Ad Widget .

SDPI ಮತ್ತು PFI ಬಿಜೆಪಿಯ ಬಿ ಟೀಮ್, ಕಾಂಗ್ರೆಸ್ ಬ್ಯಾನ್ ಮಾಡಿ ಅಂದ್ರೂ ಯಾಕೆ ಮಾಡಲ್ಲ? – ಬಿಜೆಪಿ ವಿರುದ್ಧ ತಿರುಗಿ ಬಿದ್ದ ಮುತಾಲಿಕ್

ಸಮಗ್ರ ನ್ಯೂಸ್: ‘ಎಸ್ ಡಿಪಿಐ, ಪಿಎಫ್ ಐ ಬಿಜೆಪಿಯ ‘ಬಿ’ ಟೀಮ್, ಕಾಂಗ್ರೆಸ್ ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Ad Widget . Ad Widget .

ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇದ್ದಾಗ ಎಸ್ ಡಿಪಿಐ, ಪಿಎಫ್‌ಐ ಉಗ್ರ ಸಂಘಟನೆ ಜೊತೆ ಕೈಜೋಡಿಸಿದೆ. ಅದನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದರು. ಆದರೆ, ಈಗ ಕಾಂಗ್ರೆಸ್ ನವರು ಬ್ಯಾನ್ ಮಾಡುವಂತೆ ಹೇಳಿದರೂ, ರಾಜ್ಯ ಬಿಜೆಪಿ ಸರ್ಕಾರ ಕೇಂದ್ರಕ್ಕೆ ದಾಖಲೆ ಒದಗಿಸುವ ಕೆಲಸ ಮಾಡುತ್ತಿಲ್ಲ ಎಂದು ಗುಡುಗಿದರು.

Ad Widget . Ad Widget .

ಬಿಜೆಪಿಗರಿಗೆ ಹೊಗಳುವವರು, ಲೂಟಿಕೋರರಿಗೆ ಸಹಾಯ ಮಾಡುವವರು, ಜಾತಿವಾದಿಗಳು ಬೇಕಾಗಿದ್ದಾರೆ. ಅದಕ್ಕೆ ನಾನು ಮನ್ನಣೆ ಕೊಡುತ್ತಿಲ್ಲ. ಹಾಗಾಗಿ ನನ್ನನ್ನು ಕಂಡರೆ ಅವರಿಗೆ ಭಯ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 20 ಜಿಲ್ಲೆಗಳಲ್ಲಿ ನನಗೆ ಪ್ರವೇಶಿಸಲು ನಿರ್ಬಂಧ ಹಾಕಿದ್ದಾರೆ. ನಿಮ್ಮ ಸರ್ಕಾರ ಇರುವಾಗಲೇ ಕಾರ್ಯಕರ್ತನ ಕೊಲೆ ಆಗಿದೆ. ನೀವೇ ಕೊಲೆಗಡುಕರು ಎಂದು ವಾಗ್ದಾಳಿ ನಡೆಸಿದರು.

Leave a Comment

Your email address will not be published. Required fields are marked *