮತ್ತು ಭೂಕಂಪ ಆಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರು ಸಹಜವಾಗಿಯೇ ಭಯಭೀತರಾಗಿದ್ದಾರೆ. ಆದರೆ ಅದಕ್ಕೆ ನಿಖರ ಕಾರಣವನ್ನು ಪತ್ತೆ ಹಚ್ಚಲು ಸರ್ಕಾರ ಈವರೆಗೆ ಮುಂದಾಗಿಲ್ಲ. ಹಾಗಾಗಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಗೀತಾಮಿಶ್ರಾ ಆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದು, ಪಿಐಎಲ್‌ ಅರ್ಜಿಯನ್ನು ಆಲಿಸಿದ ಹಂಗಾಮಿ ಸಿಜೆ ಅಲೋಕ್‌ ಅರಾಧೆ ಅವರಿದ್ದ ವಿಭಾಗೀಯಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು ವಿಶೇಷ ತಂಡ

ಕೊಡಗಿನಲ್ಲಿ ಪದೇಪದೇ ಭೂಕಂಪ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ Read More »

ಇನ್ಮುಂದೆ ರಾತ್ರಿಯೂ ಹಾರಿಸಬಹುದು ತಿರಂಗಾ| ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದ ಸರ್ಕಾರ

ಸಮಗ್ರ ನ್ಯೂಸ್::ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗಾ’ ಅಭಿಯಾನವನ್ನ ಪ್ರಾರಂಭಿಸುವುದರ ಜೊತೆಗೆ, ಭಾರತದ ಧ್ವಜ ಸಂಹಿತೆ 2002ರಲ್ಲಿ ಬದಲಾವಣೆಗಳನ್ನ ತಂದಿದೆ. ಇನ್ಮುಂದೆ ತ್ರಿವರ್ಣ ಧ್ವಜವನ್ನ ಹಗಲು ಮತ್ತು ರಾತ್ರಿ ಸಾರ್ವಜನಿಕರಿಗೆ ಹಾರಿಸಲು ಅನುಮತಿ ನೀಡಲಾಗಿದೆ. ಸ್ವತಂತ್ರ ಭಾರತದ 75ನೇ ವರ್ಷದ ಸ್ಮರಣಾರ್ಥ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರವರೆಗೆ ‘ಹರ್ ಘರ್ ತಿರಂಗಾ’ ಆಚರಿಸಲಾಗುವುದು. ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ,

ಇನ್ಮುಂದೆ ರಾತ್ರಿಯೂ ಹಾರಿಸಬಹುದು ತಿರಂಗಾ| ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದ ಸರ್ಕಾರ Read More »

ವಿಶ್ವ ಅಥ್ಲೆಟಿಕ್ಸ್; ರಜತಕ್ಕೆ ಕೊರಳೊಡ್ಡಿದ ನೀರಜ್

ಸಮಗ್ರ ನ್ಯೂಸ್: ವಿಶ್ವ ಆಯತ್ಲೆಟಿಕ್ಸ್‌ ಜಾವೆಲಿನ್‌ ಸ್ಪರ್ಧೆಯಲ್ಲಿ ಭಾರತದ ತಾರೆ ನೀರಜ್ ಚೋಪ್ರಾ ಅವರು ರಜತ ಪದಕಕ್ಕೆ ತೃಪ್ತಿ ಪಟ್ಟರು. ನೀರಜ್ ಗೆ ಪ್ರಬಲ ಸ್ಪರ್ಧೆ ನೀಡಿದ ಆಯಂಡರ್ಸನ್ ಪೀಟರ್ ಮೂರು ಬಾರಿ 90 ಮೀಟರ್ ಗಿಂತ ಹೆಚ್ಚು ಎಸೆದು ಬಂಗಾರದ ಪದಕ ಪಡೆದರು. ಇಂದಿನ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಅವರು ಮೊದಲ ಎಸೆತ ಫೌಲ್, ಎರಡನೇ ಎಸೆತ 82.39, ಮೂರನೇ ಎಸೆತವನ್ನು 86.37, ನಾಲ್ಕನೇ ಎಸೆತ 88.13 ಮತ್ತು ಐದನೇ ಎಸೆತ ಫೌಲ್ ಆಯಿತು.

ವಿಶ್ವ ಅಥ್ಲೆಟಿಕ್ಸ್; ರಜತಕ್ಕೆ ಕೊರಳೊಡ್ಡಿದ ನೀರಜ್ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಗ್ರ ನ್ಯೂಸ್: ಸೂರ್ಯನು ಕರ್ಕರಾಶಿಯನ್ನು ಪ್ರವೇಶಿಸಿದ್ದಾನೆ. ಜುಲೈ 16ರಿಂದಲೇ ಸೂರ್ಯನು ಕರ್ಕ ರಾಶಿಯನ್ನು ಪ್ರವೇಶಿಸಿದ್ದು, ಶನಿಯು ಮಕರ ರಾಶಿಯಲ್ಲಿ ಇದೆ. ಹೀಗಾಗಿ, ಈ ಎರಡು ಗ್ರಹಗಳು ಪರಸ್ಪರ ಮುಖಾಮುಖಿ ಆಗಿರುವುದರಿಂದ ಸಂಸಪ್ತ ಯೋಗವು ರೂಪುಗೊಳ್ಳುತ್ತದೆ. ಈ ಗ್ರಹಗಳು ಪರಸ್ಪರ ಶತ್ರು ಗ್ರಹಗಳಾಗಿವೆ. ಶನಿ ಮತ್ತು ಸೂರ್ಯನ ಈ ಅಶುಭ ಯೋಗದಿಂದ ಕೆಲವು ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಿದ್ರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ಸ್ಕಾರ್ಪಿಯೋ- ಲಾರಿ ನಡುವೆ ಭೀಕರ ಅಪಘಾತ| ಒಂದೇ ಕುಟುಂಬದ 5 ಮಂದಿ‌‌ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಲಾರಿ ಮತ್ತು ಸ್ಕಾರ್ಪಿಯೋ ನಡುವೆ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ‌ ಜಿಲ್ಲೆಯಲ್ಲಿ ‌ನಡೆದಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಸಮೀಪ ಟಾಟಾ ಸ್ಕಾರ್ಪಿಯೋಗೆ ಲಾರಿಯೊಂದು ಡಿಕ್ಕಿಯಾಗಿ ಐವರುಉ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಪ್ಪಳದಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರೆಲ್ಲ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದ ಒಂದೇ

ಸ್ಕಾರ್ಪಿಯೋ- ಲಾರಿ ನಡುವೆ ಭೀಕರ ಅಪಘಾತ| ಒಂದೇ ಕುಟುಂಬದ 5 ಮಂದಿ‌‌ ಸ್ಥಳದಲ್ಲೇ ಸಾವು Read More »

ಜಗತ್ತಿನಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್| ಜಾಗತಿಕ ತುರ್ತುಪರಿಸ್ಥಿತಿ ಘೋಷಿಸಿದ W.H.O

ಸಮಗ್ರ ನ್ಯೂಸ್: ಜಗತ್ತಿನಲ್ಲಿ ಮಂಕಿಪಾಕ್ಸ್ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಗ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಕೊರೊನಾ ತಣ್ಣಗಾಗುವ ಹೊತ್ತಿನಲ್ಲಿ ಮತ್ತೊಂದು ಮಹಾಮಾರಿ ವಕ್ಕರಿಸಿದ್ದು, ಜಗತ್ತು‌ ಬೆಚ್ಚಿಬಿದ್ದಿದೆ. ಜುಲೈ 20ರಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಮಂಕಿಪಾಕ್ಸ್ 72 ದೇಶಗಳ 15,800 ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. ಪಶ್ಚಿಮ ಮತ್ತು ಮಧ್ಯ ಆಫ್ರಿಕನ್ ದೇಶಗಳ ಹೊರಗೆ ಮೇ ತಿಂಗಳ ಆರಂಭದಿಂದ ಮಂಕಿಪಾಕ್ಸ್

ಜಗತ್ತಿನಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್| ಜಾಗತಿಕ ತುರ್ತುಪರಿಸ್ಥಿತಿ ಘೋಷಿಸಿದ W.H.O Read More »

ಮಂಗಳೂರು: ಪೇಸ್ ಬುಕ್ ನಲ್ಲಿ ಮಂಗಳಮುಖಿಯನ್ನು ಹುಡುಗನೆಂದು ಪ್ರೀತಿಸಿದ ಯುವತಿ; ಕೊನೆಗೆ ಆಗಿದ್ದೇನು?

ಸಮಗ್ರ ನ್ಯೂಸ್: ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನ್ನು ಪ್ರೀತಿಸಿದ ಯುವತಿ ನಂತರ ಆತ ಮಂಗಳಮುಖಿ ಎಂದು ತಿಳಿದು ಆಘಾತಕ್ಕೆ ಒಳಗಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಸಮೀಪದ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಯುವತಿಗೆ 4 ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ಆತನ ಮುಖ ನೋಡದೆ ಇದ್ದರೂ, ಆತನ ಪ್ರೀತಿಯ ಮಾತಿಗೆ ಮರುಳಾಗಿ ಯುವತಿ ಪ್ರೇಮಪಾಶಕ್ಕೆ ಸಿಲುಕಿದ್ದಳು. ಆತ ದಿನ ಕರೆ ಮಾಡಿ ಮದುವೆಯಾಗುವುದಾಗಿ

ಮಂಗಳೂರು: ಪೇಸ್ ಬುಕ್ ನಲ್ಲಿ ಮಂಗಳಮುಖಿಯನ್ನು ಹುಡುಗನೆಂದು ಪ್ರೀತಿಸಿದ ಯುವತಿ; ಕೊನೆಗೆ ಆಗಿದ್ದೇನು? Read More »

ಮಂಗಳೂರು: ಕಿಸ್ಸಿಂಗ್ ವಿಡಿಯೋ ಪ್ರಕರಣ; ಮತ್ತೆ 3 ವಿದ್ಯಾರ್ಥಿಗಳ ವಿಚಾರಣೆ

ಸಮಗ್ರ ನ್ಯೂಸ್: ಮಂಗಳೂರು ನಗರದ ಬಾವುಟಗುಡ್ಡೆ ಸಮೀಪದ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ ಎನ್ನಲಾದ ವಿದ್ಯಾರ್ಥಿಗಳ ಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೆ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿದ್ಯಾರ್ಥಿನಿಯರ ಜತೆ ವಿದ್ಯಾರ್ಥಿಗಳು ಅಶ್ಲೀಲವಾಗಿ ವರ್ತಿಸಿದ್ದಲ್ಲದೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದು, 3 ಪೋಕ್ಸೊ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 8 ಮಂದಿಯನ್ನು ವಶಕ್ಕೆ ಪಡೆದಂತಾಗಿದೆ. ಪ್ರಕರಣ ಮಹಿಳಾ ಠಾಣೆಯಿಂದ ನಗರ ಅಪರಾಧ ಪತ್ತೆದಳ(ಸಿಸಿಬಿ)ಕ್ಕೆ ವರ್ಗಾವಣೆಯಾಗಿದ್ದು,

ಮಂಗಳೂರು: ಕಿಸ್ಸಿಂಗ್ ವಿಡಿಯೋ ಪ್ರಕರಣ; ಮತ್ತೆ 3 ವಿದ್ಯಾರ್ಥಿಗಳ ವಿಚಾರಣೆ Read More »

ಸ್ಯಾಂಡಲ್ ವುಡ್ ನಟ ಅರ್ಜುನ್ ಸರ್ಜಾ ಅವರ ತಾಯಿ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ಸೇರಿದಂತೆ ವಿವಿಧ ಭಾಷಾ ಚಿತ್ರಗಳ ಮೂಲಕ ಬಹುಭಾಷಾ ನಟರಾಗಿ ಗುರ್ತಿಸಿಕೊಂಡಿರುವಂತ ನಟ ಅರ್ಜುನ್ ಸರ್ಜಾ  ಅವರ ತಾಯಿ, ಇಂದು ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ(85) ಅವರು, ಅನಾರೋಗ್ಯದಿಂದಾಗಿ ನಗರದ ಅಪೊಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಶಕ್ತಿ ಪ್ರಸಾದ್ ಅವರ ಪತ್ನಿಯಾಗಿದ್ದಂತ ಲಕ್ಷ್ಮೀದೇವಿ ಅವರು, ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದರು. ಅವರು ನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಇಂದು ಚಿಕಿತ್ಸೆ

ಸ್ಯಾಂಡಲ್ ವುಡ್ ನಟ ಅರ್ಜುನ್ ಸರ್ಜಾ ಅವರ ತಾಯಿ ನಿಧನ Read More »