ಸಮಗ್ರ ನ್ಯೂಸ್: ಉಡುಪಿಯ ಕಾಪುವಿನಲ್ಲಿ ಬಜರಂಗದಳ ಪ್ರಮುಖನ ಮನೆಗೆ ಆಯುಧದೊಂದಿಗೆ ಮುಸ್ಲಿಂ ಯುವಕರು ಆಗಮಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಕಾಪು ಬಜರಂಗದಳದ ಪ್ರಮುಖ ಸುಧೀರ್ ಸೋನಾ ಮನೆಗೆ ಇಂದು ಬೆಳಿಗ್ಗೆ ಆಯುಧ ದೊಂದಿಗೆ ಮೂವರಿಂದ ನಾಲ್ಕು ಮಂದಿ ಯುವಕರು ಬಂದಿದ್ದರು ಎನ್ನಲಾಗಿದೆ.
‘ಆಶಿಫ್’ ಎಂಬವರಿಗೆ ನಿಮ್ಮ ಬಳಿ ಮಾತನಾಡಲು ಇದೆ ಎಂದು ಮನೆಯಿಂದ ಹೊರಗೆ ಬರುವಂತೆ ಹೇಳಿದ ಇಬ್ಬರು ಬಳಿಕ ಆಶಿಫ್ ಅವರು ಮೇಲೆ ಕಾರಿನಲ್ಲಿ ಇದ್ದಾರೆ, ನೀವು ಅವರಿಗೆ ನಿಮ್ಮ ಬಳಿ ಮಾತನಾಡಲು ಇದೆಯಂತೆ, ನೀವು ಈಗಲೇ ಬರಬೇಕು ಎಂದು ಇಬ್ಬರು ಯುವಕರು ಸುಧೀರ್ ಅವರಿಗೆ ನಗುತ್ತಲೇ ಹೇಳಿದ್ದರು ಎನ್ನಲಾಗಿದೆ. ಯುವಕರ ಮಾತಿನಿಂದ ಅನುಮಾನಗೊಂಡು ಸುಧೀರ್ ಸೋನಾ ಮನೆಯಿಂದ ಹೊರಹೋಗಿರಲಿಲ್ಲ. ಈ ವೇಳೆ ಯುವಕರು ಸುಧೀರ್ ಮನೆಯಿಂದ ಹಿಂತಿರುಗುವ ವೇಳೆ ಯುವಕರ ಬಳಿ ಹರಿತವಾದ ಆಯುಧ ಇರುವುದು ಸುಧಿರ್ ಮತ್ತವರ ಪತ್ನಿಯ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ತಕ್ಷಣವೇ ಸುಧೀರ್ ಸೋನು ಪೋಲಿಸರಿಗೆ ಮಾಹಿತಿ ನೀಡಿದ್ದು, ಕಾರಿನಲ್ಲಿ ಇದ್ದ ಎಲ್ಲರನ್ನು ಪತ್ತೆ ಮಾಡಿ ಕಾಪು ಪೋಲಿಸರು ವಿಚಾರಣೆ ನಡೆಸಿದ್ದು, ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.