July 2022

ಕಲುಷಿತ ನೀರು ಸೇವನೆಯಿಂದ ಬಾಲಕಿ ಸಾವು; 20 ಮಂದಿ ಆಸ್ಪತ್ರೆ ದಾಖಲು

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಗೊನಾಳ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 11 ವರ್ಷದ ಬಾಲಕಿ ಮೃತಪಟ್ಟಿದ್ದು, 20 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಲಷಿತ ನೀರು ಕುಡಿದ ನಂತರ ಕೆಲವು ಜನರು ಬೇಧಿ, ವಾಂತಿ ಮತ್ತಿತರ ಲಕ್ಷಣಗಳ ಬಗ್ಗೆ ದೂರು ನೀಡಿದ ಬಳಿಕ ಎರಡು ದಿನಗಳ ನಂತರ ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ. ಕಂಪ್ಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸುಕನ್ಯಾ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾಳೆ. ಆರೋಗ್ಯಾಧಿಕಾರಿಗಳು ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಗಾಗಿ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. ನರಿಹಾಲ ಹೊಳೆ […]

ಕಲುಷಿತ ನೀರು ಸೇವನೆಯಿಂದ ಬಾಲಕಿ ಸಾವು; 20 ಮಂದಿ ಆಸ್ಪತ್ರೆ ದಾಖಲು Read More »

ಟ್ರಕ್ ಮತ್ತು ಪೋಲಿಸ್ ವಾಹನ ಡಿಕ್ಕಿ; ಎರಡು ಪೋಲಿಸ್ ಕಾನ್ಸ್ ಟೇಬಲ್ ಸಾವು

ಉತ್ತರಪ್ರದೇಶ: ಟ್ರಕ್‌ ಮತ್ತು ಪೊಲೀಸ್‌ ವಾಹನ ಡಿಕ್ಕಿ ಹೊಡೆದು, ಇಬ್ಬರು ಪೊಲೀಸ್‌ ಕಾನ್ಸ್‌ಟೇಬಲ್‌ ಸಾವನ್ನಪ್ಪಿದ ಘಟನೆಯೊಂದು ಉತ್ತರಪ್ರದೇಶದ ಸುಲ್ತಾನ್‌ಪುರ ನಗರದ ಬಳಿ ನಡೆದಿದೆ. ಮೃತರನ್ನು ಪೊಲೀಸ್‌ ಕಾನ್ಸ್ ಟೇಬಲ್‌ಗಳಾದ ಮೊಯಿನ್‌ ಖಾನ್‌, ಅರುಣ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ವೇಗವಾಗಿ ವಾಹನ ಚಾಲನೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಟ್ರಕ್ ಮತ್ತು ಪೋಲಿಸ್ ವಾಹನ ಡಿಕ್ಕಿ; ಎರಡು ಪೋಲಿಸ್ ಕಾನ್ಸ್ ಟೇಬಲ್ ಸಾವು Read More »

ಗ್ರಾಮ ಪಂಚಾಯತಿ ಸದಸ್ಯ ರೆಸಾರ್ಟ್ ನಲ್ಲಿ ಅನುಮಾನಾಸ್ಪದ ಸಾವು

ಮೈಸೂರು: ಗ್ರಾಮ ಪಂಚಾಯತಿ ಸದಸ್ಯ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆಯೊಂದು ಮೈಸೂರಿನ ಆರ್‌.ಟಿ.ನಗರದ ಸುಭಿಕ್ಷ ಗಾರ್ಡನ್ಸ್​ನಲ್ಲಿ ನಡೆದಿದೆ. ಸತೀಶ್ (34) ಮೃತ ಗ್ರಾಮ ಪಂಚಾಯತಿ ಸದಸ್ಯ. ಕೆ.ಆರ್.ನಗರ ತಾಲೂಕಿನ ಹಳಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆ ಹಿನ್ನೆಲೆ 11ಕ್ಕೂ ಹೆಚ್ಚು ಸದಸ್ಯರು ರೆಸಾರ್ಟ್‌ಗೆ ಬಂದಿದ್ದರು. ಜವರೇಗೌಡ ಕೊಪ್ಪಲಿನ ನಿವಾಸಿಯಾಗಿರುವ ಸತೀಶ್​ ಕೂಡ ರೆಸಾರ್ಟ್​ಗೆ ಬಂದಿದ್ದರು. ಸತೀಶ್ ಕಾಂಗ್ರೆಸ್ ಪಕ್ಷ ಬೆಂಬಲದಿಂದ ಗೆದ್ದಿದ್ದರು. ಜೆಡಿಎಸ್‌ನಿಂದ ಗೆದ್ದಿದ್ದ ದಿನೇಶ್ ಅಧ್ಯಕ್ಷರಾಗಲು 11 ಸದಸ್ಯರನ್ನು ಪ್ರವಾಸ ಕಳುಹಿಸಿದ್ದರು. ಈ ಸದಸ್ಯರು ಕಳೆದ 20

ಗ್ರಾಮ ಪಂಚಾಯತಿ ಸದಸ್ಯ ರೆಸಾರ್ಟ್ ನಲ್ಲಿ ಅನುಮಾನಾಸ್ಪದ ಸಾವು Read More »

ಗಂಡ ಹೆಂಡತಿ ಜಗಳ ; ಗಂಡನ ಸಾವಿನಲ್ಲಿ ಅಂತ್ಯ

ನೆಲಮಂಗಲ: ರಸ್ತೆಯಲ್ಲಿ ಕೆಟ್ಟುನಿಂತ ಕ್ಯಾಂಟರ್ ವಾಹನಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ವೀವರ್ಸ್ ಕಾಲೋನಿಯ ಗೋಪಿ ವೆಂಕಟೇಶ್ವರ ರಸ್ತೆಯಲ್ಲಿ ನಡೆದಿದೆ. ತಡರಾತ್ರಿ ಪತಿ ಪತ್ನಿ ಜಗಳ ನಡುವೆ ಪತಿಯ ಸಾವಿನಲ್ಲಿ ಅಂತ್ಯಗೊಂಡಿದೆ. ರಾಯಚೂರು ಮೂಲದ 42 ವರ್ಷ ಸಿದ್ಧಯ್ಯ ಮೃತ ದುರ್ದೈವಿ. ಈತ ನೆಲಮಂಗಲದ ಕುವೆಂಪು ನಗರದಲ್ಲಿ ವಾಸ, ಚಾಲಕನಾಗಿ ಕೆಲಸ ನಿರ್ವಹಣೆ ಮಾಡಿಕೊಂಡಿದ್ದನು. ತಡರಾತ್ರಿ ಮದ್ಯಸೇವಿಸಿ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಇದರಿಂದ ಬೆಳಗಿನ ಜಾವ 4 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿರುವುದು

ಗಂಡ ಹೆಂಡತಿ ಜಗಳ ; ಗಂಡನ ಸಾವಿನಲ್ಲಿ ಅಂತ್ಯ Read More »

ಮಡಿಕೇರಿ: ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಹತ್ತನೇ ತರಗತಿ ವಿದ್ಯಾರ್ಥಿನಿ

ಸಮಗ್ರ ನ್ಯೂಸ್: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿಯ ಸುಂಟಿಕೊಪ್ಪ ಗ್ರಾಮದ ಸಮೀಪದ ಎಮ್ಮೆಗುಂಡಿ ಎಂಬಲ್ಲಿ ನಡೆದಿದೆ. ಸುಂಟಿಕೊಪ್ಪ ಗ್ರಾಮದ ಸಮೀಪದ ಎಮ್ಮೆಗುಂಡಿ ತೋಟದ ಕಾರ್ಮಿಕ ಅಣ್ಣು ಅವರ ಪುತ್ರಿ ಹರ್ಷಿತಾ (16) ಮೃತ ವಿದ್ಯಾರ್ಥಿನಿ. ಈಕೆ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಹರ್ಷಿತಾ ನಿನ್ನೆ ಶಾಲೆಗೆ ಹೋಗದೇ ಓದಿಕೊಳ್ಳಲೆಂದು ತೋಟದ ಲೈನ್ ಮನೆಯಲ್ಲಿ ಉಳಿದುಕೊಂಡಿದ್ದಳು ಎನ್ನಲಾಗಿದೆ. ಮನೆಯವರು ಕೆಲಸಕ್ಕೆ ಹೋಗಿದ್ದು, ಸಂಜೆ ಹಿಂತಿರುಗಿ ಬಂದು

ಮಡಿಕೇರಿ: ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಹತ್ತನೇ ತರಗತಿ ವಿದ್ಯಾರ್ಥಿನಿ Read More »

ಬೆತ್ತಲೆ‌ ಫೋಟೋಶೂಟ್; ಬಾಲಿವುಡ್ ನಟ ರಣ್ವೀರ್ ಸಿಂಗ್ ಮೇಲೆ ಕೇಸ್ ದಾಖಲು

ಸಮಗ್ರ ನ್ಯೂಸ್: ಬಾಲಿವುಡ್ ಖ್ಯಾತ ನಟ, ಕರ್ನಾಟಕದ ಅಳಿಯ ರಣವೀರ್ ಸಿಂಗ್ ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು ಅಚ್ಚರಿಗೆ ಕಾರಣವಾಗಿದ್ದರು. ಸದಾ ಮೈ ತುಂಬಾ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ರಣವೀರ್, ಇದ್ದಕ್ಕಿದ್ದಂತೆಯೇ ಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡು ಕುತೂಹಲಕ್ಕೂ ಕಾರಣವಾಗಿದ್ದರು. ಈ ಕಾರಣಕ್ಕಾಗಿ ಇದೀಗ ಅವರ ಮೇಲೆ ದೂರು ದಾಖಲಾಗಿದೆ. ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡು, ಸಮಾಜ ಸ್ವಾಸ್ತ್ಯವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ದೂರು ದಾಖಲಿಸಲಾಗಿದ್ದು, ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ

ಬೆತ್ತಲೆ‌ ಫೋಟೋಶೂಟ್; ಬಾಲಿವುಡ್ ನಟ ರಣ್ವೀರ್ ಸಿಂಗ್ ಮೇಲೆ ಕೇಸ್ ದಾಖಲು Read More »

ಮಾದಕ ವ್ಯಸನಿ ಪುತ್ರನ ಕತ್ತರಿಸಿ‌ ಕೊಂದ ತಂದೆ

ಸಮಗ್ರ ನ್ಯೂಸ್: ಮಾದಕ ವ್ಯಸನಿಯಾಗಿದ್ದ ಪುತ್ರನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಚೆಲ್ಲಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತಿನ ಅಹ್ಮದಾಬಾದ್ ನಿವಾಸಿ ನೀಲೇಶ್ ಜೋಶಿ(65) ಬಂಧಿತ ಆರೋಪಿ. ಈತನ ಪುತ್ರ ಸ್ವಯಂ ಜೋಶಿ(21) ಕೊಲೆಯಾದ ದುರ್ದೈವಿ. ಮಾದಕ ವ್ಯಸನದ ದಾಸನಾಗಿದ್ದ ಸ್ವಯಂ ಜೋಶಿ ಮದ್ಯ ಸೇವಿಸಲು ಹಣ ಕೊಡುವಂತೆ ಪೀಡಿಸಿದಾಗ ಕೋಪಗೊಂಡ ತಂದೆ ರುಬ್ಬು ಗುಂಡಿನಿಂದ ಹೊಡೆದು ಮಗನನ್ನು ಹತ್ಯೆ ಮಾಡಿದ್ದಾನೆ. ನಂತರ ಎಲೆಕ್ಟ್ರಿಕ್ ಕಟರ್ ನಿಂದ ತುಂಡಾಗಿ ದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಬೇರೆ

ಮಾದಕ ವ್ಯಸನಿ ಪುತ್ರನ ಕತ್ತರಿಸಿ‌ ಕೊಂದ ತಂದೆ Read More »

ಜು.27ರಿಂದ ಮತ್ತೆ ರಾಜ್ಯಾದ್ಯಂತ ಮಳೆ‌ ಅಬ್ಬರ| ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಸಮಗ್ರ ನ್ಯೂಸ್: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ನಾಳೆಯಿಂದ ಮತ್ತೆ ಮಳೆಯ ಅಬ್ಬರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ, ಮಲೆನಾಡು, ಬೆಂಗಳುರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ನಾಳೆಯಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಕೆ ಮಾಹಿತಿ ನೀಡಿದೆ. ಕರಾವಳಿಯ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಕಲಬುರ್ಗಿ, ಬೀದರ್,

ಜು.27ರಿಂದ ಮತ್ತೆ ರಾಜ್ಯಾದ್ಯಂತ ಮಳೆ‌ ಅಬ್ಬರ| ಹವಾಮಾನ ಇಲಾಖೆಯಿಂದ ಮುನ್ಸೂಚನೆ Read More »

ಕಾರ್ಗಿಲ್ ವಿಜಯ ದಿವಸ್| ಮರೆಯಲಾಗದ ಆ ನೆನಪುಗಳು

ಸಮಗ್ರ ನ್ಯೂಸ್: ಇಂದು (ಜು.26) ಕಾರ್ಗಿಲ್ ವಿಜಯ ದಿವಸ, ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತದ ಯೋಧರನ್ನು ಇಡೀ ದೇಶವೇ ಗೌರವಿಸುವ ದಿನ. ಈ ದಿನದಂದು ಕಾರ್ಗಿಲ್ ಯುದ್ಧದ ಇತಿಹಾಸ, ಮಹತ್ವ ಮತ್ತು ಸ್ಮರಣಾರ್ಥಗಳ ಬಗ್ಗೆ ನೋಡೋಣ.ಯಾಕೆಂದರೆ ಇದು ಇಡೀ ದೇಶವೇ ಹೆಮ್ಮೆ ಪಡುವ ದಿವಸ. 1999ರ ಇದೇ ದಿನದಂದು ಪಾಕಿಸ್ತಾನದ ವಿರುದ್ಧ ಕಾರ್ಗಿಲ್​ನಲ್ಲಿ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ದಿವಸವಿದು. ಇದರ ನೆನಪಿಗಾಗಿ ಪ್ರತಿ ವರ್ಷ ಜು.26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.

ಕಾರ್ಗಿಲ್ ವಿಜಯ ದಿವಸ್| ಮರೆಯಲಾಗದ ಆ ನೆನಪುಗಳು Read More »

ಮಂಗಳೂರು: ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಮೋಜು ಮಸ್ತಿ| ಕುಡಿದು ತೂರಾಟದಲ್ಲಿ ತೊಡಗಿದ್ದ ಯುವಕ-ಯುವತಿಯರು!

ಸಮಗ್ರ ನ್ಯೂಸ್: ಪಬ್ ನಲ್ಲಿ ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದ ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯರ ಗುಂಪನ್ನು ತಡೆದ ಬಜರಂಗದಳದ ಕಾರ್ಯಕರ್ತರು ಪಾರ್ಟಿಯಿಂದ ಹೊರ ಕಳುಹಿಸಿರುವ ಘಟನೆ ಜು.25ರ ತಡರಾತ್ರಿ ನಡೆದಿದೆ. ಮಂಗಳೂರಿನ ಬಲ್ಮಠದಲ್ಲಿರುವ ರಿ-ಸೈಕಲ್ ದಿ ಲಾಂಜ್ ಪಬ್ ನಲ್ಲಿ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದರು ಎನ್ನಲಾಗಿದೆ. ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ ನಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಕುಡಿತ, ಮೋಜು –

ಮಂಗಳೂರು: ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಮೋಜು ಮಸ್ತಿ| ಕುಡಿದು ತೂರಾಟದಲ್ಲಿ ತೊಡಗಿದ್ದ ಯುವಕ-ಯುವತಿಯರು! Read More »