ಕಾರ್ಕಳ: ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾ.ಕಚೇರಿ ಸಿಬ್ಬಂದಿ
ಸಮಗ್ರ ನ್ಯೂಸ್ : ಕಾರ್ಕಳ ತಾಲೂಕು ಕಚೇರಿ ಸಿಬ್ಬಂದಿ ಸುಶ್ಮಿತಾ (24) ಎಂಬವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಡ್ಕೊ ಕಾಲನಿ ನಿವಾಸಿಯಾಗಿದ್ದ ಸುಶ್ಮಿತಾ ನಿನ್ನೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ಮೃತರು ತಂದೆ, ತಾಯಿ, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಕಚೇರಿಯಲ್ಲಿ ಉತ್ತಮ ಸಿಬ್ಬಂದಿ ಎಂಬ ಹೆಸರು ಸಂಪಾದಿಸಿದ್ದ ಈಕೆ ಶಾಲಾ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಪ್ರತಿಭೆ ಆಧಾರದಲ್ಲಿ ಸರಕಾರಿ ನೌಕರಿ ಪಡೆದುಕೊಂಡಿದ್ದರು. ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ.
ಕಾರ್ಕಳ: ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾ.ಕಚೇರಿ ಸಿಬ್ಬಂದಿ Read More »